

ಚಿತ್ರದುರ್ಗ: ಜಿಲ್ಲೆಗೆ ಫೆಬ್ರವರಿ 26ರಂದು ಆಗಮಿಸಲಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರ್ ನೇತೃತ್ವದ ಪಂಚರತ್ನ ರಥಯಾತ್ರೆ ಯಶ ಸ್ಸಿಗೆ ಪಕ್ಷದ ಕಾರ‌್ಯಕರ್ತರು,ಮುಖಂಡರು ಸಂಘಟಿತರಾಗಿ ಶ್ರಮಿಸ ಬೇಕೆಂದು ಪಕ್ಷದ ವೀಕ್ಷಕ ಶರಣಪ್ಪ ಕುಂಬಾರ್ ಹೇಳಿದರು.
ಯಾತ್ರೆ ಹಿನ್ನೆಲೆ ಪಕ್ಷದ ಜಿಲ್ಲಾ ಕಚೇರಿ ಎಚ್.ಡಿ.ದೇವೇಗೌಡ ಭವನದಲ್ಲಿ ಸೋಮವಾರ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಮಾ ತನಾಡಿ,ಈ ಯಾತ್ರೆ ವಿರೋಧಿಗಳಲ್ಲಿ ನಡುಕವನ್ನುಂಟು ಮಾಡಿದೆ. ರಾಜ್ಯದಲ್ಲಿ ಈ ಬಾರಿ ಜೆಡಿಎಸ್ ಅಧಿಕಾರ ಹಿಡಿಯ ಬೇಕಾಗಿದೆ. ಆದ್ದರಿಂದ ಕುಮಾರಸ್ವಾಮಿ ಅವರ ಅಧಿಕಾರಾವಧಿ ಜಾರಿಗೊಳಿಸಿರುವ ಹಲವು ಜನರ ಯೋಜನೆಗಳನ್ನು ಕಾರ‌್ಯಕರ್ತರು ಜನರ ಮನೆ,ಮನೆಗೆ ತಲುಪಿಸ ಬೇಕು ಎಂದರು.
ವೀಕ್ಷಕ ಪಾತಣ್ಣ ಮಾತನಾಡಿ,ಕೋಲಾರದಿಂದ ಆರಂಭಗೊಂಡಿರುವ ಯಾತ್ರೆ ಸ್ವಾಗತಕ್ಕೆ ಕಾರ‌್ಯಕರ್ತರು ಸಜ್ಜಾಗಬೇಕೆಂದರು. ಟಿಕೆಟ್ ಹಂಚಿಕೆಯಲ್ಲಿ ಪಕ್ಷಕ್ಕೆ ದುಡಿದವರಿಗೆ ಆದ್ಯತೆ ನೀಡಲಾಗುವುದು. ವಿಧಾನಸಭಾ ಚುನಾವಣೆಯಲ್ಲಿ 123 ಸೀಟುಗಳನ್ನು ಗೆಲ್ಲುವ ಗುರಿ ಇದೆ ಎಂದರು.
ವೀಕ್ಷಕಿ ತಹೆರ ಖುಲ್ಸುಂ ಮಾತನಾಡಿ,ಪಕ್ಷದ ಜನತಾ ಜಲಧಾರೆ ಯಶಸ್ವಿಯಾಗಿದೆ. ಪಂಚರತ್ನ ರಥಯಾತ್ರೆ ಹಳ್ಳಿ,ಹಳ್ಳಿಯಲ್ಲಿ ಸಂಚರಿಸುತ್ತಿದೆ. ಟಿಕೆಟ್ ವಿಚಾರದಲ್ಲಿ ಗೊಂದಲ ಬೇಡವೆಂದರು.ಪಕ್ಷದ ಜಿಲ್ಲಾಧ್ಯಕ್ಷ ಡಿ.ಯಶೋಧರ ಮಾತನಾಡಿ,ಯಾತ್ರೆ ಯಶಸ್ಸಿಗೆ ತಕ್ಷಣದಿಂದ ಸಿದ್ಧತೆಗಳನ್ನು ಪ್ರಾರಂಭಿಸಲಾಗುವುದೆಂದರು.
ಪಕ್ಷದ ರಾಜ್ಯಉಪಾಧ್ಯಕ್ಷ ಬಿ.ಕಾಂತರಾಜ್,ಜೆ.ಬಿ.ಶೇಖರ್,ಡಿ.ಗೋಪಾಲಸ್ವಾಮಿ ನಾಯಕ,ವಿ.ಗೀತಾ,ತಿಮ್ಮಣ್ಣ,ಲಲಿತಾ ಕೃಷ್ಣಮೂರ್ತಿ, ತಿಪ್ಪೇಸ್ವಾಮಿ, ಎಂ.ಜಯಣ್ಣ, ತಿಪ್ಪೇಸ್ವಾಮಿ,ಹನುಮಂತರಾಯ,ಶಂಕರಮೂರ್ತಿ, ಬ್ಯಾಲಹಾಳ್ ಶರಣಪ್ಪಗೌಡ, ಪರಮೇಶ್ವರಪ್ಪ, ಗಣೇಶ್ ಕುಮಾರ್, ಒ.ಪ್ರತಾಪ್‌ಜೋಗಿ, ಅಶೋಕ್‌ಬೆಳಗಟ್ಟ, ಎನ್.ಚಂದ್ರಶೇಖರ್,ನೇತ್ರಾವತಿ ದೇವರಾಜ್,ಜಿ.ರಾಧಾ ಮತ್ತಿತರರು ಇದ್ದರು.