

ಬೆಳ್ತಂಗಡಿ: ಜೆಸಿಐ ಬೆಳ್ತಂಗಡಿ ವತಿಯಿಂದ ತಾಲೂಕಿನ ಐವರು ಸಾಧಕ ಮಹಿಳೆಯರಿಗೆ ಪಂಚರತ್ನ ಪುರಸ್ಕಾರ ನೀಡಿ ಗೌರವಿಸಲಾಯಿತು.
ಮಂಗಳೂರು ಅಬಕಾರಿ ಉಪವಿಭಾಗದ ಉಪವರಿಷ್ಠಾಧಿಕಾರಿ ಸೌಮ್ಯಲತಾ ಎನ್.ಸಾಧಕಿಯರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, ಮಹಿಳೆಯರಿಗೆ ಸಿಗುವ ಇಂದಿನ ಅವಕಾಶಗಳು ಹಾಗೂ ಸಾಧನೆಗೆ ಯಾವ ನೆಪಗಳು ಅಡ್ಡಿಯಲ್ಲ. ಇಚ್ಛಾಶಕ್ತಿ ಒಂದಿದ್ದರೆ ಮಹಿಳೆ ಏನನ್ನೂ ಸಾಧಿಸಬಲ್ಲಳು ಎಂದರು.
ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ಲಾಲ ಗ್ರಾಮದ ರಾಷ್ಟ್ರೀಯ ಅಥ್ಲೆಟಿಕ್ ಚಂದ್ರಿಕ, ತಾಲೂಕಿನ ನಾಟಿವೈದ್ಯೆ ಸುದರ್ಶನ, ಆಟೊ ಚಾಲಕಿ ಶಾಂತಿ ಪಾಯ್ಸ, ಉರಗರಕ್ಷಕಿ ಶೋಭ ಯಾನೆ ಆಶಾ ಕುಪ್ಪೆಟ್ಟಿ, ಯುವ ಉದ್ಯಮಿ ಶ್ರೇಯಾ ಶೆಟ್ಟಿ ಪಂಚತಾರ ಪ್ರಶಸ್ತಿ ಸ್ವೀಕರಿಸಿದರು.
ಜೆಸಿಐ ಬೆಳ್ತಂಗಡಿ ಅಧ್ಯಕ್ಷೆ ಜೇಸಿ ಆಶಾಲತಾ ಪ್ರಶಾಂತ್ ಅಧ್ಯಕ್ಷತೆ ವಹಿಸಿದ್ದರು. ಲಯನ್ಸ್ ಕ್ಲಬ್ ಅಧ್ಯಕ್ಷ ದೇವದಾಸ್ ಶೆಟ್ಟಿ, ಮಹಿಳಾ ಮಂಡಲಗಳ ಒಕ್ಕೂಟ ಅಧ್ಯಕ್ಷೆ ಸವಿತಾ ಜಯದೇವ, ಬ್ಯೂಟಿ ಪಾರ್ಲರ್ ಅಸೋಸಿಯೇಶನ್ ಅಧ್ಯಕ್ಷೆ ರಶ್ಮಿತಾ ಆಳ್ವಾ, ಕಾರ್ಯಕ್ರಮ ಸಂಯೋಜಕಿ ಪವಿತ್ರ ಚಿದಾನಂದ ಉಪಸ್ಥಿತರಿದ್ದರು. ಮಹಿಳಾ ಜೇಸಿ ಸಂಯೋಜಕಿ ಜೇಸಿ ಚಿತ್ರಫ್ರಭ ಸಭೆಗೆ ವಂದಿಸಿದರು.