ಪಂಚಪ್ರಾಣ ಪ್ರತಿಜ್ಞೆ ಆಯೋಜನೆ

YODHA
ಕಂಪ್ಲಿ ಪುರಸಭೆ ಸಭಾಂಗಣದಲ್ಲಿ ನನ್ನ ಮಣ್ಣು ನನ್ನ ದೇಶ ಅಭಿಯಾನದಲ್ಲಿ ನಿವೃತ್ತ ಸೈನಿಕರಾದ ಪತ್ರಿ ಮಂಜುನಾಥ, ತಿರುಮಲ, ನಿವೃತ್ತ ಎಎಸ್‌ಐ ಹಗರಪ್ಪ ಅವರನ್ನು ಸನ್ಮಾನಿಸಲಾಯಿತು. ಪುರಸಭೆ ಮುಖ್ಯಾಧಿಕಾರಿ ಕೆ.ದುರುಗಣ್ಣ, ತಹಸೀಲ್ದಾರ್ ಗೌಸಿಯಾಬೇಗಮ್, ಪುರಸಭೆ ಮಾಜಿ ಅಧ್ಯಕ್ಷೆ ಶಾಂತಲಾ ವಿ.ವಿದ್ಯಾಧರ, ಸದಸ್ಯ ಟಿ.ವಿ.ಸುದರ್ಶನರೆಡ್ಡಿ ಇತರರಿದ್ದರು.
Published on

ಕಂಪ್ಲಿ: ಜನರಿಗೆ ದೇಶಪ್ರೇಮದೊಂದಿಗೆ ಪರಿಸರ ಪ್ರೇಮ ಜಾಗೃತಿಗೊಳಿಸುವಲ್ಲಿ ನನ್ನ ಮಣ್ಣು ನನ್ನ ದೇಶ ಅಭಿಯಾನ ಮಾದರಿಯಾಗಿದೆ ಎಂದು ಇಲ್ಲಿನ ಪುರಸಭೆ ಮುಖ್ಯಾಧಿಕಾರಿ ಕೆ.ದುರುಗಣ್ಣ ಹೇಳಿದರು.

ರಾಷ್ಟ್ರಧ್ವಜಾರೋಹಣ

ಪುರಸಭೆ ಸಭಾಂಗಣದಲ್ಲಿ ನನ್ನ ಮಣ್ಣು ನನ್ನ ದೇಶ ಕಾರ್ಯಕ್ರಮ ನಿಮಿತ್ತ ಸೋಮವಾರ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಸರ್ಕಾರದ ಸೂಚನೆಯಂತೆ ತಾಯಿನಾಡು, ಪರಿಸರ ಪ್ರೇಮವನ್ನು ಸದಾ ಜಾಗೃತಗೊಳಿಸಲು ವಸುಧಾ ವಂದನೆ, ವೀರರಿಗೆ ವಂದನೆ, ಪಂಚಪ್ರಾಣ ಪ್ರತಿಜ್ಞೆ ಹಮ್ಮಿಕೊಂಡಿದೆ ಎಂದರು.

ತಹಸೀಲ್ದಾರ್ ಗೌಸಿಯಾಬೇಗಮ್ ಮಾತನಾಡಿ, ಮಕ್ಕಳಲ್ಲಿ ಸೈನ್ಯ, ಸೈನಿಕರ ಕುರಿತು ಪ್ರಜ್ಞೆ ಮೂಡಿಸುವಲ್ಲಿ ಶಿಕ್ಷಕರು, ಪಾಲರು ಮುಂದಾಗಬೇಕು. ನೆಟ್ಟ ಸಸಿಗಳನ್ನು ನಿರ್ಲಕ್ಷಿಸದೆ ಮರಗಳನ್ನಾಗಿ ಬೆಳೆಸುವ, ಪೋಷಿಸುವ ಹೊಣೆಗಾರಿಕೆಯನ್ನು ಅರ್ಥಮಾಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಸಲಹೆ ನೀಡಿದರು. ನಿವೃತ್ತ ಸೈನಿಕರಾದ ಪತ್ರಿ ಮಂಜುನಾಥ, ತಿರುಮಲ, ನಿವೃತ್ತ ಎಎಸ್‌ಐ ಹಗರಪ್ಪರನ್ನು ಗೌರವಿಸಲಾಯಿತು.

ಐತಿಹಾಸಿಕ ಸೋಮಪ್ಪ ಕೆರೆ ಅಂಗಳದಲ್ಲಿ ಸಸಿಗಳನ್ನು ನೆಟ್ಟು ನೀರೆರೆಯಲಾಯಿತು. ಪಟ್ಟಣದ 23ವಾರ್ಡ್‌ಗಳಿಂದ ಸಂಗ್ರಹಿಸಿದ ಮಣ್ಣನ್ನು ಹಿಡಿದು ಪಂಚಪ್ರಾಣ ಪ್ರತಿಜ್ಞೆ ಸ್ವೀಕರಿಸಲಾಯಿತು. ಲೆಕ್ಕಿಗ ರಮೇಶ ಬೆಳಂಕರ್, ಕೃಷಿ ಅಧಿಕಾರಿ ಶ್ರೀಧರ, ವ್ಯವಸ್ಥಾಪಕ ಮಂಜುನಾಥ, ಕಂದಾಯ ಅಧಿಕಾರಿ ಸುಬ್ಬಣ್ಣ, ಜೆಇಗಳಾದ ಗೋಪಾಲ, ಮೇಘನಾ, ಸಮುದಾಯ ಸಂಘಟನಾಧಿಕಾರಿ ಎಂ.ವಸಂತಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net