

ಕುಶಾಲನಗರ:
ವಿಶ್ವದಲ್ಲಿ ಅತ್ಯಂತ ಹಳೆಯ ಸನಾತನ ಧರ್ಮದ ಪ್ರಕಾರ ಶಾಸ್ತ್ರ, ಸಂಪ್ರದಾಯವನ್ನು ಎಲ್ಲರೂ ಪಾಲಿಸುವಂತೆ ಆಗಬೇಕು ಎಂದು ವಾಸವಿ ದೀಕ್ಷಾ ಸಮಿತಿ ಅಧ್ಯಕ್ಷ ಕೆ.ಜೆ. ಚಿನ್ನಸ್ವಾಮಿ ಹೇಳಿದರು. ಕುಶಾಲನಗರದ ವಾಸವಿ ದೀಕ್ಷಾ ಸಮಿತಿ ನೇತೃತ್ವದಲ್ಲಿ ಆರ್ಯವೈಶ್ಯ ಮಂಡಳಿ ಸಹಯೋಗದಲ್ಲಿ ಬೈಪಾಸ್ ರಸ್ತೆಯ ವಾಸವಿ ಮಹಲ್‌ನಲ್ಲಿ ಈಚೆಗೆ ಏರ್ಪಡಿಸಿದ್ದ ಪಂಚಾAಗ ಕಲಿಕಾ ತರಬೇತಿ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.
ಆರ್ಯವೈಶ್ಯರು ಪಂಚಾAಗ ಮತ್ತು ಕುಂಡಲಿಯ ಮೇಲೆ ಅಪಾರ ಭಕ್ತಿ ಮತ್ತು ನಂಬಿಕೆ ಹೊಂದಿದ್ದೇವೆ. ಅದನ್ನು ಕಲಿಸಲು ಆರ್ಯವೈಶ್ಯ ಮಹಾಸಭಾ ಶಂಕರ್ ಬಾಂಡ್ ನೇತೃತ್ವದಲ್ಲಿ ಒಂದು ತಂಡವನ್ನು ರಚಿಸಿ ದೇಶದ ಯಾವುದೇ ಭಾಗದಲ್ಲಿ ಬೇಕಾದರೂ ತರಬೇತಿ ಕೊಡುತ್ತಿರುವುದನ್ನು ಅರಿತು ನಮ್ಮ ಊರಿನ ಜನರಿಗೂ ಅದರ ಪ್ರಯೋಜನ ದೊರಕಿಸುವ ಸದ್ದುದೇಶದಿಂದಾ ಈ ತರಬೇತಿ ಕಾರ್ಯಗಾರ ಆಯೋಜಿಸಲಾಗಿದೆ ಎಂದರು.
ಕನ್ನಿಕಾ ವಿಎಸ್‌ಎಸ್‌ಎನ್ ಅಧ್ಯಕ್ಷ ಬಿ. ಅಮೃತ್ ರಾಜ್ ಮಾತನಾಡಿ, ಇಂತಹ ಸಣ್ಣಪುಟ್ಟ ಕಾರ್ಯಗಾರಗಳು ಧರ್ಮದ ಉಳಿವಿಗೆ ಕಾರಣವಾಗುತ್ತದೆ. ಆಚರಣೆಗಳ ಬಗ್ಗೆ ಇರುವ ಅನುಮಾನಗಳನ್ನು ನಿವಾರಿಸಿಕೊಳ್ಳುವ ಅವಕಾಶ ದೊರೆಯುತ್ತದೆ ಎಂದು ಹೇಳಿದರು.
ಕೊಡಗು ಜಿಲ್ಲಾ ಆರ್ಯವೈಶ್ಯ ಮಂಡಳಿಯ ಅಧ್ಯಕ್ಷ ಬಿ.ಎಲ್. ಸತ್ಯನಾರಾಯಣ, ಕುಶಾಲನಗರದ ಆರ್ಯವೈಶ್ಯ ಮಂಡಳಿಯ ಉಪಾಧ್ಯಕ್ಷ ಬಿ.ಎಲ್. ಅಶೋಕ್ ಕುಮಾರ್, ಮಹಿಳಾ ಮಂಡಳಿಯ ಅಧ್ಯಕ್ಷೆ ಲಕ್ಷ್ಮೀ ಶ್ರೀನಿವಾಸ್, ಯುವತಿಯರ ಮಂಡಳಿ ಅಧ್ಯಕ್ಷೆ ಅನುಷಾ ಅರ್ಜುನ್, ವಾಸವಿ ದೀಕ್ಷಾ ಸಮಿತಿ ಕಾರ್ಯದರ್ಶಿ ವಾಣಿಶ್ರೀ, ಖಜಾಂಚಿ ಬಿ.ಎಲ್. ಸತೀಶ್, ನಿರ್ದೇಶಕರಾದ ಕೃಷ್ಣಮೂರ್ತಿ, ಕೆ.ಎಸ್. ನಾಗೇಶ್, ನಾಗಮಣಿ ಮತ್ತಿತ್ತರು ಇದ್ದರು.