ಪಂಚಮಸಾಲಿ ವಕೀಲರ ಪರಿಷತ್ ಜೇವರ್ಗಿ ಅಧ್ಯಕ್ಷರಾಗಿ ಪಾಟೀಲ್, ಯಡ್ರಾಮಿ ತಾಲೂಕು ಅಧ್ಯಕ್ಷರಾಗಿ ಸುಬೇದಾರ ಆಯ್ಕೆ

0812KLB03
ಲಿಂಗಾಯತ ದೀಕ್ಷ-ಪಂಚಮಸಾಲಿ ವಕೀಲರ ಪರಿಷತ್ ಜೇವರ್ಗಿ ತಾಲೂಕು ಅಧ್ಯಕ್ಷ ಶರಣಗೌಡ ಪಾಟೀಲ್ ಮತ್ತು ಯಡ್ರಾಮಿ ತಾಲೂಕು ಅಧ್ಯಕ್ಷ ಬಸವರಾಜ ಸುಬೇದಾರ ಅವರನ್ನು ಸನ್ಮಾನಿಸಲಾಯಿತು.
Published on

ಜೇವರ್ಗಿ: ಕರ್ನಾಟಕ ಲಿಂಗಾಯತ ದೀಕ್ಷ-ಪಂಚಮಸಾಲಿ ವಕೀಲರ ಪರಿಷತ್ ಜೇವರ್ಗಿ ಹಾಗೂ ಯಡ್ರಾಮಿ ತಾಲೂಕು ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಜಿಲ್ಲಾ ಪದಾಧಿಕಾರಿಗಳ ಸಮ್ಮುಖದಲ್ಲಿ ನಡೆಯಿತು. ಸಭೆಯಲ್ಲಿದ್ದ ಎಲ್ಲರೂ ಚರ್ಚೆ ನಡೆಸಿ ಒಕ್ಕೊರಲಿನಿಂದ ಜೇವರ್ಗಿಗೆ ಶರಣಗೌಡ ಎಸ್.ಪಾಟೀಲ್ ಮತ್ತು ಯಡ್ರಾಮಿಗೆ ಬಸವರಾಜ ಎಸ್.ಸುಬೇದಾರ ಅವರನ್ನು ತಾಲೂಕು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾಧ್ಯಕ್ಷ ರವೀಂದ್ರ ಬಬಲಾದ ತಿಳಿಸಿದ್ದಾರೆ. ಕಲಬುರಗಿ ಜಿಲ್ಲೆ ಸೇರಿ ರಾಜ್ಯದಲ್ಲಿ ದೀಕ್ಷ-ಪಂಚಮಸಾಲಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಸಂಘಟನೆ ಕೊರತೆಯಿಂದ ಒಗ್ಗೂಡಲು ಆಗುತ್ತಿಲ್ಲ. ಹೀಗಾಗಿ ಸಮಾಜದವರನ್ನು ಒಂದುಗೂಡಿಸಲು ರಾಜ್ಯ ಮಟ್ಟದಲ್ಲಿ ವಕೀಲರ ಪರಿಷತ್ ಅಸ್ತಿತ್ವಕ್ಕೆ ಬಂದಿದ್ದು, ಎಲ್ಲ ತಾಲೂಕು ಘಟಕಗಳಿಗೆ ಪದಾಧಿಕಾರಿಗಳ ನೇಮಕ ಮಾಡಿ ಸಂಘಟನೆಗೆ ಒತ್ತು ನೀಡಲಾಗುತ್ತಿದೆ ಎಂದು ಹೇಳಿದರು. ಹಿರಿಯ ನ್ಯಾಯವಾದಿಗಳಾದ ಬಸವರಾಜ ಕಂದಗಲï, ಸೋಮಶೇಖರ ಸರ್ದಾರ್, ಬಸವರಾಜ ಬಸವಪಟ್ಟಣ, ಸಿದ್ದನಗೌಡ ಪಾಟೀಲï, ಶರಣಗೌಡ ಪಾಟೀಲï, ನಾಗರಾಜ ಯಲಶೆಟ್ಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net