ಭಾರತ ದೇಶದ ಪರಂಪರೆ ಮರೆತರೆ ಉಳಿಗಾಲವಿಲ್ಲ

12 HRR
Published on

ಹರಿಹರ: ಭವಿಷ್ಯದ ಪೀಳಿಗೆಗೆ ನಮ್ಮ ಸಂಸ್ಕಾರ, ಸಂಸ್ಕೃತಿಯನ್ನು ತಿಳಿಸುವುದು ನಮ್ಮೆಲ್ಲರ ಹೊಣೆ. ನಮ್ಮ ಪರಂಪರೆ ಮರೆತರೆ ಉಳಿಗಾಲವಿಲ್ಲ ಎಂಬುದನ್ನು ನಾವು ತಿಳಿದುಕೊಳ್ಳುವುದು ಅವಶ್ಯಕವಾಗಿದೆ ಎಂದು ತಾಲೂಕಿನ ಪಂಚಮಸಾಲಿ ಪೀಠದ ವಚನಾನಂದ ಶ್ರೀಗಳು ಹೇಳಿದರು.

ನಗರದ ಹರ್ಲಾಪುರ ಬಡಾವಣೆಯ ವೀರಶೈವ ಸಮಾಜ ಸಮಿತಿಯಿಂದ ಹಮ್ಮಿಕೊಂಡಿದ್ದ ನೂತನ ದೇವಸ್ಥಾನ ಉದ್ಘಾಟನೆ, ಕಳಸಾರೋಹಣ ಮತ್ತು ಪ್ರಾಣ ಪ್ರತಿಷ್ಠಾಪನೆಯ ಹಿನ್ನೆಲೆ ಹಮ್ಮಿಕೊಂಡಿದ್ದ ಜನ ಜಾಗೃತಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ದೇವಸ್ಥಾನ ನಿರ್ಮಾಣ ಮಾಡಿದರೇ ಸಾಲದು, ಅದಕ್ಕೆ ಪ್ರತಿನಿತ್ಯ ಅಭಿಷೇಕ, ವಿಶೇಷ ಪೂಜೆ, ನೈವೇದ್ಯ ಮಾಡಿದಾಗ ದೈವಿಕ ಶಕ್ತಿ ಪ್ರಕಾರವಾಗಿ ಬೆಳೆಯುವುದು ಮತ್ತು ದೇವಸ್ಥಾನ ನಿರ್ಮಾಣ ಮಾಡಿದ್ದು ಸಾರ್ಥಕವಾಗುತ್ತದೆ ಎಂದರು.

ಕೂಡಲ ಸಂಗಮದ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಶ್ರೀಗಳು ಮಾತನಾಡಿ, ನಾಡಿನ ಬಸವ ದೇವಾಲಯಗಳು ಅನುಭವ ಮಂಟಪವಾಗಿ ಪರಿವರ್ತನೆ ಆಗಬೇಕಿರುವುದು ಇಂದಿನ ಪರಿಸ್ಥಿತಿಗೆ ಅವಶ್ಯಕತೆಯಿದೆ ಎಂದರು.

ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಜಾರಿಯಾದರೆ ಪಂಚಮಸಾಲಿ ಸಮಾಜ, ಗೌಳಿ ಲಿಂಗಾಯತರು ಸೇರಿ ಅನೇಕ ಲಿಂಗಾಯತ ಜನಾಂಗದವರಿಗೆ ಮೀಸಲಾತಿ ಸೌಲಭ್ಯ ಸಿಗುತ್ತದೆ ಎಂದರು.

ದಾವಣಗೆರೆ ವಿರಕ್ತ ಮಠದ ಡಾ. ಬಸವಪ್ರಭು ಮಾತನಾಡಿ, ಬಸವ ತತ್ವಗಳಿಂದ ಮತ್ತು ಅವರ ಕಾಯಕ ತತ್ವಗಳನ್ನು ಮೈಗೂಡಿಸಿಕೊಂಡರೆ ಜೀವನ ನೆಮ್ಮದಿಯಿಂದ ಕೂಡಿರುತ್ತದೆ. ಕಾಯಕದಲ್ಲಿ ದೇವರನ್ನು ಕಂಡಾಗ ಮಾತ್ರ ಜೀವನ ಚೆನ್ನಾಗಿ ಸದೃಡವಾಗಿ ಇರುತ್ತದೆ ಎಂದರು.

ಅಕ್ಕಿ ಆಲೂರು ಮುತ್ತಿನಕಂತಿಮಠದ ಚಂದ್ರಶೇಖರ್ ಸ್ವಾಮಿ ಮಾತನಾಡಿ, ಮನುಷ್ಯನ ಮನಸ್ಸು ಚಂಚಲವಾಗಿದೆ. ಮನೆಯನ್ನು ಹೇಗೆ ಸ್ವಚ್ಚವಾಗಿಟ್ಟುಕೊಳ್ಳುತ್ತೀರೋ ಹಾಗೇ ಮನಸ್ಸನ್ನು ಸ್ವಚ್ಚವಾಗಿ ಇರುವಂತೆ ನೋಡಿಕೊಳ್ಳಿ. ಮನಸ್ಸಿನಲ್ಲಿದ್ದ ಕಲ್ಮಶಗಳನ್ನು ಹೋಗಲಾಡಿಸಿದಾಗ ಮಾತ್ರ ಆಧ್ಯಾತ್ಮಿಕ ಕಾರ್ಯಕ್ರಮ ಮಾಡಲು ಸಾಧ್ಯ ಎಂದರು.

ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಮಾತನಾಡಿ, ಹಣ ಮತ್ತು ಅಧಿಕಾರದಿಂದ ಸಂಸ್ಕಾರ ಬರಲು ಸಾಧ್ಯವಿಲ್ಲ. ಧಾರ್ವಿುಕ ಕಾರ್ಯಕ್ರಮಗಳು ನಿರಂತರವಾಗಿ ಮಾಡಿದಾಗ ನಮ್ಮ ಸಂಸ್ಕೃತಿ ಉಳಿಯಲು ಸಾಧ್ಯ. ಪಾಲಕರು ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರ, ಸಂಸ್ಕೃತಿ, ಆಧ್ಯಾತ್ಮಿಕತೆಯ ಬಗ್ಗೆ ತಿಳಿಸಬೇಕು ಎಂದರು.

ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್, ಕಾಂಗ್ರೆಸ್ ಮುಖಂಡರಾದ ನಂದಿಗಾವಿ ಶ್ರೀನಿವಾಸ್, ತಾಪಂ ಮಾಜಿ ಸದಸ್ಯ ಜಿ.ಬಿ. ಹಾಲೇಶ್ ಗೌಡ್ರು, ತಾಪಂ ಮಾಜಿ ಅಧ್ಯಕ್ಷ ಟಿ.ಜೆ. ಮುರುಗೇಶಪ್ಪ, ಅಖಿಲ ಭಾರತ ವೀರಶೈವ ಸಮಾಜದ ತಾಲೂಕು ಅಧ್ಯಕ್ಷ ಡಿ.ಜಿ. ಶಿವಾನಂದಪ್ಪ, ಹರ್ಲಾಪುರದ ವೀರಶೈವ ಸಮಾಜದ ಅಧ್ಯಕ್ಷ ವಿ. ನಿಜಲಿಂಗಪ್ಪ, ಹಕ್ಕಿ ಆಲೂರಿನ ರಾಜಣ್ಣ, ಎಂ. ಮಲ್ಲೇಶಪ್ಪ ಆಂಬರಗೊಪ್ಪ, ಚಂದ್ರ ಪುರ್ಲಿ, ವೀರೇಶ್ ಯಾದವಾಡ್, ನಗರಸಭಾ ಸದಸ್ಯ ಸೈಯದ್ ಅಲೀಂ, ಎನ್. ಮಾರುತಿ, ಎನ್. ಶಿವಮೂರ್ತಿ, ಎಚ್. ಸಿದ್ದಪ್ಪ, ದೊಡ್ಡಮನೆ ಬಸವರಾಜ್, ಜಿ. ಹಾಲಪ್ಪಗೌಡ್ರು, ಸಮಾಳ ಚಂದ್ರಶೇಖರಪ್ಪ, ವೀರಭದ್ರಪ್ಪ, ಎಸ್. ಜಯಣ್ಣ, ಶಿವಯೋಗಿಸ್ವಾಮಿ ಇಂಜಿನಿಯರ್, ಎಚ್.ಸಿ. ಕೀರ್ತಿ ಕುಮಾರ್, ಹರೀಶ್, ಶಿವ ಕುಮಾರ್, ಸರ್ಪಭೂಷಣ, ಸಿದ್ದೇಶ್, ಶಿವು, ಪುನೀತ್, ಸುನಿಲ್ ಕುಮಾರ್, ಸಂಜು, ಚಂದ್ರಶೇಖರ್, ಬಸವರಾಜ್, ನಟರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net