ಹುಬ್ಬಳ್ಳಿ: ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ಟ್ರಸ್ಟ್ ಧಾರವಾಡ ಜಿಲ್ಲಾ ಘಟಕದ ವತಿಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 85ಕ್ಕಿಂತ ಹೆಚ್ಚು ಅಂಕ ಪಡೆದು ಉತ್ತೀರ್ಣರಾದ ಜಿಲ್ಲೆಯ ಸಮಾಜದ ವಿದ್ಯಾರ್ಥಿಗಳಿಂದ ಪ್ರತಿಭಾ ಪುರಸ್ಕಾರಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಎಸ್ಸೆಸ್ಸೆಲ್ಸಿ ಅಂಕಪಟ್ಟಿ ದೃಢೀಕೃತ ಝೆರಾಕ್ಸ್, ಜಾತಿ ಪ್ರಮಾಣಪತ್ರ, ಇತ್ತೀಚಿನ ಎರಡು ಪಾಸ್ಪೋರ್ಟ್ ಅಳತೆ ಫೋಟೊ ಗಳೊಂದಿಗೆ ಆಗಸ್ಟ್ 10ರೊಳಗೆ ಅರ್ಜಿಯನ್ನು ನಂದಕುಮಾರ ಪಾಟೀಲ, ಅಧ್ಯಕ್ಷರು ಪಂಚಮಸಾಲಿ ಸಮಾಜ ಟ್ರಸ್ಟ್, ಹುಬ್ಬಳ್ಳಿ ತಾಲೂಕು ಘಟಕ, ಸಿದ್ಧಾರೂಢ ಹೈಸ್ಕೂಲ್ ಎದುರು, ಕಾರವಾರ ರೋಡ್, ಹುಬ್ಬಳ್ಳಿ ಇವರಿಗೆ ಸಲ್ಲಿಸಲು ಕೋರಲಾಗಿದೆ.