ಪಂಚಮಸಾಲಿ ಸಮಾಜವನ್ನು 2ಎ ವರ್ಗಕ್ಕೆ ಸೇರಿಸಿ: ಉನ್ನತ ಮಟ್ಟದ ಸಮಿತಿಯ ಮುಂದೆ ಕೋರಿಕೆ...

panchamasali
ನ್ಯಾಯಮೂರ್ತಿ ಸುಭಾಷ್‌ ಬಿ. ಅಡಿ
Published on

ಬೆಂಗಳೂರು: ಪಂಚಮಸಾಲಿ ಸಮಾಜವನ್ನು 2ಎ ವರ್ಗಕ್ಕೆ ಸೇರ್ಪಡೆ ಮಾಡುವಂತೆ ಸ್ವಾಮೀಜಿಗಳ ನೇತೃತ್ವದ ನಿಯೋಗವು, ಮೀಸಲಾತಿ ಪರಾಮರ್ಶಿಸುವ ಉನ್ನತ ಮಟ್ಟದ ಸಮಿತಿಯನ್ನು ಕೋರಿದೆ.

ಹರಿಹರ ಪಂಚಮಸಾಲಿ ಜಗದ್ಗುರು ಪೀಠದ ನೇತೃತ್ವದಲ್ಲಿ ನಿವೃತ್ತ ನ್ಯಾಯಮೂರ್ತಿ ಸುಭಾಷ್‌ ಆಡಿ ಆಯೋಗ ಭೇಟಿ ಮಾಡಲಾಗಿದೆ. ಈ ಸಂದರ್ಭದಲ್ಲಿ ಡಾ.ಮಹಾದೇವ ಶಿವಾಚಾರ್ಯ ಮಹಾಸ್ವಾಮಿ, ಬಬಲೇಶ್ವರ, ಸಂಗನಬಸವ ಶಿವಾಚಾರ್ಯ ಮಹಾಸ್ವಾಮಿ, ಹಿರೇಮಠ, ಮನಗೂಳಿ ಹಾಗೂ ಪಂಚಮಸಾಲಿ ಮಠಾಧೀಶರ ಒಕ್ಕೂಟದ ಪದಾಧಿಕಾರಿಗಳು ಹಾಜರಿದ್ದರು.

ಈ ಸಂದರ್ಭದಲ್ಲಿ ವಕೀಲ ಬಿ.ಎಸ್‌ ಪಾಟೀಲ್ ಆಯೋಗಕ್ಕೆ ಅಗತ್ಯ ದಾಖಲೆಗಳ ಸಲ್ಲಿಸಿದರು.

ಬಳಿಕ ಸುದ್ದಿಗಾರರ ಜೊತೆಗೆ ಮಾತನಾಡಿದ ವಕೀಲ ಬಿ.ಎಸ್. ಪಾಟೀಲ್, ರಾಜ್ಯದ ಪಂಚಮಸಾಲಿ 2 ಎಗೆ ಸೇರಿಸೋದು, ಕೇಂದ್ರದ ಪಟ್ಟಿಯಲ್ಲಿ ಸೆನ್ಸಸ್ ರಿಪೋರ್ಟ್ ಕೂಡ ನೀಡಲಾಗಿದೆ ಎಂದರು. ಪಂಚಮಸಾಲಿ ಸಮುದಾಯಕ್ಕೆ ಆಗಿರೋ ಅನ್ಯಾಯ ಬಗ್ಗೆ ಸುಭಾಷ್ ಆಡಿ ಅವರಿಗೆ ವರದಿ ನೀಡಿದೆ. ಶೈಕ್ಷಣಿಕ ಹಾಗೂ ಉದ್ಯೋಗ ಮೀಸಲಾತಿ ಅನ್ಯಾಯದ ಬಗ್ಗೆ ಮನವಿ ಮಾಡಿದ್ದೇವೆ ಎಂದರು.

ಮೂಲ ದಾಖಲಾತಿ 1871 ಮಿಲ್ಲರ್ಸ್ ರಿಪೋರ್ಟ್‌ನಿಂದ ಹಿಡಿದು ಇಲ್ಲಿಯವರೆಗೂ ನೀಡಿದ್ದೇವೆ. ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಸ್ವಾಮೀಜಿ ನೇತೃತ್ವದಲ್ಲಿ ಪ್ರಬಲ ದಾಖಲಾತಿ ನೀಡಿದ್ದೇವೆ. ನಮಗೆ ಸ್ಪಂದಿಸಿದ್ದಾರೆ. ಮೀಸಲಾತಿಯಿಂದ ಹೊರಗೆ ಇದ್ದ ಬಗ್ಗೆ ತಿಳಿಸಿದ್ದೇವೆ. ಪೂರಕವಾಗಿ ಸ್ಪಂದಿಸಿದ್ದು ಹರ್ಷ ತಂದಿದೆ ಎಂದರು.

ನ್ಯಾಯಮೂರ್ತಿ ಸುಭಾಷ್ ಆಡಿ ಸಮಿತಿ ಶಿಫಾರಸು ಮಾಡಲಿದೆ ಅನ್ನೋ ನಂಬಿಕೆ ಇದೆ. ಎರಡು ಮನವಿ ಶಿಫಾರಸ್ಸು ಇರುವಾಗಲೇ ಸಂವಿಧಾನ ತಿದ್ದುಪಡಿಯಾಗಿದೆ. ದೆಹಲಿಯಲ್ಲಿರೋ ಪ್ರಕರಣವೂ ವರ್ಗಾವಣೆ ಆಗಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net