ಪಂಚಮಸಾಲಿ ಶ್ರೀಗಳ ಹತ್ತಿಕ್ಕುವ ಹುನ್ನಾರ

oplus_2
oplus_2
Published on

ರಾಮದುರ್ಗ: ಸಮುದಾಯದ ಮಕ್ಕಳ ವ್ಯಾಸಂಗಕ್ಕಾಗಿ ಮೀಸಲಾತಿಗೆ ಪಾತೀತ ಹೋರಾಟ ಮಾಡುತ್ತಿರುವ ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಶ್ರೀಗಳನ್ನು ಹತ್ತಿಕ್ಕುವ ವ್ಯವಸ್ಥಿತ ಹುನ್ನಾರ ನಡೆದಿದೆ. ಶ್ರೀಗಳ ಜತೆ ಇಡೀ ಪಂಚಮಸಾಲಿ ಸಮುದಾಯವಿದ್ದು, ಯಾವುದೇ ಕಾರಣಕ್ಕೂ ಧೃತಿಗೆಡಬಾರದು ಎಂದು ಲಿಂಗಾಯತ ಪಂಚಮಸಾಲಿ ಸಮುದಾಯದ ಜಿಲ್ಲಾಧ್ಯಕ್ಷ ನಿಂಗಪ್ಪ ಫಿರೋಜಿ ಹೇಳಿದರು.

ಪಟ್ಟಣದ ತುರನೂರ ಸಮೀಪದ ಶ್ರೀ ವಿಶ್ವೇಶ್ವರಯ್ಯ ಕಲ್ಯಾಣ ಮಂಟಪದಲ್ಲಿ ಭಾನುವಾರ ಲಿಂಗಾಯತ ಪಂಚಮಸಾಲಿ ಸಮುದಾಯದ ನೇತೃತ್ವದಲ್ಲಿ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು.

ಮಕ್ಕಳ ವ್ಯಾಸಂಗ ಹಾಗೂ ಸರ್ಕಾರಿ ಸೇವೆ ಪಡೆಯಲು ಮೀಸಲಾತಿಗೆ ನಡೆಯುತ್ತಿರುವ ಹೋರಾಟಕ್ಕೆ ರಾಮದುರ್ಗ ತಾಲೂಕಿನ ಸಮುದಾಯದವರು ಬೆಂಬಲಿಸಬೇಕು ಎಂದರು.

ವಕೀಲ ಎ್​.ಎಸ್​. ಸಿದ್ದನಗೌಡರ ಮಾತನಾಡಿ, ಪಂಚಮಸಾಲಿ ಸಮುದಾಯವನ್ನು ತುಳಿದು ಕೆಲ ರಾಜಕಾರಣಿಗಳು ಬೇಳೆ ಬೇಯಿಸಿಕೊಂಡಿದ್ದಾರೆ ಎಂದು ಕರೆ ನೀಡಿದರು.

ಅಧ್ಯತೆ ವಹಿಸಿದ್ದ ತಾಲೂಕಾಧ್ಯ ಸಿ.ಬಿ. ಪಾಟೀಲ ಮಾತನಾಡಿದರು. ಸಹಾಯಕ ಪ್ರಾಧ್ಯಾಪಕ ಶಿವಾನಂದ ಹಾಲೋಳ್ಳಿ ಉಪನ್ಯಾಸ ನೀಡಿದರು. ಟ್ರಸ್ಟ್​ ಕಾರ್ಯದರ್ಶಿ ಎನ್​.ಬಿ. ದಂಡಿನದುರ್ಗಿ ಪ್ರಾಸ್ತಾವಿಕ ಮಾತನಾಡಿದರು.

ವೀರರಾಣಿ ಚನ್ನಮ್ಮ ಪಂಚಮಸಾಲಿ ೇಮಾಭಿವೃದ್ಧಿ ಸಂಸ್ಥೆಯ ಅಧ್ಯ ಭೀಮಪ್ಪ ಬಸಿಡೋಣಿ, ಮುಖಂಡರಾದ ವೆ.ಎಚ್​. ಪಾಟೀಲ, ಪಿ.ಎ್​. ಪಾಟೀಲ, ಪರುತಗೌಡ ಪಾಟೀಲ, ಎನ್​.ಎನ್​. ದೇಸಾಯಿ, ಸಂಗನಗೌಡ ಪಾಟೀಲ, ಮಾರುತಿ ಕೊಪ್ಪದ, ಬಾಳಪ್ಪ ಹಂಜಿ, ಬಿ.ಎಸ್​. ಬೆಳವಣಕಿ, ಡಾ.ಬಿ.ಎನ್​. ಮಾದನ್ನವರ, ಚನ್ನಪ್ಪ ನವಲಗುಂದ, ಜಿ.ವಿ. ನಾಡಗೌಡ್ರ, ಐ.ವೆ. ಪವಾಡಿಗೌಡ್ರ, ಸಿದ್ದನಗೌಡ ಧನರನಗೌಡ್ರ, ಬಿ.ಎಸ್​. ಪಾಟೀಲ, ನಿಂಗನಗೌಡ ಪಾಟೀಲ, ಬಸವರಾಜ ಕೊಪ್ಪದ, ಬಸನಗೌಡ ದ್ಯಾಮನಗೌಡ್ರ, ಗೌಡಪ್ಪಗೌಡ ಪಾಟೀಲ, ಶಿಕ ಶಿವಾನಂದ ಹವಾಲ್ದಾರ ಹಾಗೂ ಎಂ.ಎಸ್​. ಕಿತ್ತಲಿ, ಮಂಜು ನವಲಗುಂದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net