ಪಂಚಮಸಾಲಿ ಬೇಡಿಕೆಗೆ ಕುತೂಹಲಕಾರಿ ತಿರುವು

CM Bommai
Published on

ಬೆಂಗಳೂರು: ಒಂದೆಡೆ ಸಚಿವ ಸಂಪುಟ ಸಭೆ, ಮತ್ತೊಂದೆಡೆ ಪಂಚಮಸಾಲಿ ಸಮುದಾಯದ ಪ್ರತಿಭಟನಾ ಸಮಾವೇಶದ ಮಧ್ಯೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆಯವರು ಸರ್ಕಾರಕ್ಕೆ ಮಧ್ಯಂತರ ವರದಿ ಸಲ್ಲಿಸಿದ್ದು, ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಅಧಿವೇಶನಕ್ಕೆ ಕುತೂಹಲಕಾರಿ ತಿರುವು ನೀಡಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅವರಿಗೆ ಜಯಪ್ರಕಾಶ್ ಹೆಗ್ಡೆ ಗುರುವಾರ ಭೇಟಿ ಮಧ್ಯಂತರ ವರದಿ ಸಲ್ಲಿಸಿದ್ದು, ಪಂಚಮಸಾಲಿ ಸಮುದಾಯದ ಬಹು ನಿರೀಕ್ಷಿತ ಹಿಂದುಳಿದ ವರ್ಗಗಳ 2ಎಗೆ ಸೇರ್ಪಡೆ ಬೇಡಿಕೆ ವಿಷಯದಲ್ಲಿ ಈ ವರದಿ ನಿರ್ಣಾಯಕವಾಗಲಿದೆ.

ಸಚಿವ ಸಂಪುಟ ಸಭೆಯಲ್ಲಿ ಈ‌ ವರದಿ ಮಂಡಿಸಿ ಒಪ್ಪಿಗೆ ಪಡೆಯುವ ಸಾಧ್ಯತೆಗಳಿದ್ದು, ಬೆಳಗಾವಿಯಲ್ಲಿ ಪಂಚಮಸಾಲಿ ಸಮುದಾಯ ಆಯೋಜಿಸಿರುವ ಬೃಹತ್ ಪ್ರತಿಭಟನಾ ಸಮಾವೇಶವು‌ ವಿಜಯೋತ್ಸವವಾಗಿ ಪರಿವರ್ತನೆಯಾಗಲಿದೆ ಎಂದು ತರ್ಕಿಸಲಾಗುತ್ತಿದೆ.

ಸವಾಲು

ಪಂಚಮಸಾಲಿ ಸಮುದಾಯದ ಬೇಡಿಕೆಯನ್ನು ಸಿಎಂ ಬೊಮ್ಮಾಯಿ‌ ಈಡೇರಿಸಿದರೆ, ಒಕ್ಕಲಿಗ, ಈಡಿಗ, ಉಪ್ಪಾರ ಸೇರಿ ವಿವಿಧ ಸಮುದಾಯಗಳ ಬೇಡಿಕೆ ಈಡೇರಿಸುವ ಸವಾಲು ಎದುರಾಗಲಿದ್ದು, ಒಕ್ಕಲಿಗರ ಒತ್ತಡ ಹೆಚ್ಚಲಿದೆ ಎಂಬುದು ತಳ್ಳಿ ಹಾಕುವಂತಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net