ಪದಾಧಿಕಾರಿಗಳ ಪದಗ್ರಹಣ ಅ.6ಕ್ಕೆ

panchamasali community leaders harihara swamiji basavanagouda koppal
Published on

ಕೊಪ್ಪಳ: ರಾಜ್ಯ ವಿರಶೈವ ಲಿಂಗಾಯತ ಪಂಚಮಸಾಲಿ ಸಂಘ ನೂತನ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಪದಗ್ರಹಣ ಕಾರ್ಯಕ್ರಮ ಅ.6ರಂದು ಹರಿಹರ ಪೀಠದಲ್ಲಿ ನಡೆಯಲಿದೆ ಎಂದು ಸಂದ ಜಿಲ್ಲಾಧ್ಯಕ್ಷ ಬಸವನಗೌಡ ತೊಂಡಿಹಾಳ ತಿಳಿಸಿದರು.

ಹಿಂದಿನ ಅಧ್ಯಕ್ಷ ಜಿ.ಪಿ.ಪಾಟೀಲ್​ ಆರೋಗ್ಯ ಸಮಸ್ಯೆ ಕಾರಣ ರಾಜೀನಾಮೆ ಮಾಡಿದ್ದಾರೆ. ಪ್ರಧಾನ ಕಾರ್ಯದರ್ಶಿ ಆಗಿದ್ದ ಬಿ.ಲೋಕೇಶ ಸಹ ರಾಜೀನಾಮೆ ನೀಡಿದ್ದು ಎರಡೂ ಹುದ್ದೆ ತೆರವಾಗಿದ್ದವು. ನೂತನ ರಾಜ್ಯಾಧ್ಯಕ್ಷರಾಗಿ ನಮ್ಮ ಜಿಲ್ಲೆಯ ಸೋಮನಗೌಡ ಪಾಟೀಲ್​, ಪ್ರಧಾನ ಕಾರ್ಯದರ್ಶಿಯಾಗಿ ಎಚ್​.ಪಿ.ಪರಮೇಶ್ವರಪ್ಪ ಆಯ್ಕೆಯಾಗಿದ್ದಾರೆ. ಅವರಿಬ್ಬರ ಪದಗ್ರಹಣ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಲಿದೆ.

ಹರಿಹರ ಪಂಚಮಸಾಲಿ ಪೀಠದ ಪೀಠಾಧ್ಯಕ್ಷ ಶ್ರೀ ವಚನಾನಂದ ಸ್ವಾಮೀಜಿ, ಅಲಗೂರು ಪಂಚಮಸಾಲಿ ಜಗದ್ಗುರು ಪೀಠದ ಶ್ರೀ ಮಹಾದೇವ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯವಹಿಸುವರು. ಸಮುದಾಯ ಸಚಿವರು, ಶಾಸಕರು ಹಾಗೂ ಇತರ ಜನಪ್ರತಿನಿಧಿಗಳು ಸೇರಿ 10 ಸಾವಿರಕ್ಕೂ ಹೆಚ್ಚು ಜನ ಭಾಗಿಯಾಗುವರು. ನಮ್ಮ ಜಿಲ್ಲೆಯಿಂದ 2 ಸಾವಿರ ಜನ ತೆರಳಲಿದ್ದೇವೆಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಸಮುದಾಯ ಪ್ರತಿನಿಧಿಗಳಾದ ಕರಿಯಪ್ಪ ಮೇಟಿ, ಪ್ರತಿಮಾ ಪಟ್ಟಣಶೆಟ್ಟಿ, ಸುಜಾತ ಪಟ್ಟಣಶೆಟ್ಟಿ, ದೇವರಾಜ ಹಾಲ ಸಮುದ್ರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net