ಪಂಚಮಸಾಲಿ 2ಎ ಮೀಸಲಾತಿಗಾಗಿ ಧ್ವನಿ ಎತ್ತಲಿ

4
ಮೀಸಲಾತಿಗಾಗಿ ಸದನದಲ್ಲಿ ಧ್ವನಿ ಎತ್ತುವಂತೆ ಶಾಸಕ ರಾಜು ಕಾಗೆ ಅವರಿಗೆ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮನವಿ ನೀಡಿದರು.
Published on

ಕಾಗವಾಡ: ಪಂಚಮಸಾಲಿ 2ಎ ಮೀಸಲಾತಿಗಾಗಿ ಯಾವುದೇ ಹುದ್ದೆ ತ್ಯಜಿಸಲು ಸಿದ್ಧ ಎಂದು ಕಾಗವಾಡ ಶಾಸಕ ರಾಜು ಕಾಗೆ ಹೇಳಿದರು.

ಉಗಾರ ಖುರ್ದದ ತಮ್ಮ ಕಚೇರಿಯಲ್ಲಿ ಪಂಚಮಸಾಲಿ 2ಎ ಮೀಸಲಾತಿಗಾಗಿ ಕೂಡಲಸಂಗಮ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರಿಂದ ಮನವಿ ಸ್ವೀಕರಿಸಿ ಮಾತನಾಡಿ, ಶಾಸಕರು ಪಕ್ಷಾತಿತವಾಗಿ 2 ಎ ಮೀಸಲಾತಿಗಾಗಿ ರಾಜೀನಾಮೆ ನೀಡಿದರೆ ಯಾವುದೇ ಸರ್ಕಾರ ಇದ್ದರೂ ಮಂಡಿಯೂರಲೇ ಬೇಕು ಎಂದರು.

ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಮಳೆಗಾಲ ಅಧಿವೇಶನದಲ್ಲಿ ಮೀಸಲಾತಿಗಾಗಿ ಧ್ವನಿ ಎತ್ತಲು ಸಮುದಾಯದ ಶಾಸಕರ ಮನೆ ಮನೆಗೆ ತೆರಳಿ ಮನವಿ ಪತ್ರ ನೀಡುವ ಅಭಿಯಾನ ಹಮ್ಮಿಕೊಂಡಿದ್ದೇವೆ ಎಂದರು.

ಆರ್.ಕೆ.ಪಾಟೀಲ, ನಿಂಗಪ್ಪ ಪಿರೋಜಿ, ಮೃಣಾಲ್ ಹೆಬ್ಬಾಳ್ಕರ್, ರಮೇಶಗೌಡ ಪಾಟೀಲ, ಉಮೇಶ ಪಾಟೀಲ, ಬಸನಗೌಡ ಪಾಟೀಲ, ಜ್ಯೋತಿಕುಮಾರ ಪಾಟೀಲ, ರಾಜು ಕಡೋಲೆ, ಡಾ.ಅರವಿಂದ ಕಾರ್ಚಿ, ಅನಿಲ ಸತ್ತಿ, ವಿಶ್ವನಾಥ ನಾಮದಾರ, ಮುರಗೇಶ ಕುಂಬಾರ, ಸತೀಶ ಬಿರಾದರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net