ಇಂದಿನಿಂದ ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವ

Panchakalyana Pratishtha Mahotsav from today
ಭಗವಾನ 1008 ಶ್ರೀ ಆದಿನಾಥ ತೀರ್ಥಂಕರರು.
Published on

ಚಿಕ್ಕಪಡಸಲಗಿ: ಗ್ರಾಮದಲ್ಲಿ ಮಾ.6ರಿಂದ 11ರವರೆಗೆ ಜಿನಬಿಂಬಗಳ ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವ, ಭಗವಾನ ಮಹಾವೀರರ ಪಂಚಕಲ್ಯಾಣ ಪ್ರತಿಷ್ಠಾ ತ್ರಿದಶ ವಾರ್ಷಿಕೋತ್ಸವ ನಿಮಿತ್ತ ಮಹಾ ಮಸ್ತಕಾಭಿಷೇಕ ಹಾಗೂ ವಿಶ್ವಶಾಂತಿಗಾಗಿ ಮಹಾಯಾಗ ನಡೆಯಲಿದೆ.

ಗ್ರಾಮದ ಭಗವಾನ ಆದಿನಾಥ ದಿಗಂಬರ ಜೈನ ಮಂದಿರ ಟ್ರಸ್ಟ್ ಕಮಿಟಿ, ವೀರ ಸೇವಾದಳ, ಚಕ್ರೇಶ್ವರಿ ಮಹಿಳಾ ಮಂಡಳ ಹಾಗೂ ಸಮಸ್ತ ದಿಗಂಬರ ಜೈನ ಸಮಾಜ ಬಾಂಧವರ ಸಹಯೋಗ ಹಾಗೂ ಚಿಕ್ಕಪಡಸಲಗಿ ಗ್ರಾಮದ ಗ್ರಾಮಸ್ಥರ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಸಿದ್ಧಸೇನ ಮುನಿಮಹಾರಾಜರು, ಪಾಶ್ವಸೇನೆ ಮುನಿ ಮಹಾರಾಜರು, ಸಮುದ್ರಸೇನೆ ಮುನಿ ಮಹಾರಾಜರು, ನಾಂದಣಿ ಸಂಸ್ಥಾನ ಮಠದ ಜಿನಸೇನ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ.

ಭಗವಾನ ಆದಿನಾಥ ತೀರ್ಥಂಕರರ ನೂತನ ಜಿನಮಂದಿರ ಶಿಖರ ಮಾನಸ್ತಂಭೋಪರಿ ಕಾರ್ಯಕ್ರಮ, ಇಂದ್ರಸಭಾ ಹಮ್ಮಿಕೊಳ್ಳಲಾಗಿದೆ. 7ರಂದು ಗರ್ಭಕಲ್ಯಾಣ ಮಹೋತ್ಸವ, 8ರಂದು ಜನ್ಮ ಕಲ್ಯಾಣ ಮಹೋತ್ಸವ, 9ರಂದು ದೀಕ್ಷಾ ಕಲ್ಯಾಣ ಮಹೋತ್ಸವ, 10ರಂದು ಕೈವಲ್ಯ ಜ್ಞಾನ ಕಲ್ಯಾಣ ಮಹೋತ್ಸವ, 11ರಂದು ನಿರ್ವಾಣಿ ಕಲ್ಯಾಣ ಮಹೋತ್ಸವ ನಡೆಯಲಿವೆ.

ಮಾ.9 ಮತ್ತು 10ರಂದು ಜಿನಮಂದಿರ ಶಿಖರದ ಮೇಲೆ ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net