ಮೇ.18ರಿಂದ 22 ವರೆಗೆ ಪಂಚಕಲ್ಯಾಣ ಮಹೋತ್ಸವ

kls2 (1)
Published on

ಕಳಸ: ಕಳಸ ಭಗವಾನ್ 1008 ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಮೇ 18ರಿಂದ 22ರವರೆಗೆ ನಡೆಯುವ ಧಾಮ ಸಂಪ್ರೋಕ್ಷಣಾ ಪೂರ್ವಕ ನಡೆಯುವ ಪಂಚಕಲ್ಯಾಣ ಮಹೋತ್ಸವದ ಆಹ್ವಾನ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು.

ಕಾರ್ಕಳದ ಶ್ರೀಮಠದ ನಾಲ್ಕು ಸೀಮೆಗಳಲ್ಲಿ ಒಂದಾದ ಕಳಸ ಸೀಮೆಯ ಕಳಸ ಭಗವಾನ್ 1008 ಶ್ರೀಚಂದ್ರನಾಥ ಸ್ವಾಮಿಯ ನೂತನ ಶಿಲಾಮಯ ಬಸದಿಯ ಧಾಮ ಸಂಪ್ರೋಕ್ಷಣೆ ಪೂರ್ವಕ ಮತ್ತು ಮಾನಸ್ತಂಭೋಪರಿ ಚತುರ್ಮುಖ ಬಿಂಬ ಪ್ರತಿಷ್ಠಾಪನೆ ಹಾಗೂ ನೂತನ ಶಿಲಾಮಯ ಬಸದಿಯಲ್ಲಿ ಭಗವಾನ್ ಶ್ರೀ1008 ಪಾಶ್ವನಾಥ ಸ್ವಾಮಿಯ ಜಿನಬಿಂಬದ ಪಂಚಕಲ್ಯಾಣ ಹಾಗೂ ಶ್ರೀಪದ್ಮಾವತಿ ಅಮ್ಮನವರ ದೇವಸ್ಥಾನದ ಧಾಮಸಂಪ್ರೋಕ್ಷಣಾ ಪೂರ್ವಕ ಪ್ರತಿಷ್ಠಾ ಮಹೋತ್ಸವ ನಡೆಯಲಿದೆ.

ಪರಮಪೂಜ್ಯ ಆಚಾರ್ಯ 108 ಗುಣಭದ್ರನಂದಿ ಮುನಿಮಹಾರಾಜರ, ಕಾರ್ಕಳ ಚತುಃಸಿದ್ಧ ಸಿಂಹಾಸನಾೀಧಿಶ್ವರರಾದ ಲಲಿತ ಕೀರ್ತಿ ಭಟ್ಟಾರಕ ಸ್ವಾಮೀಜಿ ಹಾಗೂ ನಾಡಿನ ಸಮಸ್ತ ಜೈನ ಮಠಗಳ ಭಟ್ಟಾರಕ ಸ್ವಾಮೀಜಿಗಳ ಸಾನ್ನಿಧ್ಯ ಹಾಗೂ ಧರ್ಮಸ್ಥಳ ಧರ್ಮಾಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಮೇ.18 ರಿಂದ 22ರ ವರೆಗೆ ಭಗವಾನ್ ಶ್ರೀಚಂದ್ರನಾಥ ಸ್ವಾಮಿ ಮತ್ತು ಶ್ರೀ ಜ್ವಾಲಾಮಾಲಿನಿ ಸನ್ನಿಧಿಯಲ್ಲಿ ಹಾಗೂ ಶ್ರೀ ಪಾರ್ಶ್ವನಾಥ ಸ್ವಾಮಿ ಮತ್ತು ಶ್ರೀ ಪದ್ಮಾವತಿ ಸನ್ನಿಧಿಯಲ್ಲಿ ಪಂಚಕಲ್ಯಾಣ ಮಹೋತ್ಸವ ಜೈನ ಆಗಮೋಕ್ತ ವಿಧಿ-ವಿಧಾನಗಳೊಂದಿಗೆ ನಡೆಯಲಿದೆ ಎಂದು ಕಳಸ ಭಗವಾನ್ 1008 ಶ್ರೀಚಂದ್ರನಾಥ ಸ್ವಾಮಿ ಜೀರ್ಣೋದ್ಧಾರ ಸಮಿತಿ ಅಧ್ಯ ಕೆ.ಸಿ.ಧರಣೇಂದ್ರ ತಿಳಿಸಿದರು.

ಸಮಿತಿ ಉಪಾಧ್ಯಕ್ಷ ಐ.ಎ.ಚಂದ್ರರಾಜಯ್ಯ, ಕಾರ್ಯದರ್ಶಿ ಎನ್.ನಿರ್ಮಲ್ ಕುಮಾರ್, ಖಜಾಂಚಿ ಹೆಚ್.ಸಿ.ಅಣ್ಣಯ್ಯ, ಸಹ ಕಾರ್ಯದರ್ಶಿ ಅಜಿತ್ ಕುಮಾರ್ ಗುಮ್ಮಿನಕಾಡು, ಸದಸ್ಯರಾದ ಪ್ರಸಿದ್ಧ ಜೈನ್, ಬ್ರಹ್ಮದೇವ, ಎ.ಎ.ಸುರೇಶ್ ಕುಮಾರ್, ಎ.ಹರ್ಷೇಂದ್ರ, ಜಯಕೀರ್ತಿ, ರವಿ ಕೆಳಂಗಡಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net