11ರಂದು ಪಂಚಗವ್ಯ ಚಿಕಿತ್ಸೆ ಶಿಬಿರ

WhatsApp Image 2024-06-06 at 18.22.30_c4e66470
Published on


ಪುತ್ತೂರು: ಉಡುಪಿ ಸುರಕ್ಷಾ ಗೋ ಸೇವಾ ಚಾರಿಟೆಬಲ್ ಮತ್ತು ವೆಲೇರ್ ಟ್ರಸ್ಟ್ ವತಿಯಿಂದ ಉಜಿರೆ ಶ್ರೀ ಕೃಷ್ಣಾನುಗ್ರಹ ಸಭಾ ಭವನದಲ್ಲಿ ಜೂ.11ರಂದು ಪಂಚಗವ್ಯ ಚಿಕಿತ್ಸಾ ಶಿಬಿರ ನಡೆಯಲಿದೆ.


ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಧರ್ಮಸ್ಥಳ, ರೋಟರಿ ಕ್ಲಬ್ ಬೆಳ್ತಂಗಡಿ, ಮುಂಡಾಜೆ ಕೃಷಿ ಪತ್ತಿನ ಸಹಕಾರಿ ಸಂಘ, ಉಜಿರೆ ಶ್ರೀ ಜನಾರ್ದನ ಸ್ವಾಮಿ ಸೇವಾ ಟ್ರಸ್ಟ್, ಶ್ರೀ ಸರಸ್ವತಿ ಚಾರಿಟೆಬಲ್ ಟ್ರಸ್ಟ್ ಪುತ್ತೂರು, ಎ.ಸಿ.ಸಿ. ಇ. ಬೆಳ್ತಂಗಡಿ ಸೆಂಟರ್, ಕಳೆಂಜ ಸ್ವಾಮಿ ಶ್ರೀ ವಿವೇಕಾನಂದ ಸೇವಾಶ್ರಮ ಟ್ರಸ್ಟ್ ಸಹಕಾರ ನೀಡಲಿದೆ.

ಉದ್ಘಾಟನೆಯನ್ನು ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನ ಆನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡ್ವೆಟ್ನಾಯ ನಡೆಸಲಿದ್ದು, ಪಂಚಗವ್ಯ ಚಿಕಿತ್ಸಾ ಮಾಹಿತಿಯನ್ನು ಗವ್ಯಸಿದ್ಧ ಡಾ. ಶಶಿಶೇಖರ್ ದರ್ಭೆ ನೀಡಲಿದ್ದಾರೆ. ಕ್ಯಾನ್ಸರ್ ಚಿಕಿತ್ಸಾ ತಜ್ಞ ಡಾ. ಡಿ.ಪಿ. ರಮೇಶ್ ಸೇರಿ ಹಲವು ಗಣ್ಯರು ಭಾಗವಹಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net