

ಗದಗ:
ಜಗತ್ತಿನಲ್ಲಿ ಶಿಕ್ಷಕರ ಮನಸ್ಸಿಗಿಂತ ಶ್ರೇಷ್ಠ ಮನಸ್ಸು ಯಾವುದೂ ಇಲ್ಲ. ಸಾಧಕರಿಗೆ ಸಂತೃಪ್ತಿ ಬದಲಾಗಿ ನಿರಂತರ ಸಾಧನೆಯ ಛಲವಿರಬೇಕು. ವಿದ್ಯಾಥಿರ್ಗಳನ್ನು ಸಾಧಕರನ್ನಾಗಿ ಮಾಡುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್. ಬುರಡಿ ಹೇಳಿದರು.
ಸ್ಥಳಿಯ ಪಂಚಾಚಾರ್ಯ ಮಹಾವಿದ್ಯಾಲಯದಲ್ಲಿ ಮಂಗಳವಾರ ಜರುಗಿದ 2022 23ನೇ ಸಾಲಿನ ವಾಷಿರ್ಕ ಸ್ನೇಹ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜ್ಞಾನಕ್ಕಿಂತ ಮಿಗಲಾಗಿ ಏನು ಇಲ್ಲ. ಅರಿವು ಉಂಟಾಗಬೇಕು. ಎಲ್ಲರೊಂದಿಗೆ ಹೊಂದಿಕೊಂಡು ಬಾಳುವುದನ್ನು ಕಲಿಸಬೇಕು ಎಂದರು.
ನಿವೃತ್ತ ಪ್ರಾಚಾರ್ಯ ಎಂ. ಎಸ್. ಹೊಟ್ಟಿನ ಮಾತನಾಡಿ ವಿದ್ಯಾಥಿರ್ಗಳಲ್ಲಿ ಆತ್ಮವಿಶ್ವಾಸ ಇರಬೇಕು. ಗ್ರಾಮೀಣ ಪ್ರತಿಭೆಗಳು ಬೆಳೆಯಬೇಕು. ಉನ್ನತ ವ್ಯಕ್ತಿಗಳನ್ನು ಆದರ್ಶವಾಗಿಟ್ಟುಕೊಂಡು ಜೀವನ ರೂಪಿಸಿಕೊಳ್ಳಬೇಕು. ಅವಿರತ ಪ್ರಯತ್ನದಿಂದ ಪರ್ವತವನ್ನೇ ಗೆಲ್ಲಬಹುದು. ವಿದ್ಯಾಥಿರ್ಗಳ ಸಾಧನೆಯನ್ನು ಗೌರವಿಸುವ ಮನಸ್ಸಿರಬೇಕೆಂದು ಹೇಳಿದರು.
ಪ್ರೊ. ಬಿ.ಕೆ. ಒಡೆಯರ ಮಾತನಾಡಿ, ವಿದ್ಯೆಯ ವರ್ಧನೆಗೆ ಬಂದಿರುವ ವಿದ್ಯಾಥಿರ್ಗಳು ಸಂರ್ಪೂಣ ವಿದ್ಯೆಯನ್ನು ಗಳಿಸಿಕೊಳ್ಳಬೇಕು. ದೇಶದ ಉಳಿವಿಗೆ ಶಿಣ ಬಹುಮುಖ್ಯ. ವಿದ್ಯಾಥಿರ್ಗಳು ಆತ್ಮೀಯತೆಯನ್ನು ಬೆಳೆಸಿಕೊಳ್ಳಬೇಕು ಎಂದರು.
ಸಮಾರಂಭದಲ್ಲಿ 2021&22ನೇ ಸಾಲಿನ ಬಿ.ಎಡ್. (2ವರ್ಷ) ಪರೀೆಯಲ್ಲಿ ಮಹಾವಿದ್ಯಾಲಯಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾಥಿರ್ನಿ ಅಕ್ಕಮಹಾದೇವಿ ಗಂಜಾಳ ಅವರನ್ನು ಸನ್ಮಾನಿಸಲಾಯಿತು.
ವಿಜಯಲಕ್ಷಿ$್ಮ, ಡಾ. ಬಿ.ಬಿ. ಹೊಳಗುಂದಿ, ಡಾ. ಎಸ್. ಎನ್. ರಾಯನಗೌಡರ, ಪೃಥ್ವಿ ಉಪ್ಪಿನ, ಅತಾ ಮಲ್ಲಾಪುರ, ಡಾ. ಎಂ. ಎಸ್. ಶಿರೋಳ ಇತರರು ಇದ್ದರು.