

ವಿಜಯವಾಣಿ ಸುದ್ದಿಜಾಲ ಧಾರವಾಡ
ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಪ್ರತಿ ಮನೆಗೂ ತಲುಪಬೇಕು. ಈ ದಿಶೆಯಲ್ಲಿ ಮುಂದಿನ ಸಭೆಯನ್ನು ಗ್ರಾಮ ಮಟ್ಟದಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದ್ದು ಅಧಿಕಾರಿಗಳು ಸಹಕರಿಸಬೇಕು ಎಂದು ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಅರವಿಂದ ಏಗನಗೌಡರ ಹೇಳಿದರು.
ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಗ್ಯಾರಂಟಿ ಅನುಷ್ಠಾನ ಸಮಿತಿಯ ಸಭೆಯಲ್ಲಿ ಅವರು ಮಾತನಾಡಿದರು.
ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಯ ಪಲಾನುಭಾವಿಗಳ ಯಶೋಗಾಥೆಯ ಕಿರುಹೊತ್ತಿಗೆಯನ್ನು ಸಿದ್ಧ್ದಗೊಳಿಸಬೇಕು ಎಂದರು. ಇದೇವೇಳೆ ಗ್ರಾಮ ಪಂಚಾಯಿತಿಗಳಿಗೆ ಉಸ್ತುವಾರಿಗಳನ್ನು ನೇಮಿಸಿ ಆದೇಶ ಪ್ರತಿ ನೀಡಲಾಯಿತು. ಪಂಚ ಗ್ಯಾರಂಟಿಯ ಪಲಾನುಭವಿಗಳ ಜಿಲ್ಲಾ ವ್ಯಾಪ್ತಿಯ ಯಶೋಗಾಥೆಯ ಪುಸ್ತಕ ಬಿಡುಗಡೆಗೊಳಿಸಲಾಯಿತು.
ತಾ.ಪಂ. ಕಾರ್ಯನಿರ್ವಾಹಕ ಅಽಕಾರಿ ಗಂಗಾಧರ ಕಂದಕೂರ, ಸದಸ್ಯರಾದ ಪರಮೇಶ್ವರ ಕಾಳೆ, ರೇಣುಕಾ ಕಳ್ಳಿಮನಿ, ಚಂದ್ರಶೇಖರ ಕದಂ, ಸಿದ್ದಪ್ಪ ಅಗಸಿಮನಿ, ಮಿಲಿಂದ ಇಚ್ಚಂಗಿ, ಪರಮೇಶ್ವರ ಕರಿಕಟ್ಟಿ, ಮಂಜು ಉಡಕೇರಿ, ರಾಜೇಶ ಚವ್ಹಾನ, ಇತರರಿದ್ದರು.