ಪಂಚ ಸಪ್ತತಿ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ

New Project (6)
Published on

ಸುಳ್ಯ: ಯುವಜನ ಸಂಯುಕ್ತ ಮಂಡಳಿ ನೇತೃತ್ವದಲ್ಲಿ ಯುವಕ, ಯುವತಿ ಮಂಡಲ ಹಾಗೂ ಸಂಘ ಸಂಸ್ಥೆಗಳ ಸಹಕಾರದಲ್ಲಿ ಪಂಚ ಸಪ್ತತಿ ಸ್ವಚ್ಛತಾ ಅಭಿಯಾನಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.

ಡಿ.23ರವರೆಗೆ ಅಭಿಯಾನ ನಡೆಯಲಿದ್ದು, ಯುವಜನ ಸಂಯುಕ್ತ ಮಂಡಳಿಯಲ್ಲಿ ನೋಂದಣಿಯಾದ ತಾಲೂಕಿನ ಯುವಕ, ಯುವತಿ ಮಂಡಳಿಗಳ ವತಿಯಿಂದ 75 ದಿನಗಳ ಅಭಿಯಾನ ನಡೆಯಲಿದೆ. ಮಡಪ್ಪಾಡಿ ಯುವಕ ಮಂಡಲ ವತಿಯಿಂದ ಮಡಪ್ಪಾಡಿ ಪೇಟೆಯ ಸಾರ್ವಜನಿಕ ಶೌಚಗೃಹ, ಸ್ನಾನಗೃಹ ಹಾಗೂ ಸುತ್ತಮುತ್ತ ಸ್ವಚ್ಛಗೊಳಿಸಲಾಯಿತು.

ಮಡಪ್ಪಾಡಿ ಯುವಕ ಮಂಡಲ ಅಧ್ಯಕ್ಷ ಕಿರಣ್ ಶೀರಡ್ಕ, ಕಾರ್ಯದರ್ಶಿ ರಕ್ಷಿತ್ ಶೀರಡ್ಕ, ಮಡಪ್ಪಾಡಿ ಯುವಕ ಮಂಡಲ ಪೂರ್ವಾಧ್ಯಕ್ಷ ವಿನಯಕುಮಾರ್ ಮುಳುಗಾಡು, ಸಚಿನ್ ಬಳ್ಳಡ್ಕ, ಕರುಣಾಕರ ಪಾರೆಪ್ಪಾಡಿ, ಧನ್ಯಕುಮಾರ್ ದೇರುಮಜಲು, ಯುವಕ ಮಂಡಲ ಸದಸ್ಯರಾದ ವಿನ್ಯಾಸ್ ಪಾರೆಮಜಲು, ಪ್ರೇಕ್ಷಿತ್ ಬೊಮ್ಮೆಟ್ಟಿ, ರಂಜಿತ್ ಬೊಮ್ಮೆಟ್ಟಿ, ಹರ್ಷ ಪಾರೆಮಜಲು, ಪ್ರದೀಪ್ ಪಣೆಯಾಲ, ಯುವಜನ ಸಂಯುಕ್ತ ಮಂಡಳಿ ನಿರ್ದೇಶಕ ಲೋಹಿತ್ ಬಾಳಿಕಳ, ಮಡಪ್ಪಾಡಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸದಾನಂದ ಬಲ್ಕಜೆ, ಚಂದ್ರಶೇಖರ ಗೋಳ್ಯಾಡಿ, ನಿತ್ಯಾನಂದ ನೂಜಾಲ, ಯುವಕ ಮಂಡಲ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net