ಪಂಚ ಗ್ಯಾರಂಟಿ ಯೋಜನೆಗಳು ಜನತೆಗೆ ಶ್ರೀರಕ್ಷೆ

5 ckm 4
ಚಿಕ್ಕಮಗಳೂರು ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಗ್ಯಾರಂಟಿ ಪ್ರಾಧಿಕಾರದ ಪ್ರಥಮ ತಾಲೂಕು ಮಟ್ಟದ ಸಭೆ ತಾಲೂಕು ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ.ಮಲ್ಲೇಶ್ ನೇತೃತ್ವದಲ್ಲಿ ನಡೆಯಿತು. ಎಂ.ಸಿ.ಶಿವಾನAದ ಸ್ವಾಮಿ, ಕೆ.ಪಿ.ನಾಗೇಶ್, ತಾರಾನಾಥ್, ಅನ್ಸರ್ ಅಲಿ, ಪುನೀತ್ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ರಾಜ್ಯಸರ್ಕಾರದ ಮಹತ್ವಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳು ಸಮಾಜದ ಪ್ರತಿ ನಾಗರೀಕರಿಗೂ ತಲುಪಿಸಿ ಕುಟುಂಬವನ್ನು ಆರ್ಥಿಕ ಸಬಲರಾಗಿಸುವ ಜೊತೆಗೆ ಶ್ರೀರಕ್ಷೆಯಾಗಿ ಕಾಪಾಡುತ್ತಿವೆ ಎಂದು ತಾಲೂಕು ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ.ಮಲ್ಲೇಶ್ ತಿಳಿಸಿದರು.

ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗ್ಯಾರಂಟಿ ಪ್ರಾಧಿಕಾರದ ಪ್ರಥಮ ತಾಲೂಕು ಮಟ್ಟದ ಸಭೆಯನ್ನುz್ದೆÃಶಿಸಿ ಮಾತನಾಡಿದ ಅವರು, ತಾಲೂಕಿನ ಬಡವರು, ಮಧ್ಯಮ, ಹಿಂದುಳಿದ ವರ್ಗ, ದಲಿತರು ಸೇರಿದಂತೆ ಪ್ರತಿಯೊಬ್ಬರಿಗೂ ಸದೃಢ ಜೀವನದ ದೃಷ್ಟಿಯಿಂದ ರಾಜ್ಯಸರ್ಕಾರ ಅಭೂತಪೂರ್ವ ಯೋಜನೆಗಳನ್ನು ಜಾರಿಗೆ ತಂದಿದೆ. ಕೆಲವೇ ತಿಂಗಳಲ್ಲಿ ಐದು ಗ್ಯಾರಂಟಿಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿ ಮುನ್ನೆಡೆಸುತ್ತಿದೆ ಎಂದು ತಿಳಿಸಿದರು.
ಪ್ರಸ್ತುತ ತಾಲ್ಲೂಕಿನಲ್ಲಿ ೭೩,೪೫೮ ಬಿಪಿಎಲ್ ಕಾರ್ಡ್ದಾರರಲ್ಲಿ ೬೯,೭೦೬ ಗೃಹಲಕ್ಷಿö್ಮÃ ಯೋಜನೆಗೆ ಹೆಸರು ನೋಂದಾಯಿಸಿದ್ದು ಈ ಪೈಕಿ ೬೮,೭೪೦ ಕುಟುಂಬದ ಯಜಮಾನಿಗೆ ಗೃಹಲಕ್ಷಿö್ಮÃ ಸೌಲಭ್ಯ ಒದಗಿಸುವ ಮೂಲಕ ಮಾಹೆಯಾನ ಸರ್ಕಾರ ೧೩.೭೪ ಕೋಟಿ ರೂ. ಖಾತೆಗೆ ಜಮೆ ಮಾಡುತ್ತಿದೆ. ಕೆಲವರಿಗೆ ವಿವಿಧ ಕಾರಣಗಳಿಂದ ಗೃಹ ಲಕ್ಷಿö್ಮÃ ಹಣ ಬರುತ್ತಿಲ್ಲ. ಕೂಡಲೇ ಈ ಸಮಸ್ಯೆ ಪರಿಹರಿಸಲಾಗುವುದು ಎಂದರು.
ಶಕ್ತಿ ಯೋಜನೆಯಲ್ಲಿ ಗ್ರಾಮಾಂತರ ಹೊರತುಪಡಿಸಿ ೧೫೯ ಬಸ್‌ಗಳ ವ್ಯವಸ್ಥೆಯಿದೆ. ಈ ಯೋಜನೆಯಿಂದ ದಿನಕ್ಕೆ ೩೧,೫೪೨ ಮಹಿಳೆಯರು ಪ್ರಯಾಣಿಸಿದ್ದು ಇಲ್ಲಿಯತನಕ ಒಟ್ಟು ೩ ಕೋಟಿ ರೂ. ಹಣವನ್ನು ಸರ್ಕಾರ ಬಿಡುಗಡೆಗೊಳಿಸಿದೆ. ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಕಾರ್ಡ್ ೬೬,೬೫೩, ಅಂತ್ಯೋದಯ ೪,೧೭೫ ಸೇರಿದಂತೆ ಒಟ್ಟು ೭೦,೮೨೮ ಕಾರ್ಡ್ಗಳಿವೆ. ಈ ಪೈಕಿ ೬೫,೨೬೨ ಕಾರ್ಡ್ಗಳಿಗೆ ಪಡಿತರ ಸಹಿತ ಪ್ರತಿ ತಿಂಗಳು ೧೭೦ ರೂ. ಖಾತೆಗೆ ಜಮೆಯಾಗುತ್ತಿದೆ. ಇದಕ್ಕಾಗಿ ಇದುವರೆಗೆ ಒಟ್ಟು ೩.೧೨ ಕೋಟಿ ರೂ. ಅನುದಾನವನ್ನು ಸರ್ಕಾರ ಭರಿಸಿದೆ ಎಂದು ಮಾಹಿತಿ ನೀಡಿದರು.
ಮನೆಗೆ ಉಚಿತ ವಿದ್ಯುತ್ ಸಂಬAಧ ಗೃಹಜ್ಯೋತಿ ಯೋಜನೆಯಡಿ ೩೨,೭೫೬ ನಿವಾಸ ನೊಂದಣಿಯಾಗಿದೆ. ಈ ಪೈಕಿ ೨೫,೩೩೪ ಮನೆಗಳಿಗೆ ಶೂನ್ಯ ವಿದ್ಯುತ್ ಶುಲ್ಕವಾಗಿದೆ. ಒಟ್ಟು ೧೨ ತಿಂಗಳಿನಿAದ ೬೦೩ ಲಕ್ಷ ರೂ.ಗಳ ಅನು ದಾನವನ್ನು ಸರ್ಕಾರ ಇಲಾಖೆಗೆ ಬಿಡುಗಡೆಗೊಳಿಸಿದೆ. ಯುವನಿಧಿಯಡಿ ಒಟ್ಟಾರೆ ಇಲ್ಲಿಯತನಕ ೧,೧೪೨ ಯುವಕರಿಗೆ ನೇರವಾಗಿ ಹಣ ಖಾತೆಗೆ ವರ್ಗಾಯಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನAದಸ್ವಾಮಿ, ತಾಲೂಕು ಸದಸ್ಯರಾದ ಕೆ.ಪಿ.ನಾಗೇಶ್, ಅನ್ಸರ್ ಆಲಿ, ಪುನೀತ್, ಎಲ್.ಎಂ.ನಾಗರಾಜ್, ನರೇಂದ್ರ, ಗೌಸ್‌ಮೊಹಿಯುದ್ದಿನ್, ಎಚ್.ನವರಾಜ್, ರೋಹಿತ್, ವಿಂದ್ಯಾ, ಜಯಂತಿ, ಎಂ.ಅನ್ವರ್ ಆಲಿ, ಧರ್ಮಯ್ಯ, ಡಿ.ಆರ್.ತಿಮ್ಮೇ ಗೌಡ, ಕೃಷ್ಣ, ತಾಪಂ ಇಓ ತಾರಾನಾಥ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net