

ಮುಂಡರಗಿ: ಗ್ರಾಪಂಗಳ ವ್ಯಾಪ್ತಿಯಲ್ಲಿ ಹೆಚ್ಚಿನ ಅಭಿವೃದ್ಧಿಗೆ ಸರ್ಕಾರ ಒತ್ತು ನೀಡಲಿದೆ. ಮನೆಗಳ ಮಂಜೂರಾತಿ ಕುರಿತು ಸಲ್ಲಿಸಿದ ಅರ್ಜಿಗಳಿಗೆ ಪ್ರಮಾಣಿಕವಾಗಿ ಸ್ಪಂದಿಸಲಾಗುವುದು ಎಂದು ವಿಧಾನ ಪರಿಷತ್ ಮುಖ್ಯಸಚೇತಕ ಸಲೀಂ ಅಹ್ಮದ್ ಹೇಳಿದರು.
ತಾಲೂಕಿನ ಕೊರ್ಲಹಳ್ಳಿ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಗ್ರಾಪಂ ಜನಪ್ರತಿನಿಧಿಗಳ ಭೇಟಿ ಹಾಗೂ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾಂಗ್ರೆಸ್‌ಗೆ ಬಹುಮತ ನೀಡಿ ಸರ್ಕಾರ ರಚನೆಗೆ ಅವಕಾಶ ಮಾಡಿಕೊಟ್ಟಿದ್ದೀರಿ. ಸಾಮಾಜಿಕ ಕಳಕಳಿ ಹೊಂದಿ, ಸಮಾಜದ ಎಲ್ಲ ವರ್ಗದವರ ಹಿತವನ್ನು ಕಾಪಾಡುವುದೇ ಕಾಂಗ್ರೆಸ್‌ನ ಗುರಿಯಾಗಿದೆ. ಅಧಿಕಾರಕ್ಕೆ ಬಂದ ಕೂಡಲೆ ಐದು ಗ್ಯಾರಂಟಿ ಅನುಷ್ಠಾನಕ್ಕೆ ತರಲಾಗಿದೆ. ರಾಜ್ಯವನ್ನು ಪ್ರಾಮಾಣಿಕವಾಗಿ ಅಭಿವೃದ್ಧಿಪಡಿಸುವ ಕೆಲಸ ಮಾಡಲಾಗುತ್ತಿದೆ. ಚುನಾವಣೆಗಾಗಿ ಗ್ಯಾರಂಟಿಗಳನ್ನು ನೀಡಿಲ್ಲ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹೆಚ್ಚು ಸೀಟು ಸಿಗದಿರಬಹದು. ಆದರೆ, ನಾವು ಕೊಟ್ಟ ಮಾತು ಉಳಿಸಿಕೊಳ್ಳುತ್ತೇವೆ ಎಂದು ತಿಳಿಸಿದರು.
ಕೊರ್ಲಹಳ್ಳಿ ಗ್ರಾಪಂ ಅಧ್ಯಕ್ಷೆ ಹನುಮವ್ವ ಸಾಬಣ್ಣವರ, ಉಪಾಧ್ಯಕ್ಷ ರಾಜಶೇಖರ ಗುಡ್ಲಾನೂರ, ವೈ.ಎನ್. ಗೌಡರ, ಸುಜಾತಾ ದೊಡ್ಡಮನಿ, ಎಸ್.ಡಿ. ಮಕಾಂದಾರ, ಮದರಸಾಬ್ ಸಿಂಗನಮಲ್ಲಿ, ಡಿ.ಡಿ. ಮೋರನಾಳ, ಹೇಮಂತಗೌಡ ಪಾಟೀಲ, ರಾಮಚಂದ್ರ ಕಲಾಲ, ರುದ್ರಗೌಡ ಪಾಟೀಲ, ನಾಗರಾಜ ಹೊಂಬಳಗಟ್ಟಿ, ಅಶೋಕ ಹುಬ್ಬಳ್ಳಿ, ರಾಜು ದಾವಣಗೇರಿ, ವಿನೋದ ವಡ್ಡರ, ಇತರರಿದ್ದರು. ಹನುಮಂತ ಕೊಳಲು ನಿರೂಪಿಸಿದರು.