ಪಣಪಿಲ ಜಯ -ವಿಜಯ ಕಂಬಳ ಸಮಾಪನ, 152 ಜೊತೆ ಕೋಣಗಳು ಭಾಗಿ

panapila kambala
ಪಣಪಿಲ ಜಯ -ವಿಜಯ ಕಂಬಳ
Published on

ಪಣಪಿಲ ಜಯ -ವಿಜಯ ಕಂಬಳ ಸಮಾಪನಗೊಂಡಿತು. 152 ಜೊತೆ ಕೋಣಗಳು ಭಾಗವಹಿಸಿದ್ದವು.

ಮೂಡುಬಿದಿರೆ: ಋತುವಿನ ಕೊನೆಯ ಕಂಬಳ ಕೂಟ ಪಣಪಿಲ ಜಯ -ವಿಜಯ 13ನೇ ವರ್ಷದ ಜೋಡುಕರೆ ಕಂಬಳ ಭಾನುವಾರ ಸಾಯಂಕಾಲ ಸಮಾಪನಗೊಂಡಿತು. ಕೂಟದಲ್ಲಿ 152 ಜೊತೆ ಕೋಣಗಳು ಭಾಗವಹಿಸಿದ್ದವು.

ಹಗ್ಗ ಕಿರಿಯ ವಿಭಾಗದಲ್ಲಿ 20 ಜೊತೆ ಕೋಣಗಳು ಭಾಗವಹಿಸಿದ್ದು, ಕಲ್ಯಾ ಹಾಳೆಕಟ್ಟೆ ನಿತೀಶ್ ಭವಿಷ್ಯ ದೇವಾಡಿಗ ಅವರ ಕೋಣಗಳು ಪ್ರಥಮ (ಓಡಿಸಿದವರು: ಕಾವೂರು ದೋಟ ಸುದರ್ಶನ್), ಕೆಲ್ಲಪುತ್ತಿಗೆ ಪ್ರವೀಣ್ ಕುಮಾರ್ ದ್ವಿತೀಯ (ಬೈಂದೂರು ವಿಶ್ವನಾಥ ದೇವಾಡಿಗ).

ನೇಗಿಲು ಕಿರಿಯ ವಿಭಾಗದಲ್ಲಿ 57 ಜೊತೆ ಕೋಣಗಳು ಭಾಗವಹಿಸಿದ್ದು, ಪಡು ಕೂಡೂರು ಪಟೇಲರ ಮನೆ ಭಾರವಿ ಶೆಟ್ಟಿ -ಪ್ರಥಮ (ಮೂಡುಬಿದಿರೆ ಒಂಟಿಕಟ್ಟೆ ರಿತೇಶ್), ಪಣೋಲಿಬೈಲು ಬೊಳ್ಳಾಯಿ ಚೇತನ ಚಂದಪ್ಪ ಪೂಜಾರಿ- ದ್ವಿತೀಯ (ಪಣಪಿಲ ಪ್ರವೀಣ್ ಕೋಟ್ಯಾನ್).

ಸಬ್ ಜೂನಿಯರ್ ನೇಗಿಲು ಕಿರಿಯ ವಿಭಾಗದಲ್ಲಿ 75 ಜೊತೆ ಕೋಣಗಳು ಭಾಗವಹಿಸಿದ್ದು, ಗಿರಿಜಾ ರೋಡ್‌ಲೈನ್ಸ್ ಕೋಟ ಗಾಡಿ ಕೂಸ ಪೂಜಾರಿ -ಪ್ರಥಮ (ಭಟ್ಕಳ ಹರೀಶ್), ವಾಲ್ಪಾಡಿ ಹಾಲಾಜೆ ಲೂಯಿಸ್ ಲಾರೆನ್ಸ್ ಸಲ್ದಾನ - ದ್ವಿತೀಯ (ವಿಶ್ವನಾಥ ದೇವಾಡಿಗ).

ಸಮಾರೋಪ

ಸಮಾರೋಪ ಸಮಾರಂಭದಲ್ಲಿ ಶಿರ್ತಾಡಿ ಘಟಕದ ಉಪವಲಯಾರಣ್ಯಧಿಕಾರಿ ಕಾವ್ಯಶ್ರೀ, ಅಳಿಯೂರು ಕಂಬಳ ಸಮಿತಿ ಅಧ್ಯಕ್ಷ ಯುವರಾಜ್ ಹೆಗ್ಡೆ ನಂದೊಟ್ಟು, ಕಾರ್ಯಾಧ್ಯಕ್ಷ ಸುಭಾಶ್ಚಂದ್ರ ಚೌಟ, ಮಜಲೋಡಿಗುತ್ತು ಪ್ರಮೋದ್ ಆರಿಗ, ಪ್ರವೀಣ್ ಭಟ್ ಕಾನಂಗಿ, ಪ್ರಶಾಂತ್ ಶೆಟ್ಟಿ ಮೇಗಿನಮನೆ, ವಿಜಯಕುಮಾರ್ ಕಂಗಿನಮನೆ, ಮಹಾವೀರ ಜೈನ್, ಅಶ್ವತ್ಥ್ ಕೆಲ್ಲಪುತ್ತಿಗೆ, ಕಂಬಳ ಸಮಿತಿಯ ಉಪಾಧ್ಯಕ್ಷರಾದ ರಮಾನಾಥ ಸಾಲ್ಯಾನ್, ರವಿ ಪೂಜಾರಿ, ಪ್ರವೀಣ್ ಕೋಟ್ಯಾನ್, ಜತೆ ಕಾರ್ಯದರ್ಶಿ ಯೋಗೀಶ್ ನಂದೊಟ್ಟು, ಕೋಶಾಧಿಕಾರಿ ಜಯಚಂದ್ರ ಎನ್., ಸದಸ್ಯ ಸಚಿನ್ ಪಣಪಿಲ ಮತ್ತಿತರರು ಉಪಸ್ಥಿತರಿದ್ದರು. ಕಂಬಳ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಅಶ್ವತ್ಥ್ ಪಣಪಿಲ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net