

ಮಂಗಳೂರು: ಪಣಂಬೂರು ಸಮುದ್ರ ಕಿನಾರೆಗೆ ವಿಹಾರಕ್ಕೆ ಬಂದಿದ್ದ ಮೈಸೂರು ಮೂಲದ ಇಬ್ಬರು ಸೋಮವಾರ ಬೆಳಗ್ಗೆ ಸಮುದ್ರ ಪಾಲಾಗಿದ್ದು, ಇಬ್ಬರನ್ನು ರಕ್ಷಿಸಲಾಗಿದೆ.
ದಿವಾಕರ ಆರಾಧ್ಯ (40) ಹಾಗೂ ನಿಂಗಪ್ಪ (65) ಮೃತರು. ಮಂಗಳೂರಿನಲ್ಲಿ ನಡೆದ ಹಲಸು ಮೇಳಕ್ಕೆ ಬಂದಿದ್ದ ಇವರು ಬೆಳಗ್ಗೆ ವಿಹಾರಕ್ಕೆಂದು ಸಮುದ್ರ ಕಿನಾರೆಗೆ ಬಂದಿದ್ದರು. ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.