ಪಣಂಬೂರು ಸಮುದ್ರಕ್ಕೆ ಹಾರಿ ಬೆಂಗಳೂರಿನ ಇಬ್ಬರು ಆತ್ಮಹತ್ಯೆ

sucide
Published on

ಮಂಗಳೂರು: ಪಣಂಬೂರು ಕಡಲ ತೀರದಲ್ಲಿ ಬೆಂಗಳೂರು ಮೂಲದ ಅತ್ತಿಗೆ ಮತ್ತು ಮೈದುನ ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು ಗುರುವಾರ ಬೆಳಗ್ಗೆ ಶವ ಪತ್ತೆಯಾಗಿದೆ.


ಬೋರಲಿಂಗಯ್ಯ (46) ಮತ್ತು ಲಕ್ಷ್ಮೀ (43) ಮೃತಪಟ್ಟವರು. ಇವರು ಬೆಂಗಳೂರು ಬಾಪೂಜಿ ನಗರ ನಿವಾಸಿಗಳಾಗಿದ್ದು ಮನೆಯಲ್ಲಿ ಮನಸ್ತಾಪವಾಗಿ ಬುಧವಾರ ಇಬ್ಬರೂ ಮನೆ ಬಿಟ್ಟು ಮಂಗಳೂರಿಗೆ ಬಂದಿದ್ದರು. ಗುರುವಾರ ನಸುಕಿನ ವೇಳೆಗೆ ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


ಆತ್ಮಹತ್ಯೆಗೆ ಕಾರಣ ಏನೆಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸಂಬಂಧಿಕರು ಸುದ್ದಿ ಕೇಳಿ ದಿಗ್ಬ್ರಮೆಗೊಂಡಿದ್ದು, ಮಂಗಳೂರಿಗೆ ಬಂದು ಮರಣೋತ್ತರ ಪರೀಕ್ಷೆ ನಡೆಸಿ ಶವಗಳನ್ನು ಕೊಂಡೊಯ್ದಿದ್ದಾರೆ. ಸಮುದ್ರ ದಂಡೆಯಲ್ಲಿ ಮೊಬೈಲ್ ಸಿಕ್ಕಿದ್ದರಿಂದ ಪಣಂಬೂರು ಪೊಲೀಸರು ತಕ್ಷಣ ಸಂಬಂಧಿಕರನ್ನು ಸಂಪರ್ಕಿಸಲು ಸಾಧ್ಯವಾಗಿದೆ. ಬೆಳಗ್ಗೆ ಘಟನೆ ನಡೆದ ಕಾರಣ ಪಣಂಬೂರು ತೀರದಲ್ಲಿ ಹೆಚ್ಚು ಜನ ಇರಲಿಲ್ಲ. ಹಾಗಾಗಿ ಅವರು ಸಮುದ್ರಕ್ಕೆ ಹಾರುವುದನ್ನು ಯಾರು ಕೂಡಾ ಗಮನಿಸಿಲ್ಲ. 7 ಗಂಟೆ ವೇಳೆಗ ಶವಗಳು ಪತ್ತೆಯಾಗಿವೆ. ಪಣಂಬೂರು ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net