

ಬೆಂಗಳೂರು: ನೈಸರ್ಗಿಕ, ಸಾವಯವ ಮತ್ತು ಆರೋಗ್ಯ ಉತ್ಪನ್ನಗಳ ಮೇಲೆ ದಕ್ಷಿಣ ಏಷ್ಯಾದ ಏಕೈಕ ಕಾರ್ಯಕ್ರಮ "ಪೆನೇಷಿಯಾ-2022' ಎಕ್ಸ್‌ಪೋ ಮೇ 6ರಿಂದ 8 ರವರೆಗೆ ಜಿಕೆವಿಕೆ ಆವರಣದಲ್ಲಿ ಆಯೋಜಿಸಲಾಗಿದೆ.
ನೂರಾರು ಉತ್ಪನ್ನಗಳೊಂದಿಗೆ 100ಕ್ಕೂ ಹೆಚ್ಚು ಪ್ರದರ್ಶಕರು, 10,000 ಅಧಿಕ ಸಂದರ್ಶಕರು, ದೇಶೀಯ ಮತ್ತು ಅಂತಾರಾಷ್ಟ್ರೀಯ ಖರೀದಿದಾರರು, "ಪೆನೇಷಿಯಾ' ಇದೀಗ ದಕ್ಷಿಣ ಏಷ್ಯಾದ ಎಲ್ಲ ನೈಸರ್ಗಿಕ, ಸಾವಯವ ಮತ್ತು ಆರೋಗ್ಯ ಉತ್ಪನ್ನಗಳ ಏಕೈಕ ಮೇಳ ಎಂದು ಗುರುತಿಸಿಕೊಂಡಿದೆ.
ಹಿಂದಿನ ಎಕ್ಸ್‌ಪೋ ದೇಶೀಯ ಮತ್ತು ಅಂತಾರಾಷ್ಟ್ರೀಯ ಸಂದರ್ಶಕರ ಬೆಳವಣಿಗೆಯಲ್ಲಿ ಶೇ.75 ಹೆಚ್ಚಳ ಕಂಡಿತ್ತು. 2022ರಲ್ಲಿ ಶೇ. 83 ಬೆಳೆಯುವ ನಿರೀಕ್ಷೆಯಿದೆ. ಭಾಗವಹಿಸುವ ಕಂಪನಿಗಳಿಗೆ ಪೆನೇಷಿಯಾ ಮೂಲಕ ಅತ್ಯುತ್ತಮ ವ್ಯವಹಾರವನ್ನು ಮಾಡಿದೆ ಎಂಬ ಅಂಶ ಸ್ಪಷ್ಟವಾಗಿದೆ.
ಆಹಾರ ಮತ್ತು ಪಾನೀಯ, ಸಾವಯವ ಉತ್ಪನ್ನ, ಶೇಷಮುಕ್ತ ಕೃಷಿ ಉತ್ಪನ್ನ, ಗಿಡಮೂಲಿಕೆ ಮತ್ತು ಆಯುರ್ವೇದ, ಔಷಧದ ಉತ್ಪನ್ನ, ವೈಯಕ್ತಿಕ ಆರೈಕೆ ಉತ್ಪನ್ನ, ನ್ಯೂಟ್ರಾಸ್ಯುಟಿಕಲ್ಸ್, ನೈಸರ್ಗಿಕ ಕಚ್ಚಾವಸ್ತು ಮತ್ತು ಪದಾರ್ಥಗಳು, ಕಚ್ಚಾ ಮತ್ತು ಎನ್ಕ್ಯಾಪ್ಸಲ್ನೇಟೆಡ್ ಗಿಡಮೂಲಿಕೆಗಳಿಂದ ವಿವಿಧ ನೈಸರ್ಗಿಕ ಉತ್ಪನ್ನಗಳನ್ನು ಪ್ರದರ್ಶಿಸುತ್ತದೆ.
ಮಸಾಲೆ ತೈಲಗಳು, ಪರಿಸರ ಉತ್ಪನ್ನಗಳು, ಕೃಷಿ ಇನ್ಪುಟ್ಗಳು, ಹರ್ಬಲ್ ಮತ್ತು ಆರ್ಗ್ಯಾನಿಕ್ ಕ್ರಾಪ್ಕೇರ್ ಉತ್ಪನ್ನಗಳು ಮತ್ತು ಇತರ ಸಂಬಂಧಿತ ಸೇವಾ ವಲಯಗಳಿಗೆ ಈ ಎಕ್ಸ್‌ಪೋ ವೇದಿಕೆ ಒದಗಿಸಲಿದೆ.
2022ರ ವ್ಯಾಪಾರ ಮೇಳವು ಹೊಸ ಉತ್ಪನ್ನಗಳ ಬಿಡುಗಡೆಗಳು, ಪ್ರವೃತ್ತಿಗಳು, ನಾವೀನ್ಯತೆಗಳು, ಸಂಶೋಧನೆ ಮತ್ತು ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸುತ್ತದೆ, ಇದರಿಂದಾಗಿ ತಯಾರಕರು, ರಫ್ತುದಾರರು, ಬೆಳೆಗಾರರು, ರೈತ ಸಹಕಾರಿಗಳು ಮತ್ತು ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು ಉತ್ತೇಜಿಸುತ್ತದೆ. ಎಕ್ಸ್‌ಪೋ ಭಾರತದಲ್ಲಿ ಮಾತ್ರವಲ್ಲದೆ ಜಾಗತಿಕವಾಗಿಯೂ ಅತ್ಯುತ್ತಮ ವ್ಯಾಪಾರ ಅವಕಾಶಗಳನ್ನು ನೀಡುತ್ತದೆ.
ಈ ಮೇಳವನ್ನು "ಆಲ್ ನ್ಯಾಚುರಲ್ಸ್' ನಲ್ಲಿನ ಏಕೈಕ ವ್ಯಾಪಾರ ಮೇಳವೆಂದು ಪರಿಗಣಿಸಲಾಗಿದೆ. ಭಾರತದಲ್ಲಿ ಬೆಳೆಯುತ್ತಿರುವ ನೈಸರ್ಗಿಕ ಉತ್ಪನ್ನಗಳ ಮಾರುಕಟ್ಟೆಯನ್ನು ಖರೀದಿದಾರರು ಮತ್ತು ಮಾರಾಟಗಾರರ ಜಗತ್ತಿಗೆ ತಲುಪಿಸುತ್ತದೆ. ಈ ಮೇಳ ಭೂಮಿಯ ಮೇಲಿನ ನೈಸರ್ಗಿಕ ಉತ್ಪನ್ನಗಳ ಭವಿಷ್ಯದ ಬಗ್ಗೆ ಕಾಳಜಿವಹಿಸುವ ಪ್ರತಿಯೊಬ್ಬರೂ ಭಾಗವಾಗಲು ಬಯಸುವ ಆಂದೋಲನವಾಗಿದೆ ಎಂದು ಪ್ರಕಟಣೆ ತಿಳಿಸಿದೆ.