

ಬೆಂಗಳೂರು: ಅಕ್ರಮವಾಗಿ ಪಾನ್ ಮಸಾಲ ಸಂಗ್ರಹಿಸಿದ್ದ ಗೋದಾಮಿನ ಮೇಲೆ ವಾಣಿಜ್ಯ ತೆರಿಗೆ ಇಲಾಖೆ ದಕ್ಷಿಣ ವಲಯ ಅಧಿಕಾರಿಗಳು ದಾಳಿ ನಡೆಸಿ 40 ಲಕ್ಷ ರೂ. ಮೌಲ್ಯದ ಪಾನ್ವುಸಾಲ ಜಪ್ತಿ ಮಾಡಿದ್ದಾರೆ. ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವಂಚನೆ ಮಾಡಿ ಅತ್ತಿಬೆಲೆ ಸಮೀಪದ ಗೋದಾಮಿನಲ್ಲಿ ಪಾನ್ವುಸಾಲ ಮತ್ತು ತಂಬಾಕು ಸಂಗ್ರಹಿಸಿದ್ದರು. ಈ ಬಗ್ಗೆ ಸಿಕ್ಕ ಖಚಿತ ಮಾಹಿತಿ ಮೇರೆಗೆ ಗೋದಾಮು ದಾಳಿ ನಡೆಸಿದಾಗ ಜಿಎಸ್ಟಿ ನೋಂದಣಿ ಮಾಡಿಕೊಂಡಿರಲಿಲ್ಲ. ಜತೆಗೆ ಅದರಲ್ಲಿದ್ದ ಸರಕು ಪದಾರ್ಥಗಳಿಗೆ ತೆರಿಗೆ ಪಾವತಿಸಿರಲಿಲ್ಲ. 40 ಲಕ್ಷ ರೂ. ಮೌಲ್ಯದ ಸರಕು ಜಪ್ತಿ ಮಾಡಿ ಸಂಬಂಧಪಟ್ಟವರಿಂದ 39.34 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ ಎಂದು ದಕ್ಷಿಣ ವಲಯ ಹೆಚ್ಚುವರಿ ಆಯುಕ್ತ(ಜಾರಿ) ನಿತೇಶ್ ಕೆ.ಪಾಟೀಲ್ ತಿಳಿಸಿದ್ದಾರೆ.