ಪಂಪಾಪತಿ ದೇಗುಲಕ್ಕೆ ನುಗ್ಗಿದ ನೀರು

17 gurugunta 02
ಸತತ ಮೂರ್ನಾಲ್ಕು ದಿನಗಳಿಂದ ಸುರಿದ ಮಳೆಯಿಂದ ಗುರುಗುಂಟಾದ ಮರಾಠಗಲ್ಲಿ ರಸ್ತೆಯಲ್ಲಿ ನೀರು ಸಂಗ್ರಹಗೊಂಡಿರುವುದು.
Published on

ಗುರುಗುಂಟಾ: ಸತತ ಮೂರ್ನಾಲ್ಕು ದಿನಗಳಿಂದ ಧಾರಾಕಾರವಾಗಿ ಸುರಿದ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಗ್ರಾಮದ ಕುಂಬಾರ ಓಣಿಯ ಪಂಪಾಪತಿ ದೇಗುಲಕ್ಕೆ ನೀರು ನುಗ್ಗಿ ದೇವರ ಪೂಜೆಗೆ ಮೂರು ದಿನಗಳಿಂದ ಜಲದಿಗ್ಬಂಧನವಾಗಿದೆ.

ಗ್ರಾಮ ಸೇರಿದಂತೆ ಸುತ್ತಲಿನ ಕೆಲ ಹಳ್ಳಿಗಳಲ್ಲಿ ಮಣ್ಣಿನ ಗೋಡೆಗಳು ಕುಸಿದಿವೆ. ವಾಣಿಜ್ಯ ಬೆಳೆಗಳಾದ ಹತ್ತಿ, ಪಪ್ಪಾಯ, ಕಲ್ಲಂಗಡಿ, ತೊಗರಿ, ಡ್ರ್ಯಾಗನ್ ಫ್ರೂಟ್‌ಬೆಳೆಗಳಿಗೆ ಹಾನಿಯಾಗಿದೆ. ಬಸ್ ನಿಲ್ದಾಣಕ್ಕೆ ಹೊಂದಿಕೊಂಡ ಕೆರೆ ತುಂಬಿ ನೀರು ಹೊರ ಹರಿಯುತ್ತಿದ್ದರಿಂದ ಇಲ್ಲಿನ ಮರಾಠ, ಸಂತೆ ಮಾರುಕಟ್ಟೆ, ಸರ್ಕಾರಿ ಪ್ರಾಥಮಿಕ ಶಾಲೆ ರಸ್ತೆಗಳು ಹಳ್ಳದಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net