ಕನ್ನಡ ಸಾಹಿತ್ಯಕ್ಕೆ ಪಂಪನ ಭದ್ರಬುನಾದಿ: ನಾಡೋಜ ಡಾ.ಹಂ.ಪ.ನಾಗರಾಜಯ್ಯ ಬಣ್ಣನೆ

Mandya VV
Published on

ಮಂಡ್ಯ: ಪಂಪ ಸಾಮಾನ್ಯ ಕವಿಗಳನ್ನು ಆಶ್ರಯಿಸಿ ಕಥಾ ವಸ್ತುವನ್ನು ತರಲಿಲ್ಲ. ಸಂಸ್ಕೃತದ ಮಹತ್ವದ ಕೃತಿಗಳನ್ನು ಕನ್ನಡಕ್ಕೆ ತಂದು ಮಹಾನ್ ಕವಿಯಾದರು. ಈ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ಭದ್ರ ಬುನಾದಿ ಹಾಕಿದ ಕೀರ್ತಿ ಆದಿಕವಿ ಪಂಪನಿಗೆ ಸಲ್ಲುತ್ತದೆ ಎಂದು ನಾಡೋಜ ಡಾ.ಹಂ.ಪ.ನಾಗರಾಜಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಮಂಡ್ಯ ವಿಶ್ವವಿದ್ಯಾನಿಲಯದ ಎ.ವಿ.ಆರ್ ಸಭಾಂಗಣದಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ವಿಭಾಗ, ಮಂಡ್ಯದ ದಿಗಂಬರ ಜೈನ ಸಮಾಜ, ಹಲಗೂರಿನ ಅನಿಕೇತನ ಪ್ರತಿಷ್ಠಾನ ಹಾಗೂ ಬೆಂಗಳೂರಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಪಂಪನ ಕಾವ್ಯಗಳ ಪ್ರಸ್ತುತತೆ: ಪಂಪನ ಸಾಹಿತ್ಯ ಕುರಿತು ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಪಂಪ ವ್ಯಾಸ ಭಾರತ ಕಥಾ ವಸ್ತುವನ್ನು ಆಶ್ರಯಿಸಿ ಕನ್ನಡದಲ್ಲಿ ವಿಕ್ರಮಾರ್ಜುನ ವಿಜಯಂ ಕೃತಿಯನ್ನು ರಚಿಸಿದರು. ಸಂಸ್ಕೃತದಲ್ಲಿ ಲಕ್ಷ ಶ್ಲೋಕ ಪ್ರಮಾಣದ ಬೃಹತ್ ಕೃತಿಯನ್ನು ಕನ್ನಡ ಭಾಷೆಯಲ್ಲಿ ತರುವ ಮೊಟ್ಟಮೊದಲ ಪ್ರಯತ್ನವನ್ನು ಪಂಪ ಮಾಡಿದ್ದಾರೆ. ಅಲ್ಲದೆ ಬೃಹತ್ ಕೃತಿಯನ್ನು ಸಂಕ್ಷೇಪಗೊಳಿಸಿ ಕನ್ನಡದಲ್ಲಿ ಸಮಗ್ರವಾಗಿ ಬರೆದ ಕೀರ್ತಿಯು ಪಂಪನಿಗೆ ಸಲ್ಲುತ್ತದೆ ಎಂದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ.ವಸಂತಕುಮಾರ್, ಪ್ರಾಧ್ಯಾಪಕ ಡಾ.ರಾಜು ಗುಂಡಾಪುರ, ಡಾ.ಕೆ.ಅನಂತರಾಮು, ಡಾ.ಮೈಸೂರು ಕೃಷ್ಣಮೂರ್ತಿ, ದಿಲೀಪ್ ಕುಮಾರ್, ಮಂಡ್ಯ ವಿವಿಯ ಕುಲಪತಿ ಡಾ.ಪುಟ್ಟರಾಜು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net