ಅಯ್ಯಪ್ಪಸ್ವಾಮಿ ದೇಗುಲದಲ್ಲಿ ಪಂಪಾ ದೀಪೋತ್ಸವ

02Kush02
ಕುಶಾಲನಗರ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಪಂಪ ದೀಪೋತ್ಸವ ಅಂಗವಾಗಿ ದೇವರ ತೀರ್ಥ ಸ್ನಾನ ನಡೆಸಲಾಯಿತು. ಗೆಳೆಯರ ಬಳಗದ ವಿ.ಎಸ್.ಅನಂದಕುಮಾರ್, ಎಚ್.ಎಂ.ಚಂದ್ರು, ಡಿ.ವಿ.ರಾಜೇಶ್, ರಾಕಿ ಇತರರು ಇದ್ದರು.
Published on

ಕುಶಾಲನಗರ: ಇಲ್ಲಿನ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಸೋಮವಾರ 29ನೇ ವರ್ಷದ ಪಂಪಾ ದೀಪೋತ್ಸವ ಪೂಜಾ ಕಾರ್ಯಕ್ರಮ ಗೆಳೆಯರ ಬಳಗದಿಂದ ಶ್ರದ್ಧಾಭಕ್ತಿಯಿಂದ ನೆರವೇರಿತು.

ದೇವಾಲಯದಲ್ಲಿ ಪಂಚಾಮೃತ ಅಭಿಷೇಕ ಸೇರಿದಂತೆ ವಿಶೇಷ ಪೂಜಾ ವಿಧಿಗಳನ್ನು ನೆರವೇರಿಸಲಾಯಿತು. ಅರ್ಚಕರಾದ ಕೃಷ್ಣಮೂರ್ತಿ ಭಟ್, ಸೋಮಶೇಖರ್ ಭಟ್ ನೇತೃತ್ವದಲ್ಲಿ ಪೂಜಾ ಕಾರ್ಯಗಳು ಜರುಗಿದವು. ಸಂಜೆ ಉತ್ಸವ ಮೂರ್ತಿ ಮೆರವಣಿಗೆ, ಕಾವೇರಿ ನದಿಯಲ್ಲಿ ತೀರ್ಥ ಸ್ನಾನ ನಂತರ ಪಂಪಾ ದೀಪವನ್ನು ನದಿಯಲ್ಲಿ ತೇಲಿ ಬಿಡಲಾಯಿತು. ಬಳಿಕ ಪಡಿಪೂಜೆ ಮಹಾಮಂಗಳಾರತಿಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡು ಅಯ್ಯಪ್ಪ ಸ್ತೋತ್ರಗಳನ್ನು ಪಠಿಸಿ ಭಜನೆ ನಡೆಸಿದರು. ಭಕ್ತರಿಗೆ ಅನ್ನಸಂತರ್ಪಣೆ ನಡೆಸಲಾಯಿತು.
ಪುರಸಭೆ ಸದಸ್ಯ ವಿ.ಎಸ್.ಆನಂದಕುಮಾರ್, ಗೆಳೆಯರ ಬಳಗದ ಎಚ್.ಎಂ.ಚಂದ್ರು, ಡಿ.ವಿ.ರಾಜೇಶ್, ರಾಕಿ, ಎಚ್.ಟಿ.ವಸಂತ್, ಗಿರೀಶ್, ದೇವಾಲಯ ಸಮಿತಿ ಅಧ್ಯಕ್ಷ ಬಿ.ಪಿ.ಗಣಪತಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net