

ಮಂಗಳೂರು: ಬೆಂಗ್ರೆ ಗ್ರಾಮದ ಚೌಗುಳೆ ಶಿಫ್ ಯಾರ್ಡ್ ನ ಫಲ್ಗುಣಿ ನದಿ ತೀರದ ಬಳಿ ಚೌಗುಳೆ ಶಿಫ್ ಬಿಲ್ಡ್ ಡಿವಿಜನ್‌ನ ಆವರಣ ಗೋಡೆಯ ಭದ್ರತೆಗೆ ಹಾಕಿದ್ದ ಮರಳನ್ನು ಮಂಗಳವಾರ ರಾತ್ರಿ ಕಳವು ಮಾಡಲು ಯತ್ನಿಸಿದವರ ವಿರುದ್ಧ ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಥಳೀಯರಾದ ಜಾಹೀದ್, ತಸ್ತ್ರೀಫ್ ಮೊದಲಾದವರು ಮರಳು ಕಳವಿಗೆ ಯತ್ನಿಸಿದ್ದು, ಸೆಕ್ಯೂರಿಟಿಗೆ ನಿಯೋಜಿಸಲಾಗಿದ್ದ ಅಂಕುಶ್, ದೀಪ್ ಸಂಗಾ, ಯಾದವ್ ಪೌಲ್ ಅವರ ಗಮನಕ್ಕೆ ಬಂದು ಸ್ಥಳಕ್ಕೆ ಹೋದಾಗ ಆರೋಪಿಗಳು ಪರಾರಿಯಾಗಿದ್ದಾರೆ. 150 ಚೀಲ ಮರಳು, ಹಾರೆ ಮತ್ತು ಸಾಗಿಸಲು ತಂದ ನಾಡದೋಣಿಯನ್ನು ಬಿಟ್ಟು ಓಡಿ ಹೋಗಿದ್ದಾರೆ. ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಭದ್ರತಾ ಅಧಿಕಾರಿ ಉಮೇಶ್ ದೂರು ನೀಡಿದ್ದಾರೆ.