ಮಳೆ-ಬಿರುಗಾಳಿಗೆ ನೆಲಕಚ್ಚಿದ ಪಪ್ಪಾಯ

060622 Pamanakalluru Pappayya Seeds Collaps
ಕವಿತಾಳ ಸಮೀಪದ ಪಾಮನಕಲ್ಲೂರಿನಲ್ಲಿ ರೈತ ಬಂದೇ ನವಾಜ್ ಜಮೀನಿನಲ್ಲಿ ಬೆಳೆದಿದ್ದ ಪಪ್ಪಾಯ ಫಸಲು ಭಾನುವಾರ ಮಳೆ, ಗಾಳಿಯಿಂದ ನೆಲದ ಪಾಲಾಗಿರುವುದು.
Published on

ಕವಿತಾಳ: ಸಮೀಪದ ಪಾಮನಕಲ್ಲೂರು ಗ್ರಾಮದಲ್ಲಿ ಬಂದೇನವಾಜ್ ಲಾಲ್ ಸಾಬ್ ಕಟಗರರ ನಾಲ್ಕು ಎಕರೆ ಜಮೀನಿನಲ್ಲಿ ಬೆಳೆದಿದ್ದ ಪಪ್ಪಾಯ ಫಸಲು ಭಾನುವಾರ ಸುರಿದ ಮಳೆ ಹಾಗೂ ಭಾರಿ ಬಿರುಗಾಳಿಗೆ ನೆಲಕ್ಕುರುಳಿದೆ. ಪಾಮನಕಲ್ಲೂರಿನಲ್ಲಿ ರಾತ್ರಿ ರಸ್ತೆ ಮೇಲೆ ಮರ ಉರುಳಿದ್ದರಿಂದ ವಾಹನ ಸವಾರರು ಪರದಾಡಿದರು. ಸಾರ್ವಜನಿಕರ ಮಾಹಿತಿ ಮೇರೆಗೆ ಆಗಮಿಸಿದ ಪೊಲೀಸರು ಜೆಸಿಬಿ ಮೂಲಕ ಮರ ತೆರವುಗೊಳಿಸಿದರು. ವಟಗಲ್, ಹಣಗಿ ಹಾಗೂ ಇತರೆಡೆ ಮರಗಳು ಉರುಳಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net