ಬಾನ್ಸುರಿಯಲ್ಲಿ ಸಂಗೀತದ ಹೊನಲು ಹರಿಸಿದ ಪಂ. ಗೋಡ್ಖಿಂಡಿ

HNR GODKINDI
Published on

ಹೊನ್ನಾವರ: ಕಡತೋಕಾದ ಜನತಾ ವಿದ್ಯಾಲಯ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಾನ್ಸುರಿ ಮಾಂತ್ರಿಕ ಪಂ. ಪ್ರವೀಣ ಗೋಡಖಿಂಡಿ ಮತ್ತು ತಬಲಾ ಪಟು ಪಂ. ರವೀಂದ್ರ ಯಾವಗಲ್ ಬೆಂಗಳೂರು ಅವರು ಸಂಗೀತ ಆಸಕ್ತರನ್ನು ಮಂತ್ರಮುಗ್ಧಗೊಳಿಸಿದರು.

ಪಂ. ಪ್ರವೀಣ ಗೋಡಖಿಂಡಿ ಅವರು ಹಿಂದುಸ್ತಾನಿ ಕಿರಾಣೆ ಘರಾಣೆ ಶೈಲಿಯಲ್ಲಿ ರಾಗ್ ‘ಮುಲ್ತಾನಿ’ ಮತ್ತು ಕರ್ನಾಟಕ ಸಂಗೀತದ ರಾಗ ‘ಅಮೃತವರ್ಷಿಣಿ’ಯನ್ನು ತಂತ್ರಗಾರಿಕಾ ಶೈಲಿಯಲ್ಲಿ ನುಡಿಸಿ ಕೊಳಲಿನ ರುಚಿಕರ ಇತಿಹಾಸ, ರೂಪುರೇಷೆ, ವೈಜ್ಞಾನಿಕತೆಯನ್ನು ವಿವರಿಸಿದರು. ಹಿರಿಯ ವಿದ್ವಾಂಸ ರವೀಂದ್ರ ಯಾವಗಲ್ ಅವರು ತಬಲಾ ಸಾಥ್ ನೀಡಿದರು.

ಹಿರಿಯ ಸಂಗೀತ ಸಂಘಟಕ ಕಲಾವಿದ ಪೊ›. ಶಂಭು ಭಟ್ಟ, ಶಾಲೆಯ ಅಧ್ಯಕ್ಷ ಜಿ.ಆರ್. ಭಟ್ಟ ಧರ್ಮಶಾಲಾ, ಶಿವಾನಂದ ಹೆಗಡೆ ಕಡತೋಕಾ, ಪ್ರದೀಪ ಖರ್ವಾ ಅವರು ಕಲಾವಿದರನ್ನು ಶಾಲು ಹೊದಿಸಿ ಫಲಪುಷ್ಪ ನೀಡಿ ಗೌರವಿಸಿದರು. ಖ್ಯಾತ ಗಾಯಕರಾದ ಪಂ. ಅಶೋಕ ಹುಗ್ಗಣ್ಣವರ್, ಶಿವಾನಂದ ಭಟ್ಟ, ರೇಷ್ಮಾ ಭಟ್ಟ ಮೂರೂರು ಹಾಗೂ ಲಕ್ಷ್ಮೀ ಹೆಗಡೆ ಬಗ್ಗೋಣ, ತಬಲಾ ಪಟುಗಳಾದ ಶೇಷಾದ್ರಿ, ಎನ್.ಜಿ. ಕೆಪ್ಪೆಕೆರೆ, ಗುರುರಾಜ, ಅಕ್ಷಯ ಭಟ್ಟ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಚಾರ್ಯು ದುರ್ಗಮ್ಮ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net