ಭೈರನಹಟ್ಟಿಯಲ್ಲಿ ಪಲ್ಲಕ್ಕಿ ಮೆರವಣಿಗೆ

27 NRD-5 (1)
Published on

ನರಗುಂದ: ತಾಲೂಕಿನ ಭೈರನಹಟ್ಟಿಯ ಶ್ರೀ ದೊರೆಸ್ವಾಮಿಗಳ ಪುಣ್ಯ ಸ್ಮರಣೋತ್ಸವ ನಿಮಿತ್ತ ಪಲ್ಲಕ್ಕಿ ಮೆರವಣಿಗೆ ನಡೆಯಿತು. ಶಾಂತಲಿಂಗ ಶ್ರೀಗಳು ಮಾತನಾಡಿ, ದೊರೆಸ್ವಾಮಿಗಳ ಪುಣ್ಯ ಸ್ಮರಣೋತ್ಸವವನ್ನು ಪ್ರತಿವರ್ಷ ಮೂರು ದಿನಗಳ ಕಾಲ ಆಚರಿಸಲಾಗುತ್ತಿತ್ತು. ಆರೋಗ್ಯ ಶಿಬಿರ, ಶ್ರೇಷ್ಠ ಕೃಷಿಕರಿಗೆ ಸನ್ಮಾನ ಹಾಗೂ ಜಾನುವಾರುಗಳ ಪ್ರದರ್ಶನ ಸೇರಿದಂತೆ ವಿವಿಧ ಧಾರ್ವಿುಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತಿತ್ತು, ಆದರೆ, ಪ್ರಸ್ತಕ ವರ್ಷ ಕರೊನಾ ಹಿನ್ನೆಲೆಯಲ್ಲಿ ಸರ್ಕಾರದ ನಿಯಮಾನುಸಾರ ಈ ಬಾರಿಯ ಕಾರ್ಯಕ್ರಮವನ್ನು ಅತ್ಯಂತ ಸರಳವಾಗಿ ಆಚರಿಸಲಾಗಿದೆ ಎಂದು ತಿಳಿಸಿದರು.

ಮೆರವಣಿಗೆಯಲ್ಲಿ ಶಿವಯ್ಯ ಹಿರೇಮಠ, ಧರ್ಮ ರಾಜಪ್ಪ ತೆಗ್ಗಿನಮನಿ, ಬಸಪ್ಪ ನರಸಾಪೂರ, ರಂಗಪ್ಪ ತಿಗಡಿ, ಹನಮಂತ ಐನಾಪೂರ, ಎಸ್.ಬಿ. ದಂಡಿನ, ಬಿ.ಸಿ. ಐನಾಪೂರ, ಬಿ.ಬಿ. ಐನಾಪೂರ, ಬಸಪ್ಪ ಸಂಗಳದ, ಸುರೇಶ ಐನಾಪೂರ, ಲಿಂಗರಾಜ ಮೊರಬದ, ಬಸವರಾಜ ಹಡಪದ, ಗ್ರಾಮದ ಪ್ರಮುಖರು ಪಾಲ್ಗೊಂಡಿದ್ದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net