ಶ್ರೀಮುಷ್ಣಂ  ಕ್ಷೇತ್ರದಲ್ಲಿ ಸುಧಾ ಮಂಗಳ

IMG-20230514-WA0004
Published on

ಉಡುಪಿ : ತಮಿಳುನಾಡಿನ ಶ್ರೀಮುಷ್ಣಂ  ಕ್ಷೇತ್ರದಲ್ಲಿ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರ ಹದಿನಾರನೇ ಸುಧಾಮಂಗಳ ಮಹೋತ್ಸವವು ಭಾನುವಾರ ವೈಭವೋಪೇತವಾಗಿ ನೆರವೇರಿತು.

ಈ ಸಂದರ್ಭದಲ್ಲಿ ಉತ್ತರಾದಿ ಮಠ, ಪೇಜಾವರ ಮಠ, ಕಾಣೆಯೂರು ಮಠ, ಸೋದೆ ಮಠ, ಅದಮಾರು ಮಠ, ಶಿರೂರು ಮಠ, ಶ್ರೀಪಾದರಾಜ ಮಠ, ತಂಬಿಹಳ್ಳಿ ಮಠ, ಭಂಡಾರಿ ಕೇರಿ ಮಠದ ಯತಿಗಳು ಹಾಗೂ ಅನೇಕ ವಿದ್ವಾಂಸರ ಸಮ್ಮುಖದಲ್ಲಿ ಸುಧಾ ಮಂಗಳ ಜರಗಿತು.

ದೀಪಕ್ ಪದಕಿ ಚಿತ್ರದುರ್ಗ, ಪ್ರಣವ ಭಟ್ ಮುದರಂಗಡಿ, ವಿಷ್ಣು ತೀರ್ಥ ಬಳ್ಳಾರಿ, ಕಾರ್ತಿಕ ಆಚಾರ್ಯ ಪಾಡಿಗಾರು, ಸಚಿನ್ ಉಪಾಧ್ಯ ಪಾಡಿಗಾರು, ಪ್ರಮೋದ ಭಟ್ ಕುಂಭಾಶಿ, ಗುರುಗುಂಡಿ ಹರಿದಾಸ್ ಆಚಾರ್ಯ ಅನುವಾದ ಪೂರ್ವಕ ಪರೀಕ್ಷೆಯನ್ನು ನೀಡಿ ಮಂಗಳ ಮಹೋತ್ಸವವನ್ನು ನೆರವೇರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net