

ತುಮಕೂರು : ವಿಧಾನ ಪರಿಷತ್ ಚುನಾವಣಾ ನೀತಿಸಂಹಿತೆ ಹಿನ್ನೆಲೆಯಲ್ಲಿ ಅಧಿಕೃತ ಕಾರ್ಯಕ್ರಮ ರದ್ದಾಗಿದ್ದರೂ ಪಾಲಿಕೆ ಕಚೇರಿ ಉದ್ಘಾಟನೆಯಲ್ಲಿ ಅಧಿಕಾರಿಗಳ ಸಮ್ಮುಖದಲ್ಲಿಯೇ ಹೋಮ, ಹವನ ನೆರವೇರಿದ್ದು ಚುನಾವಣಾ ಆಯೋಗದ ಗಮನಕ್ಕೆ ಬಂದಿದೆ.
ಬುಧವಾರ ಕಚೇರಿ ಕಟ್ಟಡ ಉದ್ಘಾಟನೆ ಹಾಗೂ ಸಿಬ್ಬಂದಿಯೊಬ್ಬರ ಮದುವೆ ಹಿನ್ನೆಲೆಯಲ್ಲಿ ಕಚೇರಿಗೆ ಅನಧಿಕೃತ ರಜೆ ಘೋಷಿಸಲಾಗಿದ್ದು, ಕಚೇರಿಯಲ್ಲಿ ಒಬ್ಬರೂ ಕುಳಿತುಕೊಳ್ಳದೆ ನಾಗರಿಕರ ಯಾವ ಕೆಲಸಗಳೂ ನಡೆಯದೆ ತೊಂದರೆಯಾಯಿತು. ಬುಧವಾರ ಮಧ್ಯಾಹ್ನವೇ ಖಾಸಗಿ ಬಸ್‌ನಲ್ಲಿ ಇಡೀ ಪಾಲಿಕೆ ಸಿಬ್ಬಂದಿ ತೆರಳಿದ್ದು ಆಶ್ಚರ್ಯ ಮೂಡಿಸಿತು
ಮಹಾನಗರ ಪಾಲಿಕೆ ಸಿಬ್ಬಂದಿ ರಜೆ ತೆಗೆದುಕೊಳ್ಳದೆ ಕೆಲಸಕ್ಕೆ ಗೈರಾಗಿದ್ದು ನೂರಾರು ನಾಗರಿಕರ ದಿನನಿತ್ಯದ ಕೆಲಸಕ್ಕೆ ತೊಂದರೆಯಾಯಿತು. ಯಾವುದೇ ಸೂಚನೆ ಇಲ್ಲದೆ ಕಚೇರಿ ಸಿಬ್ಬಂದಿ ಒಮ್ಮೆಲೆ ಗೈರಾಗಿದ್ದು ಆಶ್ಚರ್ಯ ಮೂಡಿಸಿತು.
ಬುಧವಾರ ಬೆಳಗ್ಗೆ 7 ರಿಂದ 8.30ರವರೆಗೆ ಪಾಲಿಕೆ ಆಯುಕ್ತೆ ರೇಣುಕಾ ನೇತೃತ್ವದಲ್ಲಿಯೇ ಕಾರ್ಯಕ್ರಮ ನಡೆದಿದ್ದು, ಕಚೇರಿ ಸಿಬ್ಬಂದಿಯೆಲ್ಲಾ ಹಬ್ಬದ ಸಂಭ್ರಮದಲ್ಲಿ ಓಡಾಡಿದರು. ಎಲ್ಲರೂ ೆಟೋ ಸೆಷನ್ ಕೂಡ ನಡೆಸಿದ್ದು ವಿಧಾನ ಪರಿಷತ್ ಚುನಾವಣೆ ನೀತಿ ಸಂಹಿತೆಯನ್ನು ಲೆಕ್ಕಿಸದೆ ಕಾರ್ಯಕ್ರಮ ನಡೆಸಿರುವುದು ವಿವಾದಕ್ಕೆ ಕಾರಣವಾಗಿದೆ. ಆಯುಕ್ತೆ ರೇಣುಕಾ, ಇಇ ಆಶಾ ಸೇರಿ ಪಾಲಿಕೆಯ ಹಿರಿಯ ಅಧಿಕಾರಿಗಳು ಹೋಮದಲ್ಲಿ ಭಾಗವಹಿಸಿದ್ದರು.