

ಐನಾಪುರ: ಮಕರ ಸಂಕ್ರಾಂತಿ ಅಂಗವಾಗಿ ಪಟ್ಟಣದ ಶ್ರೀ ಬಸವೇಶ್ವರ ಸರ್ಕಲ್‌ನಲ್ಲಿ ಮಂಗಳವಾರ 11 ಗ್ರಾಮಗಳ ದೇವರ ಪಲ್ಲಕ್ಕಿ ಭೇಟಿ ಕಾರ್ಯಕ್ರಮದಲ್ಲಿ ಸಹಸ್ರಾರು ಭಕ್ತರು ಭಂಡಾರದಲ್ಲಿ ಮಿಂದೆದ್ದರು.
ಕೆರಿಸಿದ್ಧೇಶ್ವರನ ಭೇಟಿ ಕಾರ್ಯಕ್ರಮದಲ್ಲಿ ಹೊನ್ನ ಮೋಳೆದ ಓಘಸಿದ್ಧ, ಕವಲಗುಡ್ಡದ ಕರಿಯೋಗಸಿದ್ಧ, ಹನುಮಾಪುರದ ಅಮೋಘಸಿದ್ಧೇಶ್ವರ, ಜಾನರವಾಡಿಯ ಮಂಗರಾಯಸಿದ್ಧ, ಖಟಾಂವಿಯ ಅಮೋಘಸಿದ್ಧ, ಕೆಂಪವಾಡ ಹಿರಿಮಲಕಾರಿಸಿದ್ಧ, ಐನಾಪುರದ ಅರಣ್ಯಸಿದ್ಧ, ಭೂತಾಳಿಸಿದ್ಧೇಶ್ವರ ಸೇರಿದಂತೆ 11 ಗ್ರಾಮಗಳ ಪಲ್ಲಕ್ಕಿ ಭೇಟಿ ಹಾಗೂ ಮೋಳೆ ಐನಾಪುರದ ಯಲ್ಲಮ್ಮ ದೇವಿ ಭೇಟಿ ನೀಡಿದ ಅಭೂತಪೂರ್ವ ಕ್ಷಣ ನೋಡುಗರ ಗಮನ ಸೆಳೆಯಿತು.
ಪಲ್ಲಕ್ಕಿ ಮೇಲೆ ಭಂಡಾರ ಹಾಕಿ ಭಕ್ತರು ಹರಕೆ ತೀರಿಸಿ, ಭಂಡಾರದಲ್ಲಿ ಮಿಂದೆದ್ದು ಪುನೀತರಾದರು.
ಹತ್ತೂರಿನ ಬನಸಿದ್ದ ಮಹಾರಾಜರು ಜಾತ್ರಾ ಕಮಿಟಿಯ ಸುಭಾಷ ಪಾಟೀಲ, ರಾಜುಗೌಡ ಪಾಟೀಲ, ಹರ್ಷವರ್ಧನ ಪಾಟೀಲ, ಸುನೀಲ ಪಾಟೀಲ, ಸುರೇಶ ಅಡಿಸೇರಿ, ಅಮಗೊಂಡ ಒಡೆಯರ, ಸೋಮನಿಂಗ ಒಡೆಯರ, ಮಲಕಾರಿ ಒಡೆಯರ, ಸಿದ್ದು ಒಡೆಯರ, ದುಂಡಪ್ಪ ಒಡೆಯರ, ಬಸು ಒಡೆಯರ ಹಾಗೂ ಸಹಸ್ರಾರು ಭಕ್ತರು ಭೇಟಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.