ಆಲೂರದಲ್ಲಿ ಪಲ್ಲಕ್ಕಿ ಉತ್ಸವ

Palanquin festival at Alura
ನಾಲತವಾಡ ಸಮೀಪದ ಆಲೂರ ಗ್ರಾಮದ ಗದುಗೇಶ್ವರ ಹಿರೇಮಠದಲ್ಲಿ ಶಿವಭಜನೆ ಮಂಗಲೋತ್ಸವ ಕಾರ್ಯಕ್ರಮದ ಅಂಗವಾಗಿ ಪಲ್ಲಕ್ಕಿ ಮೆರವಣಿಗೆ ಜರುಗಿತು.
Published on

ನಾಲತವಾಡ: ಸಮೀಪದ ಆಲೂರ ಗ್ರಾಮದಲ್ಲಿ ಶ್ರಾವಣ ಮಾಸದ ಪ್ರಯುಕ್ತ ತಿಂಗಳ ಪೂರ್ತಿ ಗದುಗೇಶ್ವರ ಹಿರೇಮಠದಲ್ಲಿ ನಡೆದ ಶಿವಭಜನೆ ಮಂಗಲೋತ್ಸವ ಕಾರ್ಯಕ್ರಮ ಗುರುವಾರ ಜರುಗಿತು.

ಶಿವಭಜನೆಯ ಮಹಾಮಂಗಲೋತ್ಸವ ಕಾರ್ಯಕ್ರಮದ ಅಂಗವಾಗಿ ಗುರುವಾರ ಸಂಜೆ ಪಲ್ಲಕ್ಕಿ ಉತ್ಸವ ಜರುಗಿತು. ಮಹಿಳೆಯರು ಕಳಸ, ಬಾಜಾ ಭಜಂತ್ರಿ ಸಮೇತ ಶ್ರೀಮಠದಿಂದ ಆರಂಭವಾದ ಮೆರವಣಿಗೆ ಊರಿನ ಪ್ರಮುಖ ಓಣಿಗಳಲ್ಲಿ ಸಂಚರಿಸಿ ಗಂಗಸ್ಥಳಕ್ಕೆ ತೆರಳಿದರು. ನಂತರ ಹುನಕುಂಟಿ, ಆಲೂರ, ಕೆಸಾಪೂರದ ಮೂರು ಗ್ರಾಮಗಳಲ್ಲಿ ಅದ್ದೂರಿಯಾಗಿ ಪಲ್ಲಕ್ಕಿ ಮೆರವಣಿಗೆ ಜರುಗಿತು. ಮರಳಿ ಶ್ರೀಮಠಕ್ಕೆ ಪಲ್ಲಕ್ಕಿ ಬಂದು ಅಂದೇ ರಾತ್ರಿ ಸಂಗಮೇಶ್ವರ ಭಜನಾ ಮಂಡಳಿ, ಮಾರುತೇಶ್ವರ ಭಜನಾ ಮಂಡಳಿ, ಬಸವೇಶ್ವರ ಭಜನಾ ಮಂಡಳಿ ಆಲೂರ, ರೇಣಸಿದ್ಧೇಶ್ವರ ಭಜನಾ ಮಂಡಳಿ ನೆರಬಂಚಿ ಇವರಿಂದ ರಾತ್ರಿ ಶಿವಭಜನೆ ನೆಡೆಯಿತು. ಶುಕ್ರವಾರ ಮಹಾ ಪ್ರಸಾದ ಹಮ್ಮಿಕೊಳ್ಳಲಾಗಿತ್ತು.

ಗದುಗಯ್ಯ ಹಿರೇಮಠ, ನಿಂಗಯ್ಯ ಹಿರೇಮಠ, ಸಿದ್ದಯ್ಯ ಹಿರೇಮಠ, ಸಂಗಯ್ಯ.ಗು.ಹಿರೇಮಠ, ಸಂಗಯ್ಯ.ಹಾ.ಹಿರೇಮಠ, ಸಂಗಯ್ಯ ಗಣಚಾರಿ, ಮಹಾಂತಯ್ಯ ಗಣಾಚಾರಿ, ಕಲಯ್ಯ ಮಠಪತಿ, ದೂಡಪ್ಪ ಕಪನೂರ, ಹಣಮಂತರಾಯ ಕಪನೂರ, ಸಂಗಪ್ಪ ಜಗ್ಗಲ್ಲ, ಜಲಾಲಸಾಬ್ ನಾಯ್ಕೋಡಿ, ಬಸವರಾಜ ಪಾಟೀಲ, ಸಂಗಣ್ಣ ಕಪನೂರ, ಎಂ.ಜಿ.ಹಿರೇಗೌಡರ, ಜಿ.ಕೆ.ಬಿರಾದಾರ, ವಿಶಾಲ ಬಿರಾದಾರ, ಈರಪ್ಪ ಬಿರಾದಾರ, ಅಶೋಕ ಗುಳಿ, ಎಂ.ಎಸ್.ಬೂದಿಹಾಳ, ಶಿವಕುಮಾರ ಹಿರೇಗೌಡರ, ಮಲ್ಲಿಕಾರ್ಜುನ.ಎ.ಹಿರೇಗೌಡರ, ಭೀಮಣ್ಣ ಕ್ಷತ್ರಿ ಹಾಗೂ ಊರಿನ ಸಮಸ್ತ ಗುರು-ಹಿರಿಯರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net