ಸಂಭ್ರಮದಿಂದ ಜರುಗಿದ ಪಲ್ಲಕ್ಕಿ ಮೆರವಣಿಗೆ

18 vikram 4
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ನಗರದ ಭೂಸಪ್ಪ ಚೌಕ್​ ಬಳಿಯ ಕುರುಬರ ಓಣಿಯ ಶ್ರೀ ಯಲ್ಲಮ್ಮದೇವಿ, ಬೀರಲಿಂಗೇಶ್ವರ ಹಾಗೂ ವಿಠ್ಠಲ ರುಕ್ಮಿಣಿ ದೇವರ ಜಾತ್ರಾ ಮಹೋತ್ಸವದ 3ನೇ ದಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

ಭಾನುವಾರ ಮಧ್ಯಾಹ್ನ ಅನ್ನಸಂತರ್ಪಣೆ ಬಳಿಕ ಏರ್ಪಡಿಸಿದ್ದ ಶ್ರೀ ಯಲ್ಲಮ್ಮ ದೇವಿ ಹಾಗೂ ಬೀರಲಿಂಗೇಶ್ವರ ಪಲ್ಲಕ್ಕಿ ಉತ್ಸವದ ಮೆರವಣಿಗೆಗೆ ಎಸಿಪಿ ಪ್ರಶಾಂತ ಸಿದ್ದನಗೌಡರ ಹಾಗೂ ಪೊಲೀಸ್​ ಇನ್​ಸ್ಪೆಕ್ಟರ್​ ನಾಗೇಶ ಕಾಡದೇವರ ಚಾಲನೆ ನೀಡಿದರು.

ನಂತರ ಕುರುಬರ ಓಣಿಯಿಂದ ಜಾಂಜ್​, ಪೂರ್ಣ ಕುಂಭ ಸೇರಿ ವಿವಿಧ ಕಲಾ ಪ್ರಕಾರಗಳೊಂದಿಗೆ ಹೊರಟ ಮೆರವಣಿಗೆ ಕಾಮನಕಟ್ಟಿ, ಗಾಂಧಿಚೌಕ್​, ಸುಭಾಷ ರಸ್ತೆ, ವಿವೇಕಾನಂದ ವೃತ್ತ, ಜಕಣಿ ಭಾವಿ, ಭೂಸಪ್ಪ ಚೌಕ್​ ಮಾರ್ಗವಾಗಿ ದೇವಸ್ಥಾನಕ್ಕೆ ತಲುಪಿತು. ಓಣಿಯ ನಿವಾಸಿಗಳು, ವಿವಿಧ ಕಡೆಗಳಲ್ಲಿನ ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾದರು.

ರಾತ್ರಿ ಡೊಳ್ಳಿನ ಮಜಲು, ಡೊಳ್ಳಿನ ಪದಗಳು ಜನಮನ ಸೆಳೆಯಿತು. ಮೇ 19ರಂದು ಬೆಳಗ್ಗೆ 9 ಗಂಟೆಗೆ ಭಂಡಾರ ಒಡೆಯುವ ಮಹಾಪೂಜೆ ಕಾರ್ಯಕ್ರಮದೊಂದಿಗೆ ಜಾತ್ರಾ ಮಹೋತ್ಸವ ಸಂಪನ್ನವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net