ಸೇನೆಗಳಿಂದ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ

07BTP01 Sunil kumar
ಸುನಿಲ್ ಕುಮಾರ್
Published on

ಬೆಟ್ಟದಪುರ: ಭಾರತದ ವಾಯು, ಭೂ ಹಾಗೂ ನೌಕಾ ಸೇನೆ ಆಪರೇಷನ್ ಸಿಂಧೂರ ನಡೆಸುವ ಮೂಲಕ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ ಮಾಡಿದೆ ಎಂದು ಎನ್‌ಸಿಸಿ ಸಿ.ಪ್ರಮಾಣೀಕೃತ ಸುನಿಲ್ ಕುಮಾರ್ ಹೇಳಿದರು.

ಹದಿನೈದು ದಿನಗಳ ಹಿಂದೆ ಪಹಲ್ಗಾಮ್ನಲ್ಲಿ ಪಾಕಿಸ್ತಾನ ಪ್ರಚೋದಿತ ಉಗ್ರಗಾಮಿಗಳು 26 ಅಮಾಯಕ ಪ್ರವಾಸಿಗರ ಮೇಲೆ ಧರ್ಮದ ಆಧಾರದ ಮೇಲೆ ಆಕ್ರಮಣ ಮಾಡಿದ್ದರು. ಆದರೀಗ ಭಾರತ ಯಾವುದೇ ಧರ್ಮದ ವಿರುದ್ಧ ಹೋರಾಡದೆ ಉಗ್ರರ ವಿರುದ್ಧ ಹೋರಾಟ ನಡೆಸಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರಧಾನಿ ಹೇಳಿದಂತೆ ಉಗ್ರಗಾಮಿಗಳನ್ನು ಹುಡುಕಿ ಹೊಡೆದು ಹಾಕಲಾಗಿದೆ. ಪಾಕಿಸ್ತಾನ ಇನ್ನಾದರೂ ಬುದ್ಧಿ ಕಲಿತು ಉಗ್ರಗಾಮಿಗಳನ್ನು ಪೋಷಿಸುವ ಗೋಜಲಿಗೆ ಹೋಗಬಾರದು. ಹೆಚ್ಚು ಉಗ್ರಗಾಮಿ ಸಂಘಟನೆಗಳು ನೆಲೆ ಕಂಡುಕೊಂಡಿರುವುದರಿಂದ ಆದಷ್ಟು ಬೇಗ ಪಿಒಕೆಯನ್ನು ಭಾರತ ವಶಪಡಿಸಿಕೊಳ್ಳಬೇಕು ಎಂದು ಆಶಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net