ಪಾಕಿಸ್ತಾನ ಉಗ್ರರಿಗೆ ತಕ್ಕ ಪ್ರತ್ಯುತ್ತರ

10NDR2
Published on

ನಂದೇಶ್ವರ: ಭಾರತ ದೇಶದ ಹೆಣ್ಣು ಮಕ್ಕಳ ಸಿಂಧೂರ ಅಳಿಸಿದ ಉಗ್ರರಿಗೆ ಸೈನಿಕರು ತಕ್ಕ ಪ್ರತ್ಯುತ್ತರ ನೀಡಿದ್ದಾರೆ. ಭಾರತ ದೇಶದ ನಕ್ಷೆ ಈ ಮೊದಲು ವಿಶಾಲವಾಗಿತ್ತು. ಈಗ ಉಗ್ರರ ನೆಲೆಗಳನ್ನು ಹಿಮ್ಮೆಟ್ಟಿಸುವ ಮೂಲಕ ಮತ್ತೆ ಭಾರತ ದೇಶದ ನಕ್ಷೆ ವಿಶಾಲವಾಗಿ ವಿಸ್ತಾರವಾಗಿ ಬದಲಾಗುವ ಸಮಯ ಬಂದಿದೆ ಎಂದು ಹಳಿಂಗಳಿ ಭದ್ರಗಿರಿ ಬೆಟ್ಟದ ಆಚಾರ್ಯ ಶ್ರೀ 108 ಕುಲರತ್ನ ಮುನಿ ಮಹಾರಾಜರು ಹೇಳಿದರು.

ಸಮೀಪದ ಮಹಿಷವಾಡಗಿ ಗ್ರಾಮದಲ್ಲಿ ಶನಿವಾರ ಸಿಂಧೂರ ಕಾರ್ಯಾಚರಣೆ ಪ್ರಶಂಶಿಸಿ ಮಾತನಾಡಿದ ಅವರು, ಬದುಕು ಮತ್ತು ಬದುಕಲು ಬಿಡು ಎಂಬ ಅಹಿಂಸೆಯ ತತ್ತ್ವದ ಮೇಲೆ ಗೌರವ ಇಟ್ಟಿರುವ ಭಾರತ ಯಾರಿಗೂ ಅನ್ಯಾಯ ಬಯಸುವುದಿಲ್ಲ. ಅನ್ಯಾಯ ಮಾಡಲು ಬಂದವರನ್ನು ಸುಮ್ಮನೆ ಬಿಟ್ಟದ್ದು ಇತಿಹಾಸದಲ್ಲಿಲ್ಲ. ಆಧುನಿಕ ಯುದ್ಧ ಸಲಕರಣೆ ಬಳಸಿಕೊಂಡು ಉಗ್ರರನ್ನು ಸೆದೆ ಬಡಿಯಲು ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಶಾಂತಿಯುತ ಭಾರತದ ಮೇಲೆ ಎರಗಿ ಬರುವ ಉಗ್ರ ಸಂಘಟನೆಗಳಿಗೆ ಇದು ಪಾಠವಾಗಲಿದೆ ಎಂದರು. ಅಶೋಕ ಮುಗ್ಗನವರ, ವಿವೇಕಾನಂದ ಯಲಗುದ್ರಿ, ಬಸಗೊಂಡ ಮುಗ್ಗನವರ ಇತರರು ಇದ್ದರು.

-===================================================

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net