ಅಧಿಕಾರಿಗಳ ಗೈರು, ಗ್ರಾಮಸಭೆ ರದ್ದು

New Project (15)
Published on

ಉಳ್ಳಾಲ: ಅಧಿಕಾರಿಗಳ ಗೈರಿಗೆ ಗ್ರಾಮಸ್ಥರು ಆಕ್ರೋಶಗೊಂಡರೆ, ಪಂಚಾಯಿತಿ ಆಡಳಿತ ವರ್ಗವೂ ಕೈಜೋಡಿಸಿ ಒಗ್ಗಟ್ಟಿನ ತೀರ್ಮಾನ ಕೈಗೊಳ್ಳುವ ಮೂಲಕ ಪಜೀರ್ ಗ್ರಾಮಸಭೆ ರದ್ದುಪಡಿಸಲಾಯಿತು.

ಪಜೀರ್ ಗ್ರಾಮ ಪಂಚಾಯಿತಿಯ 2024-25ನೇ ಸಾಲಿನ ದ್ವಿತೀಯ ಹಂತದ ಗ್ರಾಮಸಭೆ ಗುರುವಾರ ಹಮ್ಮಿಕೊಳ್ಳಲಾಗಿತ್ತು. ಬೆಳಗ್ಗೆ 10:30ಕ್ಕೆ ಸಭೆ ನಿಗದಿಯಾಗಿತ್ತಾದರೂ ಅಧಿಕಾರಿಗಳು ಬಂದಿರಲಿಲ್ಲ. ಅಂಗನವಾಡಿ ಮೇಲ್ವಿಚಾರಕಿ ಮುಬೀನಾ ನೋಡಲ್ ಅಧಿಕಾರಿಯಾಗಿದ್ದರು. ಗ್ರಾಮಸ್ಥರು ಹಾಗೂ ಸಮಾಜ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ ಮತ್ತು ಶಿಕ್ಷಣ ಇಲಾಖೆಯಿಂದ ಪ್ರತಿನಿಧಿಗಳು ಆಗಮಿಸಿದ್ದರು. ಗ್ರಾಮಸಭೆಯಲ್ಲಿ ಪ್ರಮುಖವಾಗಿ ಹಾಜರಾಗಬೇಕಿದ್ದ ಸಾರಿಗೆ, ಪೊಲೀಸ್, ಮೆಸ್ಕಾಂ, ಲೋಕೋಪಯೋಗಿ, ಕೃಷಿ, ತೋಟಗಾರಿಕೆ, ಕಂದಾಯ, ಜಲಜೀವನ್ ಇಲಾಖೆ ಅಧಿಕಾರಿಗಳ ಪತ್ತೆ ಇರಲಿಲ್ಲ. ಸುಮಾರು ಒಂದು ಗಂಟೆ ಕಾದರೂ ಅವರ ಬರುವಿಕೆಯ ಸುಳಿವು ಸಿಗಲಿಲ್ಲ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಸಭೆ ರದ್ದುಪಡಿಸುವಂತೆ ಒತ್ತಾಯಿಸಿದರು. ಇದಕ್ಕೆ ಧ್ವನಿಗೂಡಿಸಿದ ಪಂಚಾಯಿತಿ ಆಡಳಿತ ಸಭೆ ರದ್ದುಪಡಿಸಿದೆ.

ವರ್ಷಕ್ಕೆ ಎರಡು ಬಾರಿ ಮಾತ್ರ ಗ್ರಾಮಸ್ಥರು ತಮ್ಮ ಸಮಸ್ಯೆ ಹೇಳಿಕೊಳ್ಳುವ ಅವಕಾಶ ಸಿಗುತ್ತದೆ. 15 ದಿನಗಳ ಮೊದಲೇ ಎಲ್ಲ ಇಲಾಖೆಗಳಿಗೆ ಗ್ರಾಮಸಭೆಯ ಪತ್ರ ರವಾನಿಸಲಾಗುತ್ತದೆ. ಹೀಗಿದ್ದರೂ ಪ್ರಮುಖ ಇಲಾಖೆ ಅಧಿಕಾರಿಗಳೇ ಗೈರಾದರೆ ಸಮಸ್ಯೆ ಕೇಳುವವರು ಯಾರು? ಈ ಹಿನ್ನೆಲೆಯಲ್ಲಿ ಗ್ರಾಮಸ್ಥರ ಬೇಡಿಕೆಗೆ ಮನ್ನಣೆ ನೀಡಿ ಗ್ರಾಮಸಭೆ ರದ್ದುಪಡಿಸಲಾಗಿದೆ. ಮೊಹಮ್ಮದ್ ರಫೀಕ್, ಗ್ರಾಮ ಪಂಚಾಯಿತಿ ಅಧ್ಯಕ್ಷ https://www.vijayavani.net/marodi-temple-sathyanarayana-pooje https://www.vijayavani.net/cricket-match-at-uppinangady

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net