

ಸಿದ್ದಾಪುರ: ತಾಲೂಕಿನ ಮುಗದೂರಿನಲ್ಲಿರುವ ಪುನೀತ್ ರಾಜಕುಮಾರ್ ಆಶ್ರಯಧಾಮ ಅನಾಥಾಶ್ರಮದಲ್ಲಿ ಸ್ಥಳೀಯ ಪ್ರಾಥಮಿಕ ಹಾಗೂ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಉಚಿತ ಚಿತ್ರಕಲೆ ತರಬೇತಿ ಶಿಬಿರಕ್ಕೆ ಪಿಎಸ್‌ಐ ಅನಿಲ್ ಬಿ.ಎಂ. ಅವರು ಚಿತ್ರಕಲಾ ಕಿಟ್ ವಿತರಿಸಿದರು.
ಅನಾಥರು, ಮಕ್ಕಳಿಗೆ ಬೇಡವಾದ ತಂದೆ-ತಾಯಂದಿರಿಗೆ ಚಿಕಿತ್ಸೆ ನೀಡಿ ಆರೈಕೆ ಮಾಡಿ ಬದುಕು ಕಟ್ಟಿಕೊಟ್ಟು ಮಾನವೀಯತೆ ಮೆರೆಯುವುದರ ಜತೆಗೆ ವಿದ್ಯಾರ್ಥಿಗಳಿಗೆ ಚಿತ್ರಕಲೆ ತರಬೇತಿ ಆಯೋಜಿಸಿರುವುದು ಸಂತಸದ ಸಂಗತಿ. ಇಂಥವರ ಕಾರ್ಯ ಸಮಾಜಕ್ಕೆ ಮಾದರಿ ಎಂದರು.
ಆಶ್ರಮದ ವ್ಯವಸ್ಥಾಪಕಿ ಮಮತಾ ನಾಯ್ಕ ಮಾತನಾಡಿ, ಪ್ರತಿ ಭಾನುವಾರ ಚಿತ್ರಕಲೆ ತರಬೇತಿ ಉಚಿತವಾಗಿ ನಡೆಯಲಿದೆ. ಮುಂದಿನ ದಿನದಲ್ಲಿ ಸ್ಪೋಕನ್ ಇಂಗ್ಲಿಷ್ ತರಬೇತಿ ನೀಡಲಾಗುವುದು ಎಂದರು.
ಪತ್ರಕರ್ತ ದಿವಾಕರ ನಾಯ್ಕ ಸಂಪಖಂಡ, ಕನ್ನಡ ಪರ ಸಂಘಟನೆಯ ಅನಿಲ್ ಕೊಠಾರಿ ಹಾಗೂ ಪೊಲೀಸ್ ಸಿಬ್ಬಂದಿ ಇದದರು.
ತರಬೇತುದಾರ ರಾಘವೇಂದ್ರ ನಾಯ್ಕ ಚಿತ್ರಕಲೆ ತರಬೇತಿ ನಡೆಸಿಕೊಟ್ಟರು. ಆಶ್ರಮದ ಮುಖ್ಯಸ್ಥ ನಾಗರಾಜ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.