ಚಿತ್ರಕಲೆ ದೃಷ್ಟಾಂತಗಳನ್ನು ಸಾರಿ ಹೇಳುವ ಕಲೆ

11 vikram 4
Published on

ಚಿತ್ರಕಲೆ ದೃಷ್ಟಾಂತಗಳನ್ನು ಸಾರಿ ಹೇಳುವ ಕಲೆ

ವಿಜಯವಾಣಿ ಸುದ್ದಿಜಾಲ ಧಾರವಾಡ

ಚಿತ್ರಕಲೆಯು ಅನೇಕ ದೃಷ್ಟಾಂತಗಳನ್ನು ಸಾರಿ ಹೇಳುವ ಕಲೆಯಾಗಿದೆ. ವಚನಕಾರರನ್ನು, ಹಿಂದಿನ ಕಾಲದ ವೈಭವವನ್ನು ಚಿತ್ರಕಲೆ ಮೂಲಕ ತೋರಿಸುವ ಈ ಶಿಕ್ಷಕರ ಪ್ರಯತ್ನ ಮೆಚ್ಚುವಂತಹದ್ದು ಎಂದು ಮುರಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.

ನಗರದ ಸರ್ಕಾರಿ ಆರ್ಟ್​ ಗ್ಯಾಲರಿಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಚಿತ್ರಕಲಾ ಶಿಕ್ಷಕರ ಕಾರ್ಯಾಗಾರ ಹಾಗೂ ಚಿತ್ರಕಲಾ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನಿವೃತ್ತ ಪ್ರಾಚಾರ್ಯ ಸುರೇಶ ಹಾಲಬಾವಿ ಮಾತನಾಡಿ, ಧಾರವಾಡವು ಇಡೀ ಉತ್ತರ ಕರ್ನಾಟಕವನ್ನು ತನ್ನತ್ತ ಸೆಳೆಯುವಂತೆ ಮಾಡಿದ ಕಲಾವಿದ ಡಿ.ವಿ.ಹಾಲಬಾವಿ. ಅಂತಹ ಮಹಾನ್​ ಕಲಾವಿದರ ತವರೂರಲ್ಲಿ ಚಿತ್ರಕಲಾ ಶಿಕ್ಷಕರು ಅನೇಕ ಚಿತ್ರಗಳನ್ನು ಪ್ರದರ್ಶಿಸಿ ಸಮಾಜದ ಗಮನ ಸೆಳೆಯುತ್ತಿರುವುದು ವಿಶೇಷ ಎಂದರು.

ಬಿ.ವೈ. ಭಜಂತ್ರಿ, ಪಿ.ಆರ್​. ಬಾರಕೇರ ಮಾತನಾಡಿದರು. ಬಿ.ಎಸ್​. ತೋಟಗಿ ಅಧ್ಯಕ್ಷತೆ ವಹಿಸಿದ್ದರು. ಸಂಜು ಬಸ್ತವಾಡ, ಯಲ್ಲಪ್ಪ ಹುಬ್ಬಳ್ಳಿ, ಚಿತ್ರಕಲಾ ಕಾಲೇಜಿನ ಪ್ರಾಚಾರ್ಯ ಬಿ.ಎಚ್​. ಕುರಿಯವರ, ಬಸವಂತ ತೋಟದ, ಶಿಕ್ಷಕರಾದ ಆರ್​.ಬಿ. ಹಳ್ಳುರ, ಎಸ್​.ಎಚ್​. ಪಾಟೀಲ, ಗಾಮನಗಟ್ಟಿ, ಇತರರು ಇದ್ದರು.

ಬಂಡಿವಡ್ಡರ ಸ್ವಾಗತಿಸಿದರು. ಬಿ.ಪಿ. ಪಾಟೀಲ ನಿರೂಪಿಸಿದರು. ಮಂಜು ಹೂಗಾರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net