ಚಿತ್ರಕಲೆಗಿದೆ ಪ್ರಾಚಿನ ಇತಿಹಾಸ

ವಿಜಯಪುರದ ಪ್ರವಾಸೋದ್ಯಮ ಇಲಾಖೆಯ ಆರ್ಟ್​ ಗ್ಯಾಲರಿಯಲ್ಲಿ ಹಮ್ಮಿಕೊಂಡಿದ್ದ ಚಿತ್ರಕಲೆ ಶಿಬಿರವನ್ನು ಬಿ.ಕೆ. ಶ್ರೀದೇವಿ ಉದ್ಘಾಟಿಸಿದರು. ಹಾಸಿಂಪೀರ ವಾಲಿಕಾರ, ಮಲ್ಲಿಕಾರ್ಜುನ ಬಜಂತ್ರಿ, ರಾಜೇಶ್ವರಿ ಮೋಪಗಾರ ಇತರರಿದ್ದರು.
ವಿಜಯಪುರದ ಪ್ರವಾಸೋದ್ಯಮ ಇಲಾಖೆಯ ಆರ್ಟ್​ ಗ್ಯಾಲರಿಯಲ್ಲಿ ಹಮ್ಮಿಕೊಂಡಿದ್ದ ಚಿತ್ರಕಲೆ ಶಿಬಿರವನ್ನು ಬಿ.ಕೆ. ಶ್ರೀದೇವಿ ಉದ್ಘಾಟಿಸಿದರು. ಹಾಸಿಂಪೀರ ವಾಲಿಕಾರ, ಮಲ್ಲಿಕಾರ್ಜುನ ಬಜಂತ್ರಿ, ರಾಜೇಶ್ವರಿ ಮೋಪಗಾರ ಇತರರಿದ್ದರು.
Published on

ವಿಜಯಪುರ: ಚಿತ್ರಕಲೆಗೆ ಪ್ರಾಚಿನ ಕಾಲದ ಇತಿಹಾಸವಿದೆ. ಬಹುತೇಕ ಇತಿಹಾಸಕಾರರು ಚಿತ್ರಕಲೆ ಆಧರಿಸಿ ಭಾಷೆ ಅರ್ಥಮಾಡಿಕೊಂಡಿದ್ದಾರೆ ಎಂದು ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಬಿ.ಕೆ. ಶ್ರೀದೇವಿ ಅಭಿಪ್ರಾಯ ವ್ಯಕ್ತಪಡಿಸಿದರು.

ಪ್ರವಾಸೋದ್ಯಮ ಇಲಾಖೆ ಆರ್ಟ್​ ಗ್ಯಾಲರಿಯಲ್ಲಿ ಲಲಿತಕಲಾ ಆಕಾಡೆಮಿ, ರಾಜ ರಾಜೇಶ್ವರಿ ಮಹಿಳಾ ಕಲಾ ಸಂದ ಆಶ್ರಯದಲ್ಲಿ ವಿದ್ಯಾರ್ಥಿಗಳಿಗಾಗಿ ಮಂಗಳವಾರ ಹಮ್ಮಿಕೊಂಡಿದ್ದ ಒಂದು ದಿನದ ಚಿತ್ರಕಲೆ ಶಿಬಿರ "ನಿಮ್ಮೊಂದಿಗೆ ನಾವು' ಉದ್ಘಾಟಿಸಿ ಮಾತನಾಡಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯ ಹಾಸಿಂಪೀರ ವಾಲಿಕಾರ ಮಾತನಾಡಿ, ವಿಶ್ವ ಮಾನವರೆಲ್ಲ ಚಿತ್ರಕಲೆಯನ್ನು ಪ್ರೀತಿಸಿದ್ದರು. ರಾಜ ಮಹಾರಾಜರು ಚಿತ್ರಕಲೆಗಳಿಗೆ ಪ್ರಾಧ್ಯಾನತೆ ನೀಡಿದ್ದರು. ಇತ್ತೀಚೆಗೆ ಶಾಲಾ ಕಾಲೇಜುಗಳಲ್ಲಿ ಚಿತ್ರಕಲೆ ರ್ನಿಲಸುತ್ತಿರುವುದು ನೋವಿನ ಸಂಗತಿ. ಹೆಚ್ಚು ಅಂಕ ಪಡೆಯುವ ಕಡೆಗೆ ಗಮನ ನೀಡುತ್ತೇವೆ ಸಹಪಠ್ಯೇತರ ಚಟುವಟಿಕೆಗಳ ಕಡೆಗೆ ಗಮನ ಹರಿಸುತ್ತಿಲ್ಲ ಎಂದರು.

ಕನ್ನಡ ಪಾಧಿಕಾರದ ಸದಸ್ಯೆ ದಾಾಯಿಣಿ ಹುಡೇದ ಮಾತನಾಡಿ, ಚಿತ್ರಕಲೆ ಹಾಗೂ ಭಾಷೆ ಒಂದಕ್ಕೊಂದು ಪೂರಕವಾಗಿವೆ ಎಂದರು. ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ ಬಜಂತ್ರಿ ಮಾತನಾಡಿ, ದೇವರು ಎಲ್ಲರಿಗೂ ಒಂದಿಲ್ಲ ಒಂದು ಪ್ರತಿಭೆ ಕೊಟ್ಟಿರುತ್ತಾನೆ ಅದನ್ನು ಗುರುತಿಸುವ ಕೆಲಸವಾಗಬೇಕು ಎಂದರು.

ಲಲಿತಕಲಾ ಅಕಾಡೆಮಿ ಸದಸ್ಯೆರಾಜೇಶ್ವರಿ ಮೋಪಗಾರ ಪ್ರಾಸ್ತಾವಿಕ ಮಾತನಾಡಿದರು.

ಲಲಿತಾ ಬಳಗಾನೂರ, ಆನಂದ ಝಂಡೆ, ಬಸವರಾಜ ಪಾಟೀಲ, ವಿದ್ಯಾದರ ಸಾಲಿ, ಶಬ್ಬೀರ ನದಾಫ್​, ನೀಲಮ್ಮ, ವಿ.ವಿ. ಹಿರೇಮಠ. ಎನ್ನಡೆಮನಿ, ವಿಠ್ಠಲ ಬೋವಿ, ರವಿ ನಾಯಕ, ಆರತಿ ಹರಿಜನ, ಅಪ್ಪಾಜಿ ಆಕಳೆ, ಗಿರಿಜಾ ಬಿರಾದಾರ, ಮಲ್ಲಪ್ಪ ನಾಟಿಕಾರ, ಅಹಮ್ಮದ ಹುದ್ದಾರ, ಶ್ರೀಶೈಲ ಹೂಗಾರ ಉಪಸ್ಥಿತರಿದ್ದರು.

ಚಿತ್ರಕಲಾ ಶಿಕಿ ಮಂಜುಳಾ ಪ್ರಾರ್ಥಿಸಿದರು. ಬಸವರಾಜ ಜಾನೆ ಸ್ವಾಗತಿಸಿದರು. ಮಹಾದೇವಪ್ಪ ನಿರೂಪಿಸಿದರು.

ಜಿಲ್ಲೆಯ ವಿವಿಧ ತಾಲೂಕುಗಳಿಂದ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net