ಚಿತ್ರಕಲೆಯಿಂದ ಮಕ್ಕಳಿಗೆ ಉತ್ತಮ ಭವಿಷ್ಯ

Oplus_131072
Oplus_131072
Published on

ಹುಬ್ಬಳ್ಳಿ: ನಗರದ ವಿವೇಕಾನಂದ ಕಾಲನಿಯ ಚಿನ್ಮಯ ವಿದ್ಯಾಲಯದಲ್ಲಿ ಚಿನ್ಮಯ ಕೃತಿ ಎಂಬ ಮಕ್ಕಳ ಚಿತ್ರಕಲಾ ಪ್ರದರ್ಶನ ಶನಿವಾರ ಏರ್ಪಡಿಸಲಾಗಿತ್ತು.

ಜಾನಪದ ವಿಶ್ವವಿದ್ಯಾಲಯದ ಉಪನ್ಯಾಸಕ ಡಾ. ಶಂಕರಪ್ಪ ಕುಂದಗೋಳ ಉದ್ಘಾಟಿಸಿ ಮಾತನಾಡಿ, ಚಿತ್ರಕಲೆಯಲ್ಲಿ ಮಕ್ಕಳಿಗೆ ಉತ್ತಮ ಭವಿಷ್ಯವಿದೆ. ಪಠ್ಯದ ಜತೆಗೆ ಮಕ್ಕಳಿಗೆ ಚಿತ್ರಕಲೆ ಅಭ್ಯಾಸ ಮಾಡಿಸಬೇಕು ಎಂದು ಸಲಹೆ ನೀಡಿದರು.

ಮಂಡಲ ಆರ್ಟ್, ನೆಸ್ ನಿಸರ್ಗದ ಚಿತ್ರ, ಮರಳಿನ ಆರ್ಟ್ ಸೇರಿ ವಿವಿಧ ಕಲೆಯನ್ನು 300ಕ್ಕೂ ಹೆಚ್ಚು ಮಕ್ಕಳು ಪ್ರದರ್ಶನ ಮಾಡಿದರು.

ಸಂಸ್ಥೆಯ ಟ್ರಸ್ಟಿ ಆರ್.ಎನ್. ಮೂರ್ತಿ, ಪ್ರಾಚಾರ್ಯೆ ನೀತಾ ಹೆಗಡೆ, ಅಂಜಲಿ ಗುಡಿ, ಆಡಳಿತಾಧಿಕಾರಿ ವಿಶ್ವನಾಥ ರಾನಡೆ, ಶಿಕ್ಷಕರಾದ ರಾಜಶೇಖರ ಮಾಣಿಕ್ಯಂ, ಪೂಜಾ ಹೂಗಾರ, ಸೋನಿ ಕಟ್ಟಿಮನಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net