ವಿಜಯವಾಣಿಯಿಂದ ಚಿತ್ರಕಲೆ ಸ್ಪರ್ಧೆ * ಮೂರು ವಿದ್ಯಾರ್ಥಿಗಳಿಗೆ ನಗದು ಬಹುಮಾನ ವಿತರಣೆ *ಪರಿಸರ ಜಾಗೃತಿ ಯುವಜನರಲ್ಲಿ ಅವಶ್ಯಕ-ಸಂಗಮೇಶ್ವರ

raichur
raichur
Published on

ರಾಯಚೂರು ಪರಿಸರ ದಿನಾಚರಣೆ ಮಾಡುವುದು ಕೇವಲ ಒಂದು ದಿನಕ್ಕೆ ಸೀಮಿತವಾಗದೆ ಪ್ರತಿ ದಿನವೂ ತಮ್ಮ ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಚವಾಡಬೇಕೆಂದು ಮಹಾನಗರ ಪಾಲಿಕೆಯ ಕಂದಾಯ ಅಧಿಕಾರಿ ಸಂಗಮೇಶ್ವರ ಹೇಳಿದರು.

ನಗರದ ಟ್ಯಾಗೋರ ಶಿಕ್ಷಣ ಸಂಸ್ಥೆಯ ಬಿಇಡಿ ಕಾಲೇಜಿನಲ್ಲಿ ವಿಜಯವಾಣಿ ದಿನ ಪತ್ರಿಕೆ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಾಗೂ ಟ್ಯಾಗೋರ ಶಿಕ್ಷಣ ವತಿಯಿಂದ ಗುರುವಾರ ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಪ್ಲಾಸ್ಟಿಕ್ ಮುಕ್ತ ಪರಿಸರ ಕುರಿತು ಚಿತ್ರಕಲೆ ಸ್ಫರ್ಧೆ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದರು, ಪ್ಲಾಸ್ಟಿಕ್ ನಿಷೇಧ ಕುರಿತು ಯುವ ಜನರಲ್ಲಿ ಜಾಗೃತಿಯಾಗಬೇಕಿದೆ. ವಿಜಯವಾಣಿ ದಿನ ಪತ್ರಿಕೆಯವರು ಪ್ರತಿ ವರ್ಷ ಪರಿಸರ ಜಾಗೃತಿ ಮೂಡಿಸುತ್ತಿದ್ದಾರೆ.

ಪರಿಸರ ಮಾಲಿನ್ಯವನ್ನು ನಾವು ತಡೆಯಬೇಕಿದೆ,. ಕಳೆದ 17 ವರ್ಷದಿಂದ ಕಂದಕವನ್ನು ಸ್ಚಚ್ಚತೆ ಮಾಡಿರಲಿಲ್ಲ. ಆದರೆ ಪಾಲಿಕೆಯಿಂದ ಕಳೆದ ಒಂದು ವಾರದಿಂದ ಸ್ವಚ್ಚತೆ ಮಾಡಲಾಗುತ್ತಿದೆ. ಒಂದು ದಿನಕ್ಕೆ ಕಂದಕದಿಂದ 20 ರಿಂದ 25 ಟನ್ ಪ್ಲಾಸ್ಟಿಕ್ ಸಂಗ್ರಹವಾಗುತ್ತಿರುವುದು ನೋಡಿದರೆ ಭಯವಾಗುತ್ತಿದೆ. ನಗರವನ್ನು ಸ್ವಚ್ಚತೆಯಾಗಿ ಕಾಪಡುಕೊಳ್ಳುತ್ತಿರುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಿದೆ. ಆದರಿಂದ ಇಂದಿನ ವಿದ್ಯಾರ್ಥಿಗಳು ಪ್ರತಿಜ್ಞೆ ಮಾಡಿ ಪ್ಲಾಸ್ಟಿಕ್ ಬಳಕೆ ನಿಷೇದ ಮಾಡಬೇಕು ಎಂದರು.

ಟ್ಯಾಗೋರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಆರ್.ಕೆ.ಅಮರೇಶ ಮಾತನಾಡಿ, ಇತ್ತಿಚ್ಚಿನ ದಿನಗಳಲ್ಲಿ ಮಾಧ್ಯಮ ಕೇವಲ ಟಿಆರ್‌ಪಿಗಾಗಿ ಕೆಲಸ ಮಾಡುತ್ತಿವೆ. ಆದರೆ ವಿಜಯವಾಣಿ ಪತ್ರಿಕೆ ಸಮಾಜಸೇವೆ ಜತೆಗೆ ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸುವ ಕೆಲಸವಾಗುತ್ತಿದೆ. ಪರಿಸರ ಜಾಗೃತಿ ಮಾಡಿ ಎಂದು ಎಲ್ಲರು ಹೇಳುತ್ತಾರೆ. ಆದರೆ ಪಾಲನೆ ಮಾಡುವುದಿಲ್ಲ. ಆದರೆ ಎಲ್ಲರು ಪರಿಸರ ಕಾಳಜಿ ವಹಿಸಬೇಕು.ಪ್ಲಾಸ್ಟಿಕ್ ನಿಷೇಧಕ್ಕೆ ಕೈ ಜೋಡಿಸಬೇಕು. ಪಾಲಿಕೆಯಿಂದ ಕಂದಕ ಸ್ವಚ್ಚತೆ ಮಾಡಲಾಗುತ್ತಿದೆ. ಇದಕ್ಕೆ ನಮ್ಮ ಶಿಕ್ಷಣ ಸಂಸ್ಥೆಯು ಕೈಜೋಡಿಸಿ ನಗರ ಸ್ಚಚ್ಚತೆಗೆ ಮುಂದಾಗುವುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಚೇರ್‌ಮೇನ್ ಡಾ.ಪಿ.ಬಸನಗೌಡ ಪಾಟೀಲ್ ಮಾತನಾಡಿ, ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಚತೆಯಾಗಬೇಕಾದರೆ ನಾವು ಶೌಚಾಲಯವನ್ನು ಬಳಸಬೇಕು. ಆದರೆ ಗ್ರಾಮೀಣ ಹಾಗೂ ಕೆಲ ನಗರದ ಪ್ರದೇಶದಲ್ಲಿ ಬಯಲು ಶೌಚ ಮಾಡುತ್ತಿರುವುದರಿಂದ ಇದುವರೆಗೆ ಪರಿಸರ ಸ್ವಚ್ಚವಾಗುವುದಿಲ್ಲ. ಇದರಿಂದ ಜನರಲ್ಲಿ ರೋಗದ ಲಕ್ಷಣಗಳು ಹೆಚ್ಚು ಕಂಡುಬರುತ್ತಿವೆ. ಆದರಿಂದ ಪ್ರತಿಯೊಬ್ಬರು ಶೌಚಾಲಯವನ್ನು ಬಳಸಿ ಪರಿಸರವನ್ನು ಕಾಪಡಬೇಕು ಎಂದರು.

ಈ ಸಂದರ್ಭದಲ್ಲಿ ಟ್ಯಾಗೋರ್ ಕಾಲೇಜಿನ ಆಡಳಿತ ಮಂಡಳಿ ಸದಸ್ಯ ಕಲ್ಲಯ್ಯ ಸ್ವಾಮಿ, ಶಿಕ್ಷಣ ಪ್ರೇಮಿ ಹಫಿಜುಲ್ಲ ,ಶಿಕ್ಷಕ ಮಲ್ಲಿಕಾರ್ಜುನ ಸೇರಿ ವಿವಿಧ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.

ಮೂರು ಜನ ವಿದ್ಯಾರ್ಥಿಗಳಿಗೆ ಬಹುಮಾನ

ಚಿತ್ರಕಲೆ ಸ್ಪರ್ಧೆಯಲ್ಲಿ ಒಟ್ಟು 200 ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿಜೇತರಿಗೆ ರೇಡ್ ಕ್ರಾಸ್ ಸಂಸ್ಥೆಯ ರಾಜ್ಯ ನಿರ್ದೇಶಕ ಎಸ್.ವಿಜಯಕುಮಾರ ಪಾಟೀಲ್ ಶಾವಂತಗೇರಾ ಅವರು ಪ್ರಥಮ ಸ್ಥಾನ ಪಡೆದ ಬಾಲಕಿಯರ ಶಾಲೆಯ ವಿದ್ಯಾರ್ಥಿನಿ ಸಹನಾಜ್ ಬೇಗಂ 3 ಸಾವಿರ ನಗದು ಬಹುಮಾನ ನೀಡಿದರು.

ಅದರಂತೆ ಸೇಂಟ್ ಮೇರಿ ಕಾನ್ವೆಂಟ್ ಶಾಲೆಯ ಝಿಬಾ ದ್ವೀತಿಯ ಸ್ಥಾನಕ್ಕೆ 2 ಸಾವಿರ ನಗದು ಬಹುಮಾನ . ಬಸವಶ್ರೀ ಶಾಲೆಯ ಸಮಂತಾ ತೃತೀಯ ಸ್ಥಾನಕ್ಕೆ 1 ಸಾವಿರ ಬಹುಮಾನ ಹಾಗೂ ಉಳಿದಂತೆ ಫಾತೀಮಾ ಡಿಟಿಜೆ ಶಾಲೆಯ ಉಜಮಾ, ಬಾಲಕಿಯ ಶಾಲೆಯ ಶ್ವೇತಾ,ಬಸವ ಶ್ರೀ ಶಾಲೆಯ ಮೌನೇಶ ಮತ್ತು ಸರ್ವೋದಯ ಶಾಲೆಯ ಎನ್. ಕೀರ್ತನಾ ವರಿಗೆ ಸಮಧಾನಕರ ಬಹುಮಾನ ವಿತರಣೆ ಮಾಡಿದರು.

ಕಾರ್ಯಕ್ರಮಕ್ಕೆ ವಿನಯ ಗುರೂಜಿ ಭೇಟಿ

ನಗರದ ಟ್ಯಾಗೋರ್ ಶಾಲೆಯ ಚಿತ್ರಕಲೆ ಸ್ಪರ್ಧೆ ಕಾರ್ಯಕ್ರಮದಲ್ಲಿ ಗೌರಿಗದ್ದೆ ಆಶ್ರಮದ ಶ್ರೀ ವಿನಯ ಗುರೂಜಿ ದಿಡೀರ್ ಭೇಟಿ ನೀಡಿ. ವಿಜಯವಾಣಿ ಪತ್ರಿಕೆಯ ಪರಿಸರ ಕಾಳಜಿ ಬಗ್ಗೆ ಶ್ಲಾಘನೇ ವ್ಯಕ್ತಪಡಿಸಿದರು.

ವಿಜಯವಾಣಿ ಪತ್ರಿಕೆಯಿಂದ ಪರಿಸರ ಜಾಗೃತಿಗಾಗಿ ಒಂದೊಳ್ಳೆ ಕಾರ್ಯಕ್ರಮ ಹಮ್ಮಿಕೊಂಡಿರುವುದು ವಿಶೇಷವಾಗಿದೆ. ವಿದ್ಯಾರ್ಥಿಗಳಿಗೆ ಪರಿಸರದ ಜಾಗೃತಿ ಅವಶ್ಯಕವಾಗಿದೆ. ಚಿತ್ರಕಲಾ ಸ್ಫರ್ದೆಯಲ್ಲಿ ಪ್ರತಮ ಸ್ಥಾನ ಪಡೆದಿದ್ದಕ್ಕೆ ಖುಷಿಯಾಗಿದೆ.

ಸಹನಾಜ್ ಬೇಗಂ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ.

ಪರಿಸರದ ಜಾಗೃತಿಗಾಗಿ ವಿಜಯವಾಣಿ ವಿದ್ಯಾರ್ಥಿಗಳಲ್ಲಿ ಆಸಕ್ತಿ ಹೆಚ್ಚಿಸಲು ಚಿತ್ರಕಲಾ ಸ್ಪರ್ಧೆ ಆಯೋಜನೆ ಮಾಡಿದ್ದರು. ನಾನು ಹಾಗೂ ನಮ್ಮ ಶಾಲೆಯ ಅನೇಕ ವಿದ್ಯಾರ್ಥಿಗಳು ಭಾಗವಹಿಸಿ ಬಹುಮಾನವನ್ನು ಪಡೆದಿದ್ದೇವೆ. ಮುಂದೆ ಪರಿಸರ ಜಾಗೃತಿ ನಮ್ಮ ಶಾಲೆಯಿಂದ ಆರಂಭ ಮಾಡುತ್ತೇವೆ.

ಝಿಭಾ ದ್ವೀತಿಯ ಸ್ಥಾನ ಪಡೆದ ವಿದ್ಯಾರ್ಥಿನಿ

ಜಿಲ್ಲೆಯಲ್ಲಿ ಪರಿಸರದ ಜಾಗೃತಿ ಅವಶ್ಯವಾಗಿದ್ದು,ವಿಜಯವಾಣಿ ಪತ್ರಿಕೆ ಇ ಕಾರ್ಯ ಮಾಡುತ್ತಿದೆ. ಪ್ಲಾಸ್ಟಿಕ್ ಮುಕ್ತ ಪರಿಸರ ಕುರಿತು ಚಿತ್ರಕಲಾ ಸ್ಪರ್ಧೆ ಆಯೋಜನೆ ಮಾಡಲಾಗಿದ್ದು, ಗೆಳೆಯರ ಜತೆಗೂಡಿ ಸ್ಫರ್ಧೆಯಲ್ಲಿ ಭಾಗವಹಿಸಿ ಮೂರನೇ ಸ್ಥಾನ ಪಡೆದಿರುವೆ. ಖುಷಿ ತಂದಿದೆ.

ವಿದ್ಯಾರ್ಥಿಗಳಿಗೆ ಪರಿಸರದ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿಜಯವಾಣಿ ಪತ್ರಿಕೆಯು ಕಳೆದ ಸುಮಾರು ವರ್ಷಗಳಿಂದ ವಿವಿಧ ಕಾರ್ಯಕ್ರಮಗಳನ್ನು ಮಾಡುತ್ತಿದೆ. ವಿಜಯವಾಣಿಯ ಜನಪರ ಕಾಳಜಿ ಶ್ಲಾಘನೀಯ. ಹಫೀಜುಲ್ಲ ಶಿಕ್ಷಣ ಪ್ರೇಮಿ ರಾಯಚೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net