23 ರಂದು ಪೇಂಟಿಂಗ್​ ಸ್ಪರ್ಧೆ

Painting11
Published on

ಸಿದ್ದಗಂಗಾ ವೈದ್ಯಕಿಯ ಮಹಾವಿದ್ಯಾಲಯ, ವಿಜಯವಾಣಿ ಸಹಯೋಗದಲ್ಲಿ

200ಕ್ಕು ಹೆಚ್ಚು ಮಕ್ಕಳ ನೋಂದಣಿ

ತುಮಕೂರು: ಸಿದ್ದಗಂಗಾ ವೈದ್ಯಕಿಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ ಹಾಗೂ ರಾಜ್ಯದ ನಂ.1 ದಿನಪತ್ರಿಕೆ ವಿಜಯವಾಣಿ ಸಹಯೋಗದಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಆಯೋಜಿಸಿರುವ ಪೇಂಟಿಂಗ್​ ಸ್ಪರ್ಧೆಗೆ 200ಕ್ಕು ಹೆಚ್ಚು ಮಕ್ಕಳು ನೋಂದಣಿ ಮಾಡಿಕೊಂಡಿದ್ದಾರೆ. ನ.23, ಶನಿವಾರ ಬೆಳಗ್ಗೆ 9.30 ರಿಂದ ಮಧ್ಯಾಹ್ನ 1 ರವರೆಗೆ ಚಿತ್ರಕಲಾ ಸ್ಪರ್ಧೆಯನ್ನು 2 ವಿಭಾಗಗಳಲ್ಲಿ ಏರ್ಪಡಿಸಲಾಗಿದೆ.

ನಗರದ ಬಿ.ಎಚ್​.ರಸ್ತೆಯ ಸಿದ್ದಗಂಗಾ ವೈದ್ಯಕಿಯ ಮಹಾವಿದ್ಯಾಲಯದ ಆವರಣದಲ್ಲಿ ಬೆಳಗ್ಗೆ 10.15ಕ್ಕೆ ಮಕ್ಕಳ ಪೇಂಟಿಂಗ್​ ಸ್ಪರ್ಧೆಗೆ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕೆ.ವಿ.ಅಶೋಕ್​, ಮಹಾನಗರ ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜ ಚಾಲನೆ ನೀಡಿ ಮಕ್ಕಳಿಗೆ ಶುಭಕೋರಲಿದ್ದಾರೆ. ಸಿದ್ದಗಂಗಾ ವೈದ್ಯಕಿಯ ಮಹಾವಿದ್ಯಾಲಯ ನಿರ್ದೇಶಕ ಡಾ.ಎಸ್​.ಪರಮೇಶ್​, ಕಾರ್ಯಕಾರಿಣಿ ನಿರ್ದೇಶಕ ಡಾ.ಎಸ್​.ಸಚ್ಚಿದಾನಂದ್​, ಪ್ರಾಚಾರ್ಯರಾದ ಡಾ.ಶಾಲಿನಿ, ವೈದ್ಯಕಿಯ ಮೇಲ್ವಿಚಾರಕ ಡಾ.ನಿರಂಜನಮೂರ್ತಿ, ಸಿಇಒ ಡಾ.ಸಂಜೀವ್​ ಕುಮಾರ್​, ಡಾ.ಈಶ್ವರ್​ ಮಾಕಂ, ಡಾ.ನಿಧಿ, ಡಾ.ಸುಮಂತ್​ ಉಪಸ್ಥಿತರಿರುವರು.

2 ವಿಭಾಗಗಳು: 2 ವಿಭಾಗಗಳಲ್ಲಿ ಚಿತ್ರಕಲಾ ಸ್ಪರ್ಧೆ ನಡೆಯಲಿದೆ. 5&7 ವರ್ಷದೊಳಗಿನ (ನಮ್ಮ ಹಸಿರು ಗ್ರಹ) ಹಾಗೂ 8 ರಿಂದ 12 ವರ್ಷದೊಳಗಿನ (ಆರೋಗ್ಯಕರ ಜೀವನಶೈಲಿ) ಮಕ್ಕಳಿಗೆ ಸ್ಪರ್ಧೆ ಏರ್ಪಡಿಸಲಾಗಿದೆ. ಮಕ್ಕಳು ಪೋಷಕರ ಜತೆಗೆ ಬರಬೇಕು. ಆರೋಗ್ಯದ ಜತೆಗೆ ಮಕ್ಕಳಲ್ಲಿನ ಕೌಶಲ ಪ್ರದರ್ಶನಕ್ಕು ಅವಕಾಶ ಇರಲಿದ್ದು ವಿವಿಧ ವೇಷಭೂಷಣ ತೊಟ್ಟು ಮಕ್ಕಳು ಈ ಸಂಭ್ರಮದಲ್ಲಿ ಭಾಗಿಯಾಗಬಹುದು.

ಪೇಂಟಿಂಗ್​ ಸ್ಪರ್ಧೆಯ ನಿರ್ಣಾಯಕರಾಗಿ ವಣೋರ್ದಯ ಆರ್ಟ್​ ಗ್ರೂಪ್​ ಟ್ರಸ್ಟ್​ ಸದಸ್ಯರು ಕಾರ್ಯನಿರ್ವಹಿಸಲಿದ್ದಾರೆ. ಸ್ಪರ್ಧೆಯಲ್ಲಿ ಗೆಲ್ಲುವ ಮಕ್ಕಳಿಗೆ ವಿಶೇಷ, ಆಕರ್ಷಕ ಬಹುಮಾನಗಳು ಸಹ ಇರಲಿವೆ. ಹೆಸರನ್ನು ನೋಂದಾಯಿಸಿಕೊಳ್ಳಲು, ಹೆಚ್ಚಿನ ಮಾಹಿತಿಗಾಗಿ ಮೊ: 7624981879 ಸಂಪರ್ಕಿಸಬಹುದು.

ಏನು ತರಬೇಕು?

ಡ್ರಾಯಿಂಗ್​ ಶೀಟ್​ಗಳನ್ನು ನಾವೇ ಕೊಡುತ್ತೇವೆ. ಪ್ಯಾಡ್​, ಪೆನ್ಸಿಲ್​, ಸ್ಕೆಚ್​ ಪೆನ್​, ಸ್ಕೇಲ್​ ಸೇರಿ ಇತರ ಬರವಣಿಗೆ ಸಾಮಗ್ರಿಗಳನ್ನು ಮಕ್ಕಳೇ ತರಬೇಕು. ಕೊಟ್ಟಿರುವ ಸ್ಪರ್ಧಾ ವಿಷಯ ಬಿಟ್ಟು ಬೇರೆ ಚಿತ್ರ ಬರೆಯಬಾರದು. ಆಧಾರ್​ ಕಾರ್ಡ್​/ ಮಕ್ಕಳ ವಯಸ್ಸಿನ ಪುರಾವೆ ತರಬೇಕು. ಬೆಳಗ್ಗೆ 9.30ಕ್ಕೆ ಸ್ಥಳದಲ್ಲಿ ನೋಂದಣಿ ಕೂಡ ಇರಲಿದೆ. ಭಾಗವಹಿಸುವ ಎಲ್ಲಾ ಮಕ್ಕಳಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net