ಬಾನಂ ಪ್ರೌಢಶಾಲೆಯಲ್ಲಿ ಚಿತ್ರಕಲಾ ಸ್ಪರ್ಧೆ

New Project (10)
Published on

ಮುಳ್ಳೇರಿಯ: ಮಿಲ್ಮಾ ನೇತತ್ವದಲ್ಲಿ ಬಾನಂ ಸರ್ಕಾರಿ ಪ್ರೌಢಶಾಲೆಯಲ್ಲಿ ‘ಮಾದಕ ದ್ರವ್ಯಗಳಿಗೆ ದಾಸರಾಗಬೇಡಿ, ಜೀವನದ ಮಾಲೀಕರಾಗಿರಿ’ ವಿಷಯದ ಕುರಿತು ಮಾದಕದ್ರವ್ಯ ವಿರೋಧಿ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿತ್ತು.

ಮಿಲ್ಮಾ ಕಾಸರಗೋಡು ಡೇರಿ ವ್ಯವಸ್ಥಾಪಕಿ ಸ್ವೀಟಿ ವರ್ಗೀಸ್ ಕಾರ್ಯಕ್ರಮ ಉದ್ಘಾಟಿಸಿದರು. ಪಿಟಿಎ ಅಧ್ಯಕ್ಷ ಪಿ.ಮನೋಜ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ವಾರ್ಕೆಟಿಂಗ್ ಅಧಿಕಾರಿ ಆಶಿಶ್ ಉಣ್ಣಿ, ಹಿರಿಯ ಸಹಾಯಕ ಪಿ.ಕೆ.ಬಾಲಚಂದ್ರನ್, ಸಿಬ್ಬಂದಿ ಕಾರ್ಯದರ್ಶಿ ಅನಿತಾ ಮೇಲತ್ ಮತ್ತು ಕಾರ್ಯಕ್ರಮ ಸಂಚಾಲಕರಾದ ಅನೂಪ್ ಪೆರಿಯಾಲ್ ಉಪಸ್ಥಿತರಿದ್ದರು.

ಮುಖ್ಯ ಶಿಕ್ಷಕಿ ಸಿ.ಕೋಮಲವಲ್ಲಿ ಸ್ವಾಗತಿಸಿದರು. ನೀಲೇಶ್ವರ ವಲಯ ಕ್ಷೇತ್ರ ಮೇಲ್ವಿಚಾರಕ ಕೆ.ಪ್ರಿಯೇಶ್ ವಂದಿಸಿದರು.

ರ‌್ಯಾಲಿ : ಪ್ರೌಢಶಾಲಾ ವಿಭಾಗದಲ್ಲಿ ಟಿ.ವಿ.ಅಂಜಿತಾ, ಕೆ.ಆದಿತ್ಯ, ಪಿ.ಸೌಭಾಗ್ಯಾ ಮತ್ತು ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಎಂ.ನಿವೆತ್, ಟಿ.ಕೆ.ರೇನಾ ಮೆಹ್ರಿನ್ ಮತ್ತು ಎಂ.ಗೌರಿನಂದ ಕ್ರಮವಾಗಿ ಮೊದಲ ಮೂರು ಸ್ಥಾನಗಳನ್ನು ಗೆದ್ದರು. ಮಾದಕ ದ್ರವ್ಯ ವಿರೋಧಿ ರ‌್ಯಾಲಿ ಆಯೋಜಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net