ಕಲಾಂ ಜನ್ಮದನೋತ್ಸವ ಅಂಗವಾಗಿ ಚಿತ್ರಕಲಾ ಸ್ಪರ್ಧೆ

9
Published on

ಮೈಸೂರು: ಎಪಿಜೆ ಅಬ್ದುಲ್ ಕಲಾಂ ಅವರ 95ನೇ ಜನ್ಮ ದಿನೋತ್ಸವ ಅಂಗವಾಗಿ ಟೀಂ ಮೈಸೂರು ವತಿಯಿಂದ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿತ್ತು. ಪೊಲೀಸ್‌ಆಯುಕ್ತ ಕಚೇರಿ ಮುಂಭಾಗವಿರುವ ಮಕ್ಕಳ ಉದ್ಯಾನದಲ್ಲಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ 160ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಾಂ ಜೀವನ ಕುರಿತಂತೆ ತಮ್ಮ ಕಲ್ಪನೆಯಲ್ಲಿ ಮೂಡಿಸಿದರು.

ಒಂದರಿಂದ 6ನೇ ತರಗತಿ, 7ರಿಂದ 10ನೇ ತರಗತಿ ಹಾಗೂ ಪಿಯುಸಿ ಮೇಲ್ಪಟ ವಿದ್ಯಾರ್ಥಿಗಳ ವಿಭಾಗದಲ್ಲಿ ಸ್ಪಧೆರ್ ಆಯೋಜಿಸಲಾಗಿತ್ತು. ಮೂರು ವಿಭಾಗದ ವಿಜೇತರಿಗೆ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕ ಟಿ.ಎಸ್.ಶ್ರೀವತ್ಸ ನಗದು ಹಾಗೂ ಸ್ಮರಣಿಕೆ ವಿತರಿಸಿದರು. ಟೀ ಮೈಸೂರು ತಂಡದ ಮುಖ್ಯಸ್ಥ ಗೋಕುಲ ಗೋವರ್ಧನ್, ಮುಖಂಡರಾದ ಕಿರಣ್, ಜಯರಾಮ್, ಮನೋಹರ್, ಹಿರಿಯಣ್ಣ, ರಾಮ್‌ಪ್ರಸಾದ್, ಅನಿಲ್‌ಜೈನ್, ಹರೀಶ್, ಕಮಾರ್, ನವೀನ್ ಇತರರು ಇದ್ದರು.

ಬಹುಮಾನ ವಿಜೇತರು: 1ರಿಂದ 6ನೇ ತರಗತಿ ವಿಭಾಗದಲ್ಲಿ ನಿರ್ಮಲ ಕಾನ್ವೆಂಟ್‌ನ ಸ್ನೇಹಾರ್ಚನ ಪ್ರಥಮ, ಭಾರತೀಯ ವಿದ್ಯಾಭವನ ಶಾಲೆಯ ತೀರ್ಥ ಬಿ.ಸೋನಿ ದ್ವಿತೀಯ ಹಾಗೂ ಲೀಡ್ಸ್ ಕೇಂದ್ರಿಯ ವಿದ್ಯಾಲಯದ ಜಿ.ನಮಿತ್ ತೃತೀಯ ಬಹುಮಾನ ಪಡೆದುಕೊಂಡರು.

7ರಿಂದ 10ನೇ ತರಗತಿ ವಿಭಾಗದಲ್ಲಿ ಸೋಸಲೆಯ ಆದರ್ಶ ವಿದ್ಯಾಲಯದ ವಿ.ಜಗದೀಶ್ ಪ್ರಥಮ, ಕ್ಯಾಪಿಟಲ್ ಪಬ್ಲಿಕ್ ಶಾಲೆಯ ಪಾವನಿ ದ್ವಿತೀಯ, ಎಸ್‌ಜೆಸಿಯ ಎಸ್.ಕ್ಷೀತಿ ತೃತೀಯ ಬಹುಮಾನ ತಮ್ಮದಾಗಿಸಿಕೊಂಡರು.

ಪಿಯುಸಿ ಮೇಲ್ಪಟ ವಿದ್ಯಾರ್ಥಿಗಳ ವಿಭಾಗದಲ್ಲಿ ಬಿಜಿಎಸ್ ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿನಿ ಬಿ.ತೇಜಸ್ವಿನಿ ಪ್ರಥಮ, ಕಾವಾ ಕಾಲೇಜಿನ ಕೆ.ಸುನೀಲ್ ಕುಮಾರ್ ದ್ವಿತೀಯ ಹಾಗೂ ಜಿಟಿಟಿಸಿ ಕಾಲೇಜಿನ ಎಂ.ಅಮೃತ್ ತೃತೀಯ ಬಹುಮಾನ ತಮ್ಮದಾಗಿಸಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net