ನೋವು ನಿವಾರಕ ಬಾಮ್‌ನ ಸಣ್ಣ ಡಬ್ಬಿ ಗಂಟಲಲ್ಲಿ ಸಿಲುಕಿ ಒಂಬತ್ತು ತಿಂಗಳ ಮಗು ಸಾವು

Baby Death
Published on

ಬಳ್ಳಾರಿ: ನೋವು ನಿವಾರಕ ಬಾಮ್‌ನ ಸಣ್ಣ ಡಬ್ಬಿಯೊಂದು ಒಂಬತ್ತು ತಿಂಗಳ ಮಗುವಿನ ಪ್ರಾಣಕ್ಕೇ ಕುತ್ತು ತಂದ ಘಟನೆ ವರದಿಯಾಗಿದೆ.

ಕೂಡ್ಲಿಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಸಂಡೂರು ತಾಲೂಕಿನ ನಿಡುಗುರ್ತಿ ಗ್ರಾಮದಲ್ಲಿ ಭಾರತಿ ಎಂಬ ಬಾಲಕಿ ಮನೆಯಲ್ಲಿ ಆಟವಾಡುತ್ತಿತ್ತು. ಆಗ ಮಂಚದ ಕೆಳಗೆ ಬಿದ್ದಿದ್ದ ಈ ಚಿಕ್ಕ ಡಬ್ಬಿಯನ್ನು ಮಗು ಬಾಯಲ್ಲಿಟ್ಟುಕೊಂಡಿದೆ. ಅದು ಗಂಟಲಿಗೆ ಸಿಲುಕಿದಾಗ ಚಡಪಡಿಸಿದೆ.

ಇದನ್ನು ಗಮನಿಸಿದ ಮನೆಯವರು ಆ ಡಬ್ಬಿಯನ್ನು ಮಗುವಿನ ಗಂಟಲಿನಿಂದ ತೆಗೆಯಲು ಎಷ್ಟು ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ. ಮೇಲಾಗಿ ಮಗುವಿನ ಗಂಟಲಲ್ಲಿ ರಕ್ತ ಬರತೊಡಗಿದಾಗ ಕುಟುಂಬದವರು ಗಾಬರಿಗೊಂಡರು. ಮಗುವಿನ ತಂದೆ ಕರಿಬಸಪ್ಪ ಮತ್ತು ತಾಯಿ ಕಾವ್ಯಾ ಅವರು ಕೂಡಲೆ ಕೂಡ್ಲಿಗಿ ಆಸ್ಪತ್ರೆಗೆ ಮಗುವನ್ನು ಕರೆದೊಯ್ದರು. ಆದರೆ, ಚಿಕಿತ್ಸೆ ಫಲಿಸದೆ ಮಗು ಮೃತಪಟ್ಟಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net