ಗೆದ್ದು ಬೀಗಿದ ಪೈಲ್ವಾನ್​ ಸಿಕಂದರ್​

21blh1a kusti senasat
Published on

ಗೆದ್ದು ಬೀಗಿದ ಪೈಲ್ವಾನ್​ ಸಿಕಂದರ್​

ಬೈಲಹೊಂಗಲ: ಪಟ್ಟಣದ ಶ್ರೀ ಮರಡಿ ಬಸವೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ವರ್ತಿಸಿದ್ಧ ಬಸವೇಶ್ವರ ಅರ್ಬನ್​ ಕೋ&ಆಪ್​ ಕ್ರೆಡಿಟ್​ ಸೊಸೆಟಿ ಹಾಗೂ ಜಾತ್ರಾ ಮಹೋತ್ಸವ ಕಮಿಟಿಯಿಂದ ಗುರುವಾರ ಏರ್ಪಡಿಸಿದ್ದ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿಗಳು ಕುಸ್ತಿಪ್ರೇಮಿಗಳನ್ನು ರಂಜಿಸಿದವು.

ಸಹಕಾರಿಯ ಅಧ್ಯ ಬಿ.ಎಂ. ಕುಡಸೋಮಣ್ಣವರ, ಉಪಾಧ್ಯ ಜಿ.ಎಸ್​. ಬೋಳನ್ನವರ ಮಾರ್ಗದರ್ಶನದಲ್ಲಿ ಪಟ್ಟಣದ ದೊಡ್ಡ ಕೆರೆ ಪಕ್ಕದ ಬಯಲು ಕುಸ್ತಿ ಕಣದಲ್ಲಿ ಪ್ರಮುಖ 6 ಜೋಡಿ ಸೇರಿ 25ಕ್ಕೂ ಹೆಚ್ಚು ಜಂಗಿ ನಿಕಾಲಿ ಕುಸ್ತಿ ಆಡಿದರು. ಪೈಲ್ವಾನ್​ರನ್ನು ಶಿಳ್ಳೆ, ಚಪ್ಪಾಳೆ ಮೂಲಕ ಪ್ರೇರೇಪಿಸಲಾಯಿತು. ಕಟ್ಟುಮಸ್ತಾದ ಕುಸ್ತಿಪಟುಗಳು ನೋಡುಗರನ್ನು ರೋಮಾಂಚನಗೊಳಿಸಿದರು. ಬಿರು ಬಿಸಿಲಿನ ಮಧ್ಯೆಯೇ ಆರಂಭವಾದ ಕುಸ್ತಿ ಸಂಜೆ ಆಗುತ್ತಿದ್ದಂತೆಯೇ ರಂಗು ಪಡೆಯಿತು. ಜಯಶಾಲಿ ಕುಸ್ತಿಪಟುಗಳು ಕುಣಿದು ಕುಪ್ಪಳಿಸಿದರು. 25 ಸಾವಿರಕ್ಕೂ ಹೆಚ್ಚು ಕುಸ್ತಿ ಪ್ರೇಮಿಗಳು ಸಾಯಾದರು.

ಲಿತಾಂಶ: ಮಹಾರಾಷ್ಟ್ರ ಕೇಸರಿ ಪೈಲ್ವಾನ್​ ಸಿಕಂದರ್​ ಶೇಖ್​ ಣಾರ್ಧದಲ್ಲಿ ಎತ್ತಿ ಒಗೆದು ಪಂಜಾಬದ ಭಾರತ ಕೇಸರಿ ಹಿತೇಶ ಕಾಲಾ ಅವರನ್ನು ಸೋಲಿಸಿ ಗೆಲುವಿನ ನಗೆ ಬೀರಿದರು. ಮಹಾರಾಷ್ಟ್ರ ಚಾಂಪಿಯನ್​ ಜಯ ಜಾಧವ ಜತೆ ಬೆಳಗಾವಿ ಸಂಜು ಇಂಗಳಗಿ ತೀವ್ರ ಸೆಣಸಾಟವು ಸಮಬಲಗೊಂಡಿತು. ಹೆಚ್ಚಿನ ನಿರೀೆಯುಳ್ಳ ಕಂಗ್ರಾಳಿಯ ಪಾರ್ಥ ಪಾಟೀಲ ಪೈಲ್ವಾನ್​ರು ನ್ಯಾಷನಲ್​ ಚಾಂಪಿಯನ್​ ರಾಮ ಪವಾರ ಅವರಿಗೆ ಸೋಲುಣಿಸಿದರು. ಬೆಲಹೊಂಗಲದ ಆರ್ಹಾನ ಪೈಲ್ವಾನ್​ ಓಂಕಾರ ಗೊಡಕಿ ವಿರುದ್ಧ ಜಯಿಸಿದರು.ಬೆಲಹೊಂಗಲದ ಧ್ರುವ ಪೈಲ್ವಾನ್​ ಕೊಲ್ಲಾಪುರದ ಧನಂಜಯನಿಗೆ ಸೋಲುಣಿಸಿದರು. ಅಲ್ಲದೆ ಬೆಲಹೊಂಗಲದ ಸಿದ್ದು ಪೈಲ್ವಾನ್​ ಧಾರವಾಡದ ಬಸವರಾಜನನ್ನು ಸೋಲಿಸಿದರು. ಚಿಕ್ಕಬಾಗೇವಾಡಿಯ ಶಂಕರ ಜತೆ ಅಶೋಕ ಇಂಡಿ ಸೆಣಸಾಟ ಮನರಂಜನೆ ನೀಡಿ ಸಮಬಲವಾಯಿತು.

ಶಾಸಕ ಮಹಾಂತೇಶ ಕೌಜಲಗಿ ಜನರೊಂದಿಗೆ ಕುಸ್ತಿ ವೀಸಿದರು. ವೇದಮೂರ್ತಿ ಮಹಾಂತಯ್ಯ ಶಾಸ್ತ್ರೀ ಆರಾದ್ರಿಮಠ, ಸಣ್ಣಬಸಪ್ಪ ಕುಡಸೋಮಣ್ಣವರ, ಬಾಬು ಕುಡಸೋಮಣ್ಣವರ, ರಾಮಲಿಂಗ ಕುಡಸೋಮಣ್ಣವರ ಚಾಲನೆ ನೀಡಿದರು. ಶಂಕರೆಪ್ಪ ತುರಮರಿ, ಚನ್ನಪ್ಪ ಬೆಟಗೇರಿ, ಮಲ್ಲಿಕಾರ್ಜುನ ಮೊರಬದ, ಶಿವಬಸು ಕುಡಸೋಮಣ್ಣವರ, ಶಂಕರೆಪ್ಪ ಕಡಕೋಳ, ಅಶೋಕ ಮತ್ತಿಕೊಪ್ಪ, ಉಳವಪ್ಪ ಉಪ್ಪಿನ, ವೀರಣ್ಣ ಸಾಲಿಮಠ, ಸುನೀಲ ವಳಸಂಗ, ಶಿವು ಬೆಳಗಾಂವಿ, ದುಂಡಪ್ಪ ತುರಮರಿ, ಅಬ್ದುಲ್​ ರೆಹಮಾನ್​ ನಂದಗಡ್​, ಕಾರ್ಯದರ್ಶಿ ಮಲ್ಲಿಕಾರ್ಜುನ ಗೌರಿ ಇತರರು ಇದ್ದರು. ನಿವತ್ತ ಶಿಕ ದುಂಡಪ್ಪ ಅಕ್ಕಿ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net